image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಇರಾನ್​ ಅಧ್ಯಕ್ಷ ಪೆಜೆಶ್ಕಿಯಾನ್​ ಮೊದಲ ವಿದೇಶ ಪ್ರವಾಸ ಇರಾಕ್​ಗೆ

ಇರಾನ್​ ಅಧ್ಯಕ್ಷ ಪೆಜೆಶ್ಕಿಯಾನ್​ ಮೊದಲ ವಿದೇಶ ಪ್ರವಾಸ ಇರಾಕ್​ಗೆ

ಟೆಹ್ರಾನ್: ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅವರು ಬುಧವಾರ ಇರಾಕ್ಗೆ ಭೇಟಿ ನೀಡಲಿದ್ದಾರೆ. ಟೆಹ್ರಾನ್ನಿಂದ ಇರಾಕ್ ರಾಜಧಾನಿ ಬಾಗ್ದಾದ್ಗೆ ಅವರು ತೆರಳಲಿದ್ದಾರೆ. ಜುಲೈನಲ್ಲಿ ಅಧ್ಯಕ್ಷರಾಗಿ ವಹಿಸಿಕೊಂಡ ನಂತರ ಇದು ಅವರ ಮೊದಲ ವಿದೇಶ ಪ್ರವಾಸವಾಗಿದೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ.

ಭೇಟಿಯ ಸಮಯದಲ್ಲಿ, ಪೆಜೆಶ್ಕಿಯಾನ್ ಉನ್ನತ ಶ್ರೇಣಿಯ ಇರಾಕ್ ಅಧಿಕಾರಿಗಳೊಂದಿಗೆ ಸಭೆಗಳನ್ನು ನಡೆಸುವ ನಿರೀಕ್ಷೆಯಿದೆ. ಹಲವಾರು ಸಹಕಾರ ಒಪ್ಪಂದಗಳು ಮತ್ತು ರಕ್ಷಣಾ ಒಪ್ಪಂದಗಳಿಗೆ ಸಹಿ ಹಾಕುವ ನಿರೀಕ್ಷೆಯಿದೆ ಎಂದು ಇರಾನ್ ಅಧಿಕೃತ ಸುದ್ದಿ ಸಂಸ್ಥೆ ಐಆರ್ಎನ್ಎಯನ್ನು ಉಲ್ಲೇಖಿಸಿ ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಇರಾಕ್ ಪ್ರಧಾನಿ ಮೊಹಮ್ಮದ್ ಶಿಯಾ ಅಲ್-ಸುಡಾನಿ ಅವರ ಆಹ್ವಾನದ ಮೇರೆಗೆ ಪ್ರವಾಸ ಕೈಗೊಳ್ಳಲಾಗಿದೆ ಮತ್ತು ಪೆಜೆಶ್ಕಿಯಾನ್ ಉನ್ನತ ಮಟ್ಟದ ನಿಯೋಗದ ನೇತೃತ್ವ ವಹಿಸಲಿದ್ದಾರೆ ಎಂದು ಇರಾಕ್​​ನಲ್ಲಿರುವ ಇರಾನಿನ ರಾಯಭಾರಿ ಮೊಹಮ್ಮದ್-ಕಾಜೆಮ್ ಅಲ್- ಸಾದಿಕ್ ಐಆರ್ಎನ್ಎಗೆ ತಿಳಿಸಿದ್ದಾರೆ.

ಭೇಟಿಯು ಇರಾಕ್​​ನೊಂದಿಗಿನ ಸಂಬಂಧವನ್ನು ಬಲಪಡಿಸುವ ಮತ್ತು ಗಡಿ ಗುರುತಿಸುವಿಕೆಯಂತಹ ಸಮಸ್ಯೆಗಳನ್ನು ಪರಿಹರಿಸುವ ಗುರಿಯನ್ನು ಹೊಂದಿದೆ ಎಂದು ಇರಾನ್​​ ಸಂಸದೀಯ ರಾಷ್ಟ್ರೀಯ ಭದ್ರತೆ ಮತ್ತು ವಿದೇಶಾಂಗ ನೀತಿ ಸಮಿತಿಯ ಸದಸ್ಯ ಮೊಹಮ್ಮದ್-ಮೆಹ್ದಿ ಶಹರಿಯಾರಿ ಹೇಳಿದ್ದಾರೆ.

Category
ಕರಾವಳಿ ತರಂಗಿಣಿ