ಮಂಗಳೂರು: ಟೈಗರ್ ಕಾರ್ಯಾಚರಣೆ ನಡೆಸಿ ಬಡ ಬೀದಿ ವ್ಯಾಪಾರಿಗಳ ಬದುಕನ್ನೇ ನಾಶ ಮಾಡಿರುವ ಮಹಾನಗರ ಪಾಲಿಕೆ ಅವೈಜ್ಞಾನಿಕವಾಗಿ ವ್ಯಾಪಾರ ವಲಯಗಳನ್ನು ಗುರುತು ಮಾಡಿ ಬೀದಿ ವ್ಯಾಪಾರಿಗಳನ್ನು ಬಾಣಲೆಯಿಂದ ಬೆಂಕಿಗೆ ದೂಡಿದೆ ಎಂದು ದಕ್ಷಿಣಕನ್ನಡ ಬೀದಿಬದಿ ವ್ಯಾಪಾರಸ್ಥರ ಸಂಘ (ಸಿಐಟಿಯು) ಆರೋಪಿಸಿದೆ.
ಪರ್ಯಾಯ ವ್ಯವಸ್ಥೆಗಳಿಲ್ಲದೇ , ಪೂರ್ವ ಯೋಜನೆಗಳಿಲ್ಲದೆ ಏಕಾಏಕಿ ಟೈಗರ್ ಕಾರ್ಯಾಚರಣೆ ನಡೆಸಿ ಕೈ ಸುಟ್ಟುಕೊಂಡಿರುವ ನಗರಪಾಲಿಕೆ ಬೀದಿಬದಿ ವ್ಯಾಪಾರಿಗಳ ಸಮಸ್ಯೆ ಪರಿಹರಿಸಲು ಹೆಣಗಾಡುತ್ತಿದೆ ಅದಕ್ಕಾಗಿ ಅವೈಜ್ಞಾನಿಕವಾಗಿ ವ್ಯಾಪಾರ ವಲಯ ಗುರುತು ಮಾಡಿ ಪ್ರಚಾರ ಪಡೆಯುತ್ತಿದೆ ಹೊರತು ಸಮಸ್ಯೆ ಬಗೆಹರಿಸುವ ಬಗ್ಗೆ ಕ್ರಮಗಳು ಜರಗುತ್ತಿಲ್ಲ ಎಂದು ಸಿಐಟಿಯು ಸಂಯೋಜಿತ ಬೀದಿಬದಿ ವ್ಯಾಪಾರಸ್ಥರ ಸಂಘ ಟೀಕಿಸಿದೆ
ವ್ಯಾಪಾರ ವಲಯ ಘೋಷಿಸುವಾಗ ರಾಜಕೀಯ ಹಸ್ತಕ್ಷೇಪ ಮಾಡಲಾಗಿದೆ ಆಡಳಿತ ಪಕ್ಷದ ಸದಸ್ಯರು ಒಬ್ಬರೇ ವ್ಯಾಪಾರ ಮಾಡುತ್ತಿದ್ದ ಜಾಗವನ್ನು ವ್ಯಾಪಾರ ವಲಯವಾಗಿ ಘೋಷಣೆ ಮಾಡಿದ್ದಾರೆ, ಜನರೇ ಹೋಗದ ಜಾಗವನ್ನು, ಪಾಲಿಕೆಗೆ ಸೇರದ ರೈಲ್ವೆ, ಹೆದ್ದಾರಿ ಇಲಾಖೆಯ ಜಾಗವನ್ನು , ಪುಟ್ಪಾತ್ ಜಾಗವನ್ನೂ ವ್ಯಾಪಾರ ವಲಯವಾಗಿ ಘೋಷಿಸಿರುವುದು ಹಾಸ್ಯಾಸ್ಪದವಾಗಿದೆ ಬೀದಿ ವ್ಯಾಪಾರಿಗಳ ಬದುಕನ್ನು ಅತಂತ್ರಗೊಳಿಸಲಿಕ್ಕಾಗಿ ಟೈಗರ್ ಕಾರ್ಯಾಚರಣೆ ನಡೆಸಿದ್ದಾರೆ 667 ಮಂದಿಯಲ್ಲಿ 15% ಜನರಿಗೆ ಐಡಿ ಕೊಟ್ಟು ಉಳಿದ ಜನರನ್ನು ಬೀದಿಗಿಳಿಯಂದಂತೆ ಮಾಡುವ ಹುನ್ನಾರವನ್ನು ಬೀದಿಬದಿ ವ್ಯಾಪಾರಿಗಳು ಬಿಜೆಪಿಯ ನಗರಾಡಳಿತದ ಹುನ್ನಾರವನ್ನು ಅರ್ಥ ಮಾಡಿಕೊಳ್ಳಬೇಕು ಎಂದು ದಕ್ಷಿಣಕನ್ನಡ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘದ ಗೌರವಾಧ್ಯಕ್ಷ ಬಿಕೆ ಇಮ್ತಿಯಾಜ್ , ಕಾರ್ಯಾಧ್ಯಕ್ಷರಾದ ಸುನಿಲ್ ಕುಮಾರ್ ಬಜಾಲ್, ಅಧ್ಯಕ್ಷರಾದ ಮುಜಾಫರ್ ಅಹಮದ್ ಪ್ರಧಾನ ಕಾರ್ಯದರ್ಶಿ ಸಂತೋಷ್ ಆರ್ ಎಸ್ ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ