ಮಂಗಳೂರು: ಸಂವಿಧಾನವೇ ಕಾಂಗ್ರೆಸಿನ ಸಿದ್ದಾಂತ ಎಂದು ಲೋಕಸಭಾ ಸದಸ್ಯ ಸಸಿಕಾಂತ್ ಸೆಂಥಿಲ್ ಹೇಳಿದರು. ಅವರು ಸಾಮರಸ್ಯ ಮಂಗಳೂರು ನಗರದ ಓಷಿಯನ್ ಪರ್ಲ್ ನಲ್ಲಿ ಆಯೋಜಿಸಲಾಗಿದ್ದ ಪ್ರಶಕ್ತ ವಿದ್ಯಾಮಾನಗಳು, ಪ್ರಜಾಪ್ರಭುತ್ವ, ಸಂವಿದಾನ, ಜಾತ್ಯಾತೀತೆಗೆ ಎದುರಾಗಿರುವ ಅಪಾಯಗಳ ಕುರಿತು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಬೇರೆ ಪಕ್ಷಗಳಂತೆ ಅಲ್ಲ. ಕಾಂಗ್ರೆಸ್ ಒಂದು ಸಾಮೂಹಿಕ ಪಕ್ಷ. ಪಕ್ಷ ಎನ್ನುವುದು ಪಕ್ಷದ ಸಿದ್ದಾಂತ, ಸಂಘಟನೆ ಮತ್ತು ನಾಯಕತ್ವದಲ್ಲಿ ನಿಂತಿದೆ. ಹೊರಗೆ ಎಲ್ಲಾ ಒಂದೇ ಕುಟುಂಬದ ನಿರ್ಧಾರ ಅನ್ನಿಸುತ್ತದೆ ಆದರೆ ಹಾಗೆ ಇಲ್ಲ. ಎಲ್ಲವೂ ಚರ್ಚೆಗೆ ಒಳಪಟ್ಟು ತೆಗೆದುಕೊಂಡ ನಿರ್ಧಾರವೇ ರಾಹುಲ್ ಗಾಂದಿಯ ನಾಯಕತ್ವ. ಸಂಘಟನೆಯಲ್ಲಿ ಕಾಂಗ್ರೆಸ್ ಸೋತಿದೆ. ಅದು ಒಪ್ಪಿಕೊಳ್ಳುವಂತಹುದು. ಕಾಂಗ್ರೆಸ್ ಸೇರಿದ ನಂತರ ಕಾಂಗ್ರೆಸ್ ನಲ್ಲಿ ಹೆದರುವ ಸಂಧರ್ಭ ಕಡಿಮೆಯಾಗಿದೆ. ರಾಜಕಾರಣದಲ್ಲಿ ಬದಲಾವಣೆ ಬೇಕಾಗಿದೆ. ಬದಲಾವಣೆ ಪ್ರಾರಂಭ ಅಗಿದೆ. ರಾಮಮಂದಿರ ಬಂದರೆ ಎಲ್ಲಾ ಪ್ರತಿಪಕ್ಷಗಳು ಶಕ್ತಿ ಕಳೆದುಕೊಳ್ಳುತ್ತೇವೆ ಎಂಬ ಚಿತ್ರಣ ಇತ್ತು. ಆದರೆ ಅಯೋಧ್ಯೆಯಲ್ಲಿಯೇ ಅವರು ಸೋತು ಪ್ರತಿಫಕ್ಷಗಳ ಕೂಗು ಜನರಿಗೆ ಕೇಳುತ್ತಿದೆ ಎಂಬುದು ಸ್ಪಷ್ಟವಾಗಿದೆ. ರಾಜಕಾರಣದಲ್ಲಿ ವಾತಾವರಣ ಬದಲಾಗುತ್ತಿದೆ. ಈಗ ಕಾಂಗ್ರೆಸ್ ಒಂದೇ ಪ್ರತಿಫಕ್ಷವಾಗದೆ ಇತರ ಎಲ್ಲಾ ಪ್ರಾದೇಶಿಕ ಪಕ್ಷಗಳು ಸೇರಿವೆ ಎಂದರು. ಕಾಂಗ್ರೆಸ್ ಎಲ್ಲಾ ವಿಷಯದಲ್ಲೂ ತನ್ನ ತಪ್ಪನ್ನು ಸರಿ ಮಾಡಿಕೊಳ್ಳುವ ಕಾಲ ಇದಾಗಿದ್ದು, ಹಲವಾರು ಬದಲಾವಣೆಗಳು ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.