ಪ್ರೆಸಿಡೆನ್ಸಿ ಪಿ ಯು ಕಾಲೇಜು ವತಿಯಿಂದ ಜಿಲ್ಲಾ ಮಟ್ಟದ ಬಾಸ್ಕೆಟ್ ಬಾಲ್ ಪಂದ್ಯ ಮತ್ತು ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟವನ್ನು ಸೆಪ್ಟೆಂಬರ್ 12ರಂದು ಆಯೋಜಿಸಲಾಗಿದೆ ಎಂದು ಸಂಸ್ಥೆಯ ಮಾರ್ಕೆಟಿಂಗ್ ಮ್ಯಾನೇಜರ್ ಜಗನ್ನಾಥ್ ಶೆಟ್ಟಿ ನಗರದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಈಗಾಗಲೇ ಏಳುತಂಡಗಳು ಹೆಸರು ನೊಂದಾಯಿಸಿಕೊಂಡಿದ್ದು, 45 ಕಾಲೇಜುಗಳು ಭಾಗವಹಿಸುವ ನಿರೀಕ್ಷೆ ಇದೆ. ಭಾಗವಹಿಸುವ ಕ್ರಿಡಾಳುಗಳಿಗೆ ಬೈತುರ್ಲಿಯಿಂದ ವಾಹನ ವ್ಯವಸ್ಥೆ ಮಾಡಲಾಗಿದೆ.
ಪಂದ್ಯಾವಳಿಯ ಉದ್ಘಾಟನೆಯನ್ನು ಡಿಡಿಪಿಯ ಜಯಣ್ಣ ಸಿ ಡಿ ನೆರವೇರಿಸಲಿದ್ದು, ಮುಖ್ಯ ಅತಿಥಿಗಳಾಗಿ ಡಾ. ಶರತ್ ಕುಮಾರ್ ಶೆಟ್ಟಿ ಆರ್ತೊಡೆಂಟಿಸ್ಟ್, ಶಿವಕುಮಾರ್ ಕೆ ಆರ್ ಇನ್ಸ್ಪೆಪೆಕ್ಟರ್ ವಾಮಂಜೂರ್ ಪೊಲೀಸ್ ಸ್ಟೇಷನ್, ಅರುಣ್ ಕುಮಾರ್ ಸಬ್ ಇನ್ಸ್‌ಪೆಕ್ಟರ್, ಅಬುಬಕ್ಕರ್, ಪಂಚಾಯತ್ ಡೆವೆಲಪ್ಮೆಂಟ್ ಆಫೀಸರ್, ಶೈಲಾ ಸಾಲ್ದಾನಾ ಪ್ರಿನ್ಸಿಪಾಲ್ ಆಗಮಿಸಲಿದ್ದಾರೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಪ್ರತಿಭಾ ಚೇತನ್, ಅಕ್ಷಿತಾ ಡಿ, ತುಷಾರ್ ಮತ್ತು ವರ್ಷಾ ಉಪಸ್ಥಿತರಿದ್ದರು.