image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಪೊಲೀಸ್‌ ಇಲಾಖೆ ರಾಜ್ಯ ಕಾಂಗ್ರೆಸ್‌ ಸರಕಾರದ ಕೈಗೊಂಬೆಯಾಗಿ ಕೆಲಸಮಾಡುತ್ತಿದೆ: ಹಿಂದೂ ಕಾರ್ಯಕರ್ತರ ಜೊತೆ ನಾವಿದ್ದೇವೆ-ಬಿಜೆಪಿ ನಿಯೋಗ

ಪೊಲೀಸ್‌ ಇಲಾಖೆ ರಾಜ್ಯ ಕಾಂಗ್ರೆಸ್‌ ಸರಕಾರದ ಕೈಗೊಂಬೆಯಾಗಿ ಕೆಲಸಮಾಡುತ್ತಿದೆ: ಹಿಂದೂ ಕಾರ್ಯಕರ್ತರ ಜೊತೆ ನಾವಿದ್ದೇವೆ-ಬಿಜೆಪಿ ನಿಯೋಗ

ಮಂಗಳೂರು : ಶಾಸಕ ಅರವಿಂದ್ ಬೆಲ್ಲದ್, ಛಲವಾದಿ ನಾರಾಯಣ ಸ್ವಾಮಿ   ವಿರೋಧ ಪಕ್ಷ ನಾಯಕ ಆರ್ ಅಶೋಕ್, ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ,  ರಾಜ್ಯಾಧ್ಯಕ್ಷ ವಿಜಯೇಂದ್ರ, ರವಿ ಕುಮಾರ್ ಮತ್ತು ಹಲವು ನಾಯಕರನ್ನು ಒಳಗೊಂಡ ಬಿಜೆಪಿ ನಿಯೋಗ ಇಂದು ಮಂಗಳೂರಿಗೆ ಭೇಟಿ ನೀಡಿದ್ದು, ಹಿಂದೂ ಕಾರ್ಯಕರ್ತರ ಜೊತೆ ಚರ್ಚೆ ನಡಿಸಿದ ನಂತರ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರನ್ನು ಭೇಟಿಯಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆಯುತ್ತಿರು ವಿದ್ಯಮಾನದ ಬಗ್ಗೆ ಚರ್ಚೆ ನಡೆಸಿತು. ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯಧ್ಯಕ್ಷ ಬಿ.ವೈ ವಿಜಯೇಂದ್ರ ಕಾನೂನು ಸುವ್ಯವಸ್ಥೆ ನಿರ್ವಹಣೆ ನೆಪದಲ್ಲಿ ಪೊಲೀಸರ ಮೂಲಕ ಗೂಂಡಾವರ್ತನೆ, ಗೂಂಡಾಗಿರಿ ನಡೆಸ್ತಾ ಇದೆ, ಸುಳ್ಯ, ಪುತ್ತೂರಿನಲ್ಲಿ ರಾತ್ರಿ 3 ಗಂಟೆಗೆ ಹೋಗಿ ಬಾಗಿಲು ತಟ್ಟುವಂಥದ್ದು, ಕಾರ್ಯಕರ್ತರು ಮನೆಯಲ್ಲಿ ಇಲ್ಲದೇ ಇದ್ರೆ ರಿವಾಲ್ವರ್ ತೋರಿಸಿ ಬೆದರಿಸುವುದು ನಡೆಯುತ್ತಿದೆ.  

ಕರಾವಳಿ ಬಿಜೆಪಿ – ಪರಿವಾರ ಸಂಘಟನೆ ಭದ್ರಕೋಟೆ. ಇಲ್ಲಿ ಕೋಮುಗಲಭೆ ನಡೆಯಲು ಕಾಂಗ್ರೆಸ್ ನೀತಿಗಳೇ ಕಾರಣ. ಸುಹಾಸ್ ಹತ್ಯೆಯಲ್ಲಿ ಬುರ್ಖಾಧಾರಿಗಳು ವಾಹನ ಅಡ್ಡಗಟ್ಟಿದ್ದನ್ನು ನೋಡಿದ್ದೀರಿ, ಆದರೆ ಅವರ ಬಂಧನವಾಗಿಲ್ಲ. ಪೊಲೀಸರು ಆಡಳಿತ ಪಕ್ಷಕ್ಕೆ ಮಣಿದು ಕೆಲಸ ಮಾಡಿದ್ದರಿಂದ ಆಡಳಿತದ ತಪ್ಪಿನಿಂದಾಗಿ ಐದು ಜನ ಪೊಲೀಸ್ ಅಧಿಕಾರಿಗಳ ತಲೆದಂಡ ಆಯ್ತು, ನಮ್ಮ ಕಾರ್ಯಕರ್ತರಿಗೆ ಬೆದರಿಕೆ ಹಾಕೋದು ಬಿಡಿ, ರಾತ್ರಿ ವೇಳೆ ಹೋಗಿ ಬೆದರಿಸುವ ಷಡ್ಯಂತ್ರ ಮಾಡಬೇಡಿ, 800 ಕ್ಕೂ ಹೆಚ್ಚು ಪ್ರಕರಣ ರೇಪ್ ಕೇಸ್ ರಾಜ್ಯದಲ್ಲಿ ನಡೆದಿದೆ. ಪೊಲೀಸ್‌ ಇಲಾಖೆ ಕಣ್ಣುಮುಚ್ಚಿ ಕುಳಿತಿದೆ ಎಂದರು. ದ.ಕ.ದಲ್ಲಿ ಅಲ್ಪಸಂಖ್ಯಾತರ ಖುಷಿಗಾಗಿ ಹಿಂದುಗಳನ್ನು ಅಪಮಾನ ಮಾಡೋದು, ಎಲ್ಲ ಕೇಸುಗಳನ್ನು ಹಿಂದು ಮುಸ್ಲಿಂ ಬಣ್ಣ ಹಚ್ಚುವುದು ಕಾಂಗ್ರೆಸ್ ಸರಕಾರದ ಚಾಳಿಯಾಗಿದೆ. ಕಾನೂನು ಸುವ್ಯವಸ್ಥೆ ಹಾಳಾದ್ರೆ ರಾಜ್ಯ ಸರ್ಕಾರವೇ ಹೊಣೆ ಹೊರಬೇಕು, ಕಲ್ಲಡ್ಕ ಭಟ್ ಕೋಣೆ ಒಳಗಡೆ ಮಾತಾಡಿದ್ದನ್ನು ನೋಟಿಸ್‌ ಮಾಡ್ತಾರೆ, ಐವಾನ್ ಡಿಸೋಜ ಬಾಂಗ್ಲಾ ರೀತಿ  ನುಗ್ಗಿ ಹೊಡೀತೇವೆ ಎಂದಾಗ ಯಾಕೆ ಪೊಲೀಸ್‌ ಕೇಸು ದಾಖಲಾಗಿಲ್ಲ ಎಂದು ಆಕ್ರೋಶ ಹೊರಹಾಕಿದರು. 

 ಆಡಳಿತ ಫೇಲ್ ಆದಾಗ ಅಧಿಕಾರಿಗಳನ್ನು ಟಾರ್ಗೆಟ್ ಮಾಡುತ್ತಾರೆ, ಬೆಂಗಳೂರು, ಮಂಗಳೂರಿನಲ್ಲಿ ಆಗಿದ್ದು ಅದೇ. ಅಧಿಕಾರಿಗಳನ್ನು ಬದಲಾವಣೆ ಮಾಡಿದಾರೆ, ಕಾಯಿಲೆ ಏನಂತ ಪತ್ತೆ ಮಾಡಿದ್ರೆ ಔಷಧಿ ಹಾಕಬಹುದು, ಲವ್ ಜಿಹಾದ್, ಗೋಹತ್ಯೆ, ಡ್ರಗ್, ಮರಳು ಮಟ್ಟ ಹಾಕಿದ್ರೆ ಪರಿಸ್ಥಿತಿ ಸರಿಹೋಗತ್ತೆ ಎಂದು ಪೊಲೀಸ್‌ ಅಧಿಕಾರಿಗಳಿಗೆ ತಿಳಿಸಿದ್ದೇವೆ ಎಂದರು.

ಬಳಿಕ ಮಾತನಾಡಿ ವಿಪಕ್ಷ ನಾಯಕ ಆರ್. ಅಶೋಕ್ ಪೊಲೀಸ್ ಸ್ಟೇಷನ್ ಇಲ್ಲಿ ಕಾಂಗ್ರೆಸಿನ ಸ್ಟೇಷನ್ ಆಗಿಬಿಟ್ಟಿದೆ.  ಯಾವ ಕಾನೂನು ಪುಸ್ತಕದಲ್ಲಿ ಬಾಗಿಲು ತಟ್ಟಿ ಫೋಟೊ ತೆಗಿಯೋಕೆ ಬರೆದಿದೆ ಎಂದು ಕೇಳಿದ್ವಿ. ಪಾಕಿಸ್ತಾನದವರಿದ್ದರೆ ಕಳಿಸಿ ಅಂದ್ರೆ ಆಗಲ್ಲ ಅಂತಾರೆ, ಭಾರತ್‌ ಮಾತಾಕಿ ಜೈ ಎನ್ನುವವರಿಗೂ ಪಾಕ್ ಜಿಂದಾಬಾದ್ ಎನ್ನುವವರಿಗೂ ಒಂದೇ ಕಾನೂನು. ದೇಶ ವಿರೋಧಿಗಳನ್ನೂ, ದೇಶ ಪ್ರೇಮಿಗಳನ್ನು ಒಂದೇ ತಕ್ಕಡಿಯಲ್ಲಿ ತೂಗಬೇಡಿ ಅಂತ ಹೇಳಿದ್ದೇವೆ. ಬಿಜೆಪಿ ಕಾರ್ಯಕರ್ತರಿಗೆ ನಾವಿದ್ದೇವೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಅರವಿಂದ್ ಬೆಲ್ಲದ್, ರವಿ ಕುಮಾರ್,  ಸದಾನಂದ ಗೌಡ, ಛಲವಾದಿ ನಾರಾಯಣಸ್ವಾಮಿ, ಸಂಸದ ಕ್ಯಾ. ಬ್ರಿಜೇಶ್ ಚೌಟ, ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಶಾಸಕರಾದ ಬಾಗೀರಥಿ ಮರುಳ್ಯ, ಉಮಾನಾಥ ಕೋಟ್ಯಾನ್, ಡಾ.ಭರತ್ ಶೆಟ್ಟಿ, ವೇದವ್ಯಾಸ್ ಕಾಮತ್, ಹರೀಶ್ ಪೂಂಜಾ, ರಾಜೇಶ್ ನಾಯ್ಕ್, ಮಾಜಿ ಶಾಸಕ ನಾಗರಾಜ್ ಶೆಟ್ಟಿ, ವಿದಾನಸಭಾ ಸದಸ್ಯ ಕಿಶೋರ್ ಕುಮಾರ್ ಪುತ್ತೂರು,  ಯತೀಶ್ ಅರುವ, ಪ್ರೇಮಾನಂದ ಶೆಟ್ಟಿ ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ