ಮಂಗಳೂರು: ಇವತ್ತು ಕರ್ನಾಟಕ ಎನ್ ಎಸ್ ಯು ಐ ವತಿಯಿಂದ "ಕ್ಯಾಂಪಸ್ ಗೇಟ್" ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದೇವೆ ಎಂದು ಎನ್ ಎಸ್ ಯು ಐ ರಾಜ್ಯಾಧ್ಯಕ್ಷ ಕೀರ್ತಿ ಗಣೇಶ್ ಹೇಳಿದರು. ಈ ಒಂದು ಕಾರ್ಯಕ್ರಮ ಮುಖ್ಯ ಉದ್ದೇಶ ವಿದ್ಯಾರ್ಥಿಗಳಿಗೆ ಹಲವಾರು ಸಮಸ್ಯೆಗಳು ಉಂಟಾಗುತ್ತಿದೆ. ವಿದ್ಯಾರ್ಥಿ ಜೀವನದಲ್ಲಿ ಹಲವಾರು ಸಮಸ್ಯೆಗಳು ಇವತ್ತು ವಿದ್ಯಾರ್ಥಿಗಳು ಅನುಭವಿಸುತ್ತಿದ್ದಾರೆ. ಅದರಿಂದಾಗಿ ಆ ಒಂದು ಚೈನ್ ಲಿಂಕ್ ಡಿಫರೆನ್ಸ್ ಇಂದ ಬಹಳಷ್ಟು ವಿದ್ಯಾರ್ಥಿಗಳಿಗೆ ಇವತ್ತು ಸಮಸ್ಯೆ ಉಂಟಾಗುತ್ತದೆ. ನಮ್ಮ ಕಾರ್ಯಕ್ರಮದ ಉದ್ದೇಶ ವಿದ್ಯಾರ್ಥಿಗಳಿಗೆ ಯಾವ ರೀತಿ ಸಮಸ್ಯೆ ಇದೆ ಅದನ್ನ ಅವರು ಹಂಚಿಕೊಂಡಾಗ ಅದು ಯಾವ ಮಟ್ಟದಲ್ಲಿ ಇದೆ ಎಂದು ಪತ್ತೆ ಮಾಡಿ ಅವರಿಗೆ ಸಹಾಯ ಮಾಡುತ್ತೇವೆ. ಇದು ಒಂದು ಪ್ರಾಮಾಣಿಕ ಕೆಲಸ ನಾವು ಮಾಡುತ್ತೇವೆ ಎಂದರು. ಈ ಕಾರ್ಯಕ್ರಮಕ್ಕೆ ಇವತ್ತಿನಿಂದ ಮಂಗಳೂರಿನಲ್ಲಿ ಚಾಲನೆ ನೀಡಲಾಗಿದೆ. ಸುಹಾನ್ ಆಳ್ವಾ ಅವರ ನೇತೃತ್ವದಲ್ಲಿ ಇವತ್ತು ಈ ಕಾರ್ಯಕ್ರಮ ಸಕ್ರಿಯವಾಗಿ ನಡೆಯುತ್ತದೆ ಎಂದರು