image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ನಷ್ಟವಾದರೂ ಪರವಾಗಿಲ್ಲ ಎಂದು ಪಾಕಿಸ್ತಾನಕ್ಕೆ ರಪ್ತು ಆಗುತ್ತಿದ್ದ ವೀಳ್ಯದೆಲೆ ರದ್ದುಗೊಳಿಸಿದ ಹೊನ್ನಾವರ ರೈತರು

ನಷ್ಟವಾದರೂ ಪರವಾಗಿಲ್ಲ ಎಂದು ಪಾಕಿಸ್ತಾನಕ್ಕೆ ರಪ್ತು ಆಗುತ್ತಿದ್ದ ವೀಳ್ಯದೆಲೆ ರದ್ದುಗೊಳಿಸಿದ ಹೊನ್ನಾವರ ರೈತರು

ಉತ್ತರ ಕನ್ನಡ : ಪಹಲ್ಗಾಮ್​ನ ಭೀಕರ ದುರಂತ ಭಾರತವನ್ನು ಕೆರಳಿಸಿದೆ. ಭಯೋತ್ಪಾದನೆ ಬೆಂಬಲಿಸುವ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲು ದೇಶವು ದಿಟ್ಟ ಹೆಜ್ಜೆಗಳನ್ನು ಇಟ್ಟಿದೆ. ಇದರ ಬೆನ್ನಲ್ಲೇ, ಉತ್ತರಕನ್ನಡ ಜಿಲ್ಲೆಯ ಹೊನ್ನಾವರದ ರೈತರು ಐತಿಹಾಸಿಕ ನಿರ್ಧಾರವೊಂದನ್ನು ಕೈಗೊಂಡಿದ್ದಾರೆ. ತಮ್ಮ ಭೂಮಿಯ ಫಲವತ್ತತೆಯಿಂದ ಬೆಳೆದ ಅಮೂಲ್ಯವಾದ ವೀಳ್ಯದೆಲೆ ಪಾಕಿಸ್ತಾನಕ್ಕೆ ರಫ್ತು ಮಾಡುವುದನ್ನು ನಿಲ್ಲಿಸಿದ್ದಾರೆ.

ಇದು ಕೇವಲ ವ್ಯಾಪಾರದ ನಿರ್ಧಾರವಲ್ಲ. ಬದಲಿಗೆ ಭಯೋತ್ಪಾದನೆಗೆ ಸೆಡ್ಡು ಹೊಡೆಯುವ, ದೇಶದ ಘನತೆಯನ್ನು ಎತ್ತಿ ಹಿಡಿಯುವ ಸಂಕಲ್ಪ. ಹೊನ್ನಾವರದ ರೈತರ ಈ ದಿಟ್ಟತನವು ಇದೀಗ ಇಡೀ ದೇಶಕ್ಕೆ ಮಾದರಿಯಾಗಿದೆ. ತಮ್ಮ ಬೆಳೆಯ ಮೌಲ್ಯವನ್ನು ರಾಷ್ಟ್ರದ ಹಿತಾಸಕ್ತಿಗಿಂತಲೂ ಮಿಗಿಲಾಗಿ ಪರಿಗಣಿಸಿರುವ ಈ ರೈತರ ನಿರ್ಧಾರಕ್ಕೆ ಇದೀಗ ಎಲ್ಲೆಡೆಯಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಈಗಾಗಲೇ ನಮ್ಮ ಸೇನೆ ಆಪರೇಶನ್ ಸಿಂಧೂರ ಮೂಲಕ ತಕ್ಕ ಉತ್ತರವೇನೋ ಕೊಟ್ಟಿದೆ. ಇದರ ಜೊತೆಗೆ ಕೇಂದ್ರ ಸರ್ಕಾರ ಪಾಕಿಸ್ತಾನದ ಜೊತೆಗಿನ ಎಲ್ಲ ರಿತೀಯ ವಾಣಿಜ್ಯ ವ್ಯವಹಾರ ಸಹ ಬಂದ್ ಮಾಡಿದೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಶರಾವತಿ ನದಿ ಪಾತ್ರ ಭಾಗದ ರೈತರು ಬೆಳೆದ ವೀಳ್ಯದೆಲೆಯನ್ನು ದೆಹಲಿ ವರ್ತಕರು ಖರೀದಿಸಿ ಅದನ್ನು ಪಾಕಿಸ್ತಾನಕ್ಕೆ ರಫ್ತು ಮಾಡುತ್ತಿದ್ದರು. ಇದು ಹಲವು ತಲೆಮಾರಿನಿಂದಲೂ ನಡೆದುಕೊಂಡು ಬಂದಿದೆ. ಆದರೆ, ಇದೀಗ ಕೇಂದ್ರ ಸರ್ಕಾರ ಎಲ್ಲ ವಸ್ತುಗಳು ಪಾಕಿಸ್ತಾನಕ್ಕೆ ಹೋಗದಂತೆ ನಿರ್ಬಂಧ ವಿಧಿಸಿದೆ.

 

Category
ಕರಾವಳಿ ತರಂಗಿಣಿ