ಬೆಂಗಳೂರು: ಕಾಂಗ್ರೆಸ್ ಸಂಸದ ಡಾ. ಶಶಿ ತರೂರ್ ನೇತೃತ್ವದ ಉನ್ನತ ಮಟ್ಟದ ನಿಯೋಗದೊಂದಿಗೆ ಅಮೆರಿಕ ಮತ್ತು ಲ್ಯಾಟಿನ್ ಅಮೆರಿಕಕ್ಕೆ ತೆರಳಲಿದ್ದು, ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆ ವಿರುದ್ಧ, ಆಪರೇಶನ್ ಸಿಂಧೂರ ಕಾರ್ಯಾಚರಣೆ ಬಗ್ಗೆ ಭಾರತದ ಸಂದೇಶವನ್ನು ಜಾಗತಿಕ ವೇದಿಕೆಗಳಲ್ಲಿ ಪ್ರಚಾರಪಡಿಸಲು ಭಾಗವಹಿಸಲಿದ್ದಾರೆ. ಆ ತಂಡದಲ್ಲಿ ಕರ್ನಾಟಕದಿಂದ ಬೆಂಗಳೂರು ದಕ್ಷಿಣದ ಸಂಸದ ತೇಜಸ್ವಿ ಸೂರ್ಯ ಹಾಗೂ ಮಂಗಳೂರು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಬಾಗವಹಿಸಲಿರುವುದು ವಿಶೇಷವಾಗಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು 32 ದೇಶಗಳು ಮತ್ತು ಯುರೋಪಿಯನ್ ಒಕ್ಕೂಟಕ್ಕೆ ಭೇಟಿ ನೀಡಲು ಏಳು ಸರ್ವಪಕ್ಷ ನಿಯೋಗಗಳನ್ನು ರಚಿಸಿದ್ದು, ಈ ಭೇಟಿಯು ಪ್ರಮುಖ ರಾಜತಾಂತ್ರಿಕ ಪ್ರಯತ್ನದ ಭಾಗವಾಗಿದೆ. ಪ್ರತಿ ತಂಡವು ನೀತಿ ಮತ್ತು ರಾಜತಾಂತ್ರಿಕ ಪರಿಣತಿಯನ್ನು ಹೊಂದಿರುವ ಸಂಸದರಿಗೆ ಬೆಂಬಲ ನೀಡಲು ನಿವೃತ್ತ ರಾಜತಾಂತ್ರಿಕರನ್ನು ಕೂಡ ಒಳಗೊಂಡಿದೆ. ಈ ನಿಯೋಗಗಳು ಭಯೋತ್ಪಾದನೆಯ ಕುರಿತು ಭಾರತದ ದೃಢ ಮತ್ತು ಏಕೀಕೃತ ನಿಲುವನ್ನು ವಿವರಿಸುವ ಮತ್ತು ಗಡಿಯಾಚೆಗಿನ ನಿರ್ಣಾಯಕವಾಗಿ ಪ್ರತಿಕ್ರಿಯಿಸುವ ಪುನರುಚ್ಚರಿಸುವ ಗುರಿಯನ್ನು ಹೊಂದಿವೆ.
ಭಯೋತ್ಪಾದನೆಯ ವಿರುದ್ಧ ಜಾಗತಿಕ ಅಭಿಪ್ರಾಯವನ್ನು ರೂಪಿಸುವ ಮತ್ತು ಜಾಗತಿಕ ವೇದಿಕೆಗಳಲ್ಲಿ ಭಯೋತ್ಪಾದನೆ ಬಗ್ಗೆ ಭಾರತದ ರಾಜತಾಂತ್ರಿಕ ನಿಲುವು ವ್ಯಕ್ತಪಡಿಸಲು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಈ ಜಾಗತಿಕ ಸಂವಹನ ಕಾರ್ಯ ಆರಂಭಿಸಿದ್ದು, ಈ ನಿಯೋಗಗಳ ಭೇಟಿಯು ಮೇ 23 ರಿಂದ ಪ್ರಾರಂಭವಾಗಿ ಜೂನ್ 6 ರವರೆಗೆ ನಡೆಯಲಿದೆ.
ಈ ಜಾಗತಿಕ ಸಂವಹನ ಕಾರ್ಯದಲ್ಲಿ ಕರ್ನಾಟಕದಿಂದ ತೇಜಸ್ವೀ ಸೂರ್ಯ ಅವರೊಂದಿಗೆ, ಮಂಗಳೂರು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟಾ ಅವರು ಸ್ಪೇನ್, ಗ್ರೀಸ್ ಗೆ ತೆರಳುವ ಮತ್ತೊಂದು ನಿಯೋಗದ ಭಾಗವಾಗಿದ್ದಾರೆ.