ಮಂಗಳೂರು: ರಾಜ್ಯದ್ಯಂತ ಡೆಂಗ್ಯೂ ಜ್ವರದ ಹಾವಳಿ ಜೋರಾಗಿದ್ದು ದಕ್ಷಿಣ ಕನ್ನಡದಲ್ಲಿ ಕೂಡ ಹಲವಾರು ಪ್ರಕರಣಗಳು ಕಂಡುಬರುತ್ತಿದೆ ಇದಕ್ಕಾಗಿ ಮುನ್ನಚ್ಚರಿಕೆಯ ಸಭೆಯನ್ನು ಮಂಗಳೂರು ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಕರೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಮಾನ್ಯ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ರವರು ಶಾಸಕರಾದ ವೇದವ್ಯಾಸ ಕಾಮತ್, ಮಹಾನಗರ ಪಾಲಿಕೆಯ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಹಾಗೂ ಅಧಿಕಾರಿಗಳೊಡನೆ ಚರ್ಚೆ ನಡೆಸಿದರು.
ಚರ್ಚೆ ವೇಳೆ ಡೆಂಗ್ಯೂ ನಿಯಂತ್ರಣ ಮತ್ತು ಪ್ರಕರಣಗಳ ಮೇಲೆ ಹದ್ದಿನ ಕಣ್ಣು ಇಡಲು ಕಂಟ್ರೋಲ್ ಸೆಂಟರ್ ಸ್ಥಾಪಿಸುವ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಸಭೆ ನಡೆದ ತಕ್ಷಣವೇ ಸಂಸದರು ತುರ್ತಾಗಿ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಂಗಳೂರು ಸ್ಮಾರ್ಟ್ ಸಿಟಿ ಕಮಾಂಡಿಂಗ್ ಕಂಟ್ರೋಲ್ ಕಛೇರಿಗೆ ಭೇಟಿ ನೀಡಿ ಅಲ್ಲಿನ ಅಧಿಕಾರಿಗಳೊಂದಿಗೆ ಚರ್ಚಿಸಿ ಕಚೇರಿಯ ಸಂಪನ್ಮೂಲಗಳನ್ನು ಬಳಸಿ ಡೆಂಗ್ಯೂ ನಿಯಂತ್ರಣದ ಕಣ್ಗಾವಲಿನ ಚಟುವಟಿಕೆಯನ್ನು ಸ್ಮಾರ್ಟ್ ಸಿಟಿಯ ಕಚೇರಿಯಿಂದ ನಡೆಸಬಹುದಾದ ಅಭಿಪ್ರಾಯ ನೀಡಿದರು ಇದನ್ನು ಆಲಿಸಿದ ಸ್ಮಾರ್ಟ್ ಸಿಟಿಯ ಜಿ.ಎಂ ಟೆಕ್ ಸಕಾರಾತ್ಮಕವಾಗಿ ಸ್ಪಂದಿಸಿದ್ದು , ಮುಂದಿನ ಕ್ರಮ ಕೈಗೊಳ್ಳಲು ಸಂಸದರು ಮೇಯರ್, ಶಾಸಕರು ಹಾಗೂ ಸ್ಮಾರ್ಟ್ ಸಿಟಿಯ ಅಧಿಕಾರಿಗಳಿಗೆ ಸೂಚನೆ ನೀಡಿದರು.