ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ಪರಿಷತ್ತು ಸಾಮಾನ್ಯ ಸಭೆ ಮಹಾನಗರ ಪಾಲಿಕೆಯ ಮಂಗಳ ಸಬಾಂಗಣದಲ್ಲಿ ಪೂವಾ೯ಹ್ನ 11.00 ಗಂಟೆಗೆ ಪ್ರಾರಂಭವಾಗುತ್ತಿದ್ದಂತೆ ಆಡಳಿತ ಪಕ್ಷದ ಸದಸ್ಯರು "ಕಾಂಗ್ರಸ್ ರಾಜ್ಯಪಾಲರ ವಿರುದ್ದದ ಪ್ರತಿಭಟನೆಯಲ್ಲಿ ಬಸ್ಸಿಗೆ ಕಲ್ಲು ಬಿಸಾಡಿದ ಸದಸ್ಯನನ್ನು ಹೊರಗೆ ಕಳುಹಿಸುವ ವಿಷಯವನ್ನು ತೆಗೆದುಕೊಳ್ಳುತ್ತಿದ್ದಂತೆ ವಿರೋದ ಪಕ್ಷದ ಸದಸ್ಯರು ವಿರೋದಿಸಲು ಪ್ರಾರಂಬಿಸಿದರು. ಆದರೆ ಆಡಳಿತ ಪಕ್ಷದ ಸದಸ್ಯರು ಪಟ್ಟು ಬಿಡದೆ ಬಸ್ಸಿಗೆ ಕಲ್ಲು ಬಿಸಾಡಿದ ವಿಷಯದ ಚರ್ಚೆ ಆಗಲೇ ಬೇಕೆಂದು ಹಠ ಹಿಡಿದರು. ಇದನ್ನು ವಿರೋದಿಸಿದ ಪ್ರತಿಪಕ್ಷದ ಸದಸ್ಯರು ಸದನದ ಬಾವಿಗೆ ಇಳಿದು ಪ್ರತಿಭಟಿಸಲು ಪ್ರಾರಂಬಿಸಿದಾಗ ಆಡಳಿತ ಪಕ್ಷದ ಮಹಿಳಾ ಸದಸ್ಯೆಯರು ಪಟ್ಟು ಬಿಡುವ ಹಾಗೇ ಕಾಣಿಸಲಿಲ್ಲ. ಕೊನೆಗೆ ಆಡಳಿತ ಪಕ್ಷದ ಸದಸ್ಯರು ಸಭೆಯನ್ನು ಬಹಿಷ್ಕರಿಸಿದ ಪ್ರಸಂಗದ ನಡುವೆ ವಿರೋದ ಪಕ್ಷದ ಸದಸ್ಯರು ಸದನದ ಅಂಗಳದಲ್ಲಿ ಪ್ರತಿಭಟನೆಗೆ ಕೂತರು. ಮೇಯರ್ ಮದ್ಯಂತರ ವಿರಾಮ ಘೋಷಿಸಿ ಮುನ್ನಡೆದರು. ಅಂತು ಪರಿಷತ್ ಸಾಮಾನ್ಯ ಸಭೆಯನ್ನು ಕಲ್ಲು ನುಂಗಿತು.