ಬಾರತ ಸಾಮಾನ್ಯವಾದ ರಾಷ್ಟ್ರ ಅಲ್ಲ. ನಮಗೆ ನಮ್ಮದೇ ಆದ ಸಂಸ್ಕೃತಿ ಇದೆ. ನಾವು ಕುಟುಂಬ ವ್ಯವಸ್ಥೆಯಲ್ಲಿ ಕೂಡ ವೆಸ್ಟರ್ನ್ ಮಾಡೆಲಿಗೆ ಅವಲಂಬಿತರಾಗಿದ್ದೇವೆ. ನಮ್ಮ ಶಿಕ್ಷಣ ಕೂಡ ನಮ್ಮದಲ್ಲದ ಮಾಡೆಲನ್ನು ಬಳಸಲಾಗುತ್ತಿದೆ. ಎಂದು ಕ್ಯಾಪ್ಟನ್ ಬ್ರಿಜೇಶ್ ಚೌಟ ಅಭಿಪ್ರಾಯ ಪಟ್ಟರು. ಅವರು ಶ್ರೀ ಅಂಬಾಮಹೇಶ್ವರಿ ಸೇವಾ ಟ್ರಸ್ಟ್ ಮತ್ತು ಹಲವಾರು ಸಂಘಟನೆಗಳ ಸಹಯೋಗದಲ್ಲಿ ಆಯೋಜಿಸಲಾಗಿದ್ದ "ಭರವಸೆಯ ಹೆಜ್ಜೆ" ಕಾರ್ಯಕ್ರಮದಲ್ಲಿ ಮಾತನಾಡಿ,
ನಮ್ಮತನವನ್ನು ನಾವು ಹಲವಾರು ಕಾರಣಗಳಿಗಾಗಿ ನಾವು ಮರೆತ್ತಿದ್ದೇವೆ. ಈ ನೆಲೆಯಲ್ಲಿ ಅಂಬಾ ಮಹೇಶ್ವರಿ ಸೇವಾ ಟ್ರಸ್ಟ್ ನ ಕೆಲಸ ಪ್ರಾದೇಶಿಕವಾಗಿ ಅಲ್ಲದೆ ವಿಶ್ವಾವ್ಯಾಪಿಯಾಗಿ ಅಲ ವಡಿಸಿಕೊಳ್ಳಬಹುದಾದ ಕಾರ್ಯವಾಗಿದೆ. ಸ್ವಚ್ಛತೆ ಮತ್ತು ಸಂಚಾರ ನಿರ್ವಹಣೆ ಈ ಎರಡು ವಿಷಯಗಳನ್ನು 3 ವಾರ್ಡ್ ಗಳಲ್ಲಿ ಅನುಷ್ಠಾನಕ್ಕೆ ಮಾಡುವ ಮೂಲಕ ಉತ್ತಮ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಇವರ ಕೆಲಸ ಸಮಾಜಕ್ಕೆ ಮಾದರಿ. ಇದನ್ನು ಬೇರೆ ಪ್ರದೇಶದಲ್ಲಿ ಅಳವಡಿಸುವುದು ಮತ್ತು ಬೇರೆ ಸಾಮಾಜಿಕ ವಲಯಕ್ಕೂ ವಿಸ್ತಾರ ಮಾಡಲು ಯೋಚಿವಂತಾಗಬೇಕು ಎಂದರು. ಈ ಸಂದರ್ಭದಲ್ಲಿ
ರಾಮಕೃಷ್ಣ ಮಠದ ಅಧ್ಯಕ್ಷರಾದ
ಜಿತಾಕಮಾನಂದ ಸ್ವಾಮಿಜಿ,
ಮೇಯರ್ ಸುದೀರ್ ಶೆಟ್ಟಿ ಕಣ್ಣೂರು, ಮಹಾನಗರ ಪಾಲಿಕೆ ವಿರೋದ ಪಕ್ಷದ ನಾಯಕ ಪ್ರವೀಣ್ ಚಂದ್ರ ಆಳ್ವಾ
ಡಾ. ದಿಲಿಪ್ ಕುಮಾರ್ ಕೆ, ಅಂಬಾಮಹೇಶ್ವರಿ ಸೇವಾ ಟ್ರಸ್ಟಿನ ಅದ್ಯಕ್ಷರಾದ ಸೀತಾರಾಮ ಎ ಉಪಸ್ಥಿತರಿದ್ದರು.