ಮಂಗಳೂರು: ಕಂಕನಾಡಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಅಪ್ರಾಪ್ತ ಮಗು ಅಪಹರಣ ಪ್ರಕರಣವನ್ನು ದೂರು ಬಂದ 2 ಗಂಟೆಯೊಳಗೆ ಭೇದಿಸಿ ಹೆತ್ತವರಿಗೆ ಒಪ್ಪಿಸಿದ ಕಂಕನಾಡಿ ಘಟನೆ ನಗರದ ಕಂಕನಾಡಿಯಲ್ಲಿ ನಡೆದಿದೆ.
ಕಂಕನಾಡಿ ಠಾಣಾ ವ್ಯಾಪ್ತಿಯ ಅಳಪೆ ಪಡೀಲ್ ಅರಣ್ಯ ಇಲಾಖೆಯ ಸಸ್ಯವನದಲ್ಲಿ ಕೆಲಸ ಮಾಡಿಕೊಂಡಿದ್ದ ಕೆಲಸಗಾರರ ಎರಡೂವರೆ ವರ್ಷದ ಹೆಣ್ಣು ಮಗು 31.09.2024 ರಂದು ಸಂಜೆ 4.30 ಗಂಟೆಗೆ ಕಾಣೆಯಾಗಿದ್ದು, ಎಲ್ಲ ಕಡೆ ಹುಡುಕಾಡಿ ಸಂಜೆ 7.30 ಗಂಟೆಗೆ ಠಾಣೆಗೆ ಈ ಬಗ್ಗೆ ಮಾಹಿತಿ ನೀಡಿದ್ದು ತಕ್ಷಣ ಕಾರ್ಯ ಪ್ರ ವೃತ್ತ ರಾಗದ ಕಂಕನಾಡಿ ನಗರ ಪೊಲೀಸರು ಮೇಲಧಿಕಾರಿಗಳಿಗೆ ಮಾಹಿತಿ ಎಲ್ಲ ಕಡೆ ಮಾಹಿತಿ ನೀಡಿ, ರೈಲ್ವೆ ಜಂಕ್ಷನ್ ಗೆ ಭೇಟಿ ನೀಡಿ ಸಿಸಿಟಿವಿ ಫೂಟೇಜ್ ಆಧಾರದಲ್ಲಿ ವೃದ್ಧನೋರ್ವ ಮಗುವೊಂದನ್ನು ಕರೆದುಕೊಂಡು ಹೋಗುತ್ತಿರುವುದನ್ನು ಗಮನಿಸಿ ಕೇರಳ ಕಡೆಗೆ ಹೋಗುತ್ತಿದ್ದ ರೈಲಿನ ಬಗ್ಗೆ ಕಾಸರಗೋಡು ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿ ಮಗುವಿನೊಂದಿಗೆ ವೃದ್ಧನನ್ನು ವಶಕ್ಕೆ ಪಡೆದಿದ್ದು ಕಂಕನಾಡಿ ಪೊಲೀಸ್ ನಿರೀಕ್ಷಕರ ತಂಡದ ಪಿ.ಎಸ್.ಐ.ಶಿವಕುಮಾರ್ ಮತ್ತು ಸಿಬ್ಬಂದಿಗಳು ರೈಲ್ವೆ ಪೊಲೀಸರಿಂದ ರಾತ್ರಿ 9.30 ಗಂಟೆಗೆ ವಶಕ್ಕೆ ಪಡೆದು ಹೆತ್ತವರಿಗೆ ಮಗುವನ್ನು ರಾತ್ರಿಯೇ ಒಪ್ಪಿಸಿದ್ದಾರೆ.
ಆರೋಪಿತ ಅನೀಶ್ ಕುಮಾರ್ ಎಂಬುವನಾಗಿದ್ದು ಎರ್ನಾಕುಲಂ ಜಿಲ್ಲೆ, ಕೇರಳದವನು. ಮನೆಯಲ್ಲಿ ಗಲಾಟೆ ಮಾಡಿಕೊಂಡು ಮುಂಬೈ ಗೆ ತಾಯಿ ಬಳಿ ಹೋಗಿ ವಾಪಸ್ಸು ಮಂಗಳೂರು ರೈಲಿನಲ್ಲಿ ಬಂದು, ಸಸ್ಯವನ ಮುಂಭಾಗದ ರಸ್ತೆಯಲ್ಲಿ ಬರುತ್ತಿರುವಾಗ ರಸ್ತೆಯಲ್ಲಿ ಆಟವಾಡಿಕೊಂಡಿದ್ದ ಮಗುವನ್ನು ನೋಡಿದ್ದು, ತನಗೂ 3 ಗಂಡು ಮಕ್ಕಳಿದ್ದು, ಹೆಣ್ಣು ಮಗು ಸಾಕಬೇಕೆಂಬ ಉದ್ದೇಶದಿಂದ ಕರೆದುಕೊಂಡು ಹೋಗಿರುವುದಾಗಿ ಹೇಳಿದ್ದಾನೆ. ಈತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ ಎಂದು ಪೊಲೀಸ್ ವರಿಷ್ಟರು ಪ್ರಕಟಣೆಯಲ್ಲಿ ತಿಳುಸಿದ್ದಾರೆ.