image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಅಹಮದಾಬಾದ್ ನಲ್ಲಿ ವಿಮಾನ ಪತನ: 242 ಪ್ರಯಾಣಿಕರ ದುರಂತ ಅಂತ್ಯ

ಅಹಮದಾಬಾದ್ ನಲ್ಲಿ ವಿಮಾನ ಪತನ: 242 ಪ್ರಯಾಣಿಕರ ದುರಂತ ಅಂತ್ಯ

ಅಹಮದಾಬಾದ್: ಅಹಮದಾಬಾದ್ ವಿಮಾನ ನಿಲ್ದಾಣದದಿಂದ (ಇಂದು) ಮಧ್ಯಾಹ್ನ ಲಂಡನ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ ಟೇಕ್ ಆಫ್ ಆದ ಕೆಲವೇ ಸಮಯದ ನಂತರ ಅಪಘಾತಕ್ಕೀಡಾಗಿದೆ.

ಅಹಮದಾಬಾದ್‌ನಿಂದ 242 ಪ್ರಯಾಣಿಕರಿದ್ದ ಏರ್ ಇಂಡಿಯಾ ವಿಮಾನ ಅಪಘಾತಕ್ಕೀಡಾಗಿದೆ ಎಂದು ರಾಜ್ಯ ಪೊಲೀಸ್‌ ನಿಯಂತ್ರಣ ಕೊಠಡಿ ದೃಢಪಡಿಸಿದೆ. ಬೋಯಿಂಗ್ 787-8 ಗ್ರೀಮ್‌ಲೈನರ್ ವಿಮಾನವು 230 ಪ್ರಯಾಣಿಕರು ಮತ್ತು 12 ಸಿಬ್ಬಂದಿ ಸೇರಿದಂತೆ 242 ಜನರನ್ನು ಹೊತ್ತೊಯ್ದಿತ್ತು.

ವಿಮಾನವು ಮೇಘನಿನಗರ ಬಳಿ ಪತನಗೊಂಡಿದೆ. ವಿಮಾನ ಅಪಘಾತಕ್ಕೀಡಾದ ಸ್ಥಳವು ವಸತಿ ಪ್ರದೇಶವಾಗಿದ್ದು, ಸಾವು ನೋವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಆ ಪ್ರದೇಶಕ್ಕೆ ಹೋಗುವ ಎಲ್ಲಾ ರಸ್ತೆಗಳನ್ನು ಮುಚ್ಚಲಾಗಿದೆ.

ತುರ್ತು ಪ್ರತಿಕ್ರಿಯೆ ತಂಡಗಳು ತಕ್ಷಣ ಸ್ಥಳಕ್ಕೆ ಧಾವಿಸಿವೆ. ವಿಮಾನ ನಿಲ್ದಾಣ ಪ್ರದೇಶದಿಂದ ಕೆಲವು ಜನರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ವಿಮಾನದಲ್ಲಿದ್ದ ಯಾರೊಬ್ಬರೂ ಬದುಕಿಲ್ಲ ಎನ್ನುವುದನ್ನು ಅಹಮದಾಬಾದ್ ಕಮಿಷನರ್ ದೃಡ ಪಡಿಸಿದ್ದು, ಹಾಸ್ಟೆಲ್ ಕಟ್ಟಡದಲ್ಲಿರುವವರ ಬಗ್ಗೆ ಮಾಹಿತಿ ಇನ್ನಷ್ಟೇ ಬರಬೇಕಾಗಿದೆ.

Category
ಕರಾವಳಿ ತರಂಗಿಣಿ