image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಸಂವಿಧಾನದ ಬಗ್ಗೆ ಮಾತನಾಡುವ ಕಾಂಗ್ರೆಸ್ ಅದರ ಬಗ್ಗೆ ಎಷ್ಟು ಗೌರವ ಇಟ್ಟುಕೊಂಡಿದೆ ಎನ್ನುವುದು ಪ್ರಶ್ನೆಗೆ ಅರ್ಹ- ಪ್ರತಾಪ್ ಸಿಂಹ ನಾಯಕ್

ಸಂವಿಧಾನದ ಬಗ್ಗೆ ಮಾತನಾಡುವ ಕಾಂಗ್ರೆಸ್ ಅದರ ಬಗ್ಗೆ ಎಷ್ಟು ಗೌರವ ಇಟ್ಟುಕೊಂಡಿದೆ ಎನ್ನುವುದು ಪ್ರಶ್ನೆಗೆ ಅರ್ಹ- ಪ್ರತಾಪ್ ಸಿಂಹ ನಾಯಕ್

 

ಮಂಗಳೂರು: ಸಂವಿಧಾನದ ಬಗ್ಗೆ ಮಾತನಾಡುವ ಕಾಂಗ್ರೆಸ್ ಅದರ ಬಗ್ಗೆ ಎಷ್ಟು ಗೌರವ ಇಟ್ಟುಕೊಂಡಿದೆ ಎನ್ನುವುದು ಪ್ರಶ್ನೆಗೆ ಅರ್ಹ ಎಂದು ಶಾಸಕ ಪ್ರತಾಪಸಿಂಹ ನಾಯಕ್ ಹೇಳಿದರು.    ಅವರು ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,  ದಲಿತರನ್ನು ಗೌರವಿಸುವಲ್ಲಿ ಬಿ ಜೆ ಪಿ ತೋರಿದ ಗೌರವ ಕಾಂಗ್ರೆಸ್ ನಲ್ಲಿ ಇಲ್ಲ. ತಮಗೆ ತೊಂದರೆಯಾದಾಗ ದಲಿತ ಹಿಂದುಳಿದ ವ್ಯಕ್ತಿ ಮೇಲೆ ಟಾರ್ಗೆಟ್ ಅನ್ನುವವರು ಬೇರೆ ಗೌರವಾನ್ವಿತ ಸ್ಥಾನದವರು ಮಾತ್ರ ಕೇಂದ್ರದ ಕೈಗೊಂಬೆ ಎನ್ನುತ್ತಾ ಹಿಂದುಳಿದ ಸಮಾಜದ ಅವರಿಗೆ ಅವಮಾನ ಮಾಡಿದೆ. ಅವಕಾಶ ಸಿಕ್ಕಾಗ ರಾಷ್ಟ್ರಪತಿಗಳು ರಾಜ್ಯಪಾಲರು ಎಲ್ಲರನ್ನು ಅವಮಾನಿಸಲಾಗಿದೆ. ಸಿದ್ದರಾಮಯ್ಯ ಮೇಲೆ ಆರೋಪ ಬಂದಾಗ ಶೋಕಾಸ್ ಕೊಟ್ಟಿರುವ ಬಗ್ಗೆ ಕಾಂಗ್ರೆಸ್ ಸರಕಾರದ ನಾಯಕರು ವಿಚಾರಣೆಗೆ ಕೊಟ್ಟಿರುವುದನ್ನು ಹೀಯಾಳಿಸಿ ಮಾತನಾಡುತ್ತಾರೆ. ಇವರಿಂದ ಮೂಡ ಹಗರಣದಲ್ಲಿ ಅನ್ಯಾಯಕ್ಕೋಳಾಗದವರು ಹಿಂದುಳಿದ ಮತ್ತು ಅಹಿಂದ ಸಮಾಜದವರು ಇವರಿಗೆ ಕಾಣುವುದಿಲ್ಲ. ಮುಖ್ಯಮಂತ್ರಿ ಸ್ಥಾನ ಅಳುಗಾಡುತ್ತಿದೆ. ಖರ್ಗೆ ವಿಚಾರದಲ್ಲೂ ಅಷ್ಟೇ. ಸ್ವತಂತ್ರ ತನಿಖಾ ಸಂಸ್ಥೆ ಲೋಕಾಯುಕ್ತ ಇವರ ಕೈಗೊಂಬೆಯಾಗಿದೆ. ಪ್ರತಿಪಕ್ಷವಾಗಿ ನಾವು ಸಾರ್ವಜನಿಕ ಹಿತಾಶಕ್ತಿ ಇಟ್ಟುಕೊಂಡು ಪಾದಯಾತ್ರೆ ಮಾಡಿದ್ದೇವೆ. ಮುಖ್ಯಮಂತ್ರಿ ಸ್ಥಾನಕ್ಕೆ ಪೈಪೋಟಿಯಿದೆ ಎನ್ನುವುದು ಸ್ಪಷ್ಟ.  ಕರ್ನಾಟಕದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ. ಎಮ್ ಬಿ ಪಾಟೀಲರು ಛಲವಾದಿ ನಾರಾಯಣ ಬಗ್ಗೆ ಕೆಟ್ಟದಾಗಿ ಮಾತನಾಡಿ ಅವಕಾಶ ವಂಚಿತ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ. ಅವರು ಬೇಷರತ್ತಾಗಿ ಕ್ಷಮೆ ಕೇಳಬೇಕು      ಎಂದು ಅವರು ಅಗ್ರಹಿಸಿದರು. ಈ ಸಂದರ್ಭದಲ್ಲಿ ಉಪ ಮೇಯರ್ ಸುನಿತಾ, ಅರುಣ್ ಜಿ ಶೇಟ್ ಮತ್ತು ಗುರು ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ