image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

26 ರಫೇಲ್​ ಯುದ್ಧ ವಿಮಾನಗಳ ಖರೀದಿಗೆ ಭಾರತ- ಫ್ರಾನ್ಸ್​ ನಡುವೆ ಒಪ್ಪಂದ

26 ರಫೇಲ್​ ಯುದ್ಧ ವಿಮಾನಗಳ ಖರೀದಿಗೆ ಭಾರತ- ಫ್ರಾನ್ಸ್​ ನಡುವೆ ಒಪ್ಪಂದ

ನವದೆಹಲಿ: ಸೇನಾ ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಭಾರತವು, ಫ್ರಾನ್ಸ್​ ಜೊತೆಗೆ ರಫೇಲ್​ ಯುದ್ಧ ವಿಮಾನಗಳ ಖರೀದಿ ಒಪ್ಪಂದಕ್ಕೆ ಇಂದು ಸಹಿ ಹಾಕಲಿದೆ. 63 ಸಾವಿರ ಕೋಟಿ ರೂಪಾಯಿ ಮೌಲ್ಯದಲ್ಲಿ 26 ರಫೇಲ್​ ಸಾಗರ ಯುದ್ಧ ವಿಮಾನಗಳನ್ನು ಭಾರತ ಖರೀದಿ ಮಾಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಫ್ರಾನ್ಸ್ ಪರವಾಗಿ ಭಾರತದಲ್ಲಿನ ಫ್ರೆಂಚ್ ರಾಯಭಾರಿ ಮತ್ತು ಭಾರತದ ಕಡೆಯಿಂದ ರಕ್ಷಣಾ ಕಾರ್ಯದರ್ಶಿ ರಾಜೇಶ್ ಕುಮಾರ್ ಸಿಂಗ್ ಅವರು ಈ ಒಪ್ಪಂದದಲ್ಲಿ ಭಾಗವಹಿಸಲಿದ್ದಾರೆ. ಎರಡೂ ದೇಶಗಳ ರಕ್ಷಣಾ ಸಚಿವರು ವಿಡಿಯೋ ಕಾನ್ಫ್​​ ರೆನ್ಸ್​ ಮೂಲಕ ಒಡಂಬಡಿಕೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.

ಮೂಲಗಳ ಪ್ರಕಾರ, ಸೌತ್ ಬ್ಲಾಕ್‌ನಲ್ಲಿರುವ ರಕ್ಷಣಾ ಸಚಿವಾಲಯದ ಪ್ರಧಾನ ಕಚೇರಿಯಲ್ಲಿ ಈ ಒಪ್ಪಂದ ನಡೆಯಲಿದೆ. ಈ ಮೊದಲು, ಫ್ರಾನ್ಸ್​ ರಕ್ಷಣಾ ಸಚಿವರು ರಫೇಲ್​ ಯುದ್ಧ ವಿಮಾನ ಒಪ್ಪಂದದಲ್ಲಿ ಭಾಗವಹಿಸಬೇಕಿತ್ತು. ಆದರೆ, ವೈಯಕ್ತಿಕ ಕಾರಣಗಳಿಂದಾಗಿ ಅವರು ಈ ಭೇಟಿಯನ್ನು ರದ್ದುಗೊಳಿಸಿದ್ದರು.

ಈ ತಿಂಗಳ ಆರಂಭದಲ್ಲಿ ಭದ್ರತೆ ಕುರಿತ ಸಂಪುಟ ಸಮಿತಿಯು (CCS) ಭಾರತದ ಅತಿದೊಡ್ಡ ಫೈಟರ್ ಜೆಟ್ ಒಪ್ಪಂದಕ್ಕೆ ಅನುಮೋದನೆ ನೀಡಿತ್ತು. ಇದು ಭಾರತೀಯ ನೌಕಾಪಡೆಗೆ 26 ರಫೇಲ್ ಸಾಗರ ಯುದ್ಧ ವಿಮಾನಗಳ ಖರೀದಿಗೆ ಅವಕಾಶ ನೀಡಲಿದೆ.

ಒಪ್ಪಂದದಂತೆ 22 ಸಿಂಗಲ್-ಸೀಟರ್ ಮತ್ತು ನಾಲ್ಕು ಡಬಲ್​ ಸೀಟರ್​ ನ ರಫೇಲ್ ಸಾಗರ ಜೆಟ್‌ಗಳನ್ನು ಒಳಗೊಂಡಿರಲಿದೆ. ಯುದ್ಧ ವಿಮಾನಗಳ ನಿರ್ವಹಣೆ, ವ್ಯವಸ್ಥಾಪನಾ ಬೆಂಬಲ, ಸಿಬ್ಬಂದಿ ತರಬೇತಿ, ಮತ್ತು ಹೊಣೆಗಾರಿಕೆಯನ್ನು ಹೊಂದಿದೆ. ಜೊತೆಗೆ ಸ್ಥಳೀಯ ಉತ್ಪಾದನಾ ಘಟಕಗಳಿಗೆ ಸಮಗ್ರ ಪ್ಯಾಕೇಜ್​ ಅನ್ನು ಕೂಡ ಈ ಒಪ್ಪಂದ ಒಳಗೊಂಡಿದೆ.

ಸದ್ಯ ನೌಕಾಪಡೆಗಳಲ್ಲಿರುವ ಮಿಗ್ -29 ಕೆ ಯುದ್ಧ ವಿಮಾನಗಳು ನಿರ್ವಹಣಾ ಸಮಸ್ಯೆಗಳನ್ನು ಎದುರಿಸುತ್ತಿವೆ. ಯುದ್ಧ ಮತ್ತಿತರ ತುರ್ತು ಸಂದರ್ಭಗಳಲ್ಲಿ ಫೈಟರ್​ ಜೆಟ್​​ ಗಳ ಅವಶ್ಯತೆ ಇದೆ. ಹೀಗಾಗಿ, ರಫೇಲ್ ಯುದ್ಧ ವಿಮಾನಗಳನ್ನು ನೌಕಾಪಡೆಗಳಿಗಾಗಿ ಖರೀದಿ ಮಾಡಲಾಗುತ್ತಿದೆ. ಐಎನ್‌ಎಸ್ ವಿಕ್ರಾಂತ್‌ ಸೇರಿದಂತೆ ಯುದ್ಧ ನೌಕೆಗಳಲ್ಲಿ ಈ ಫೈಟರ್​​ ಜೆಟ್​ ಗಳನ್ನು ನಿಯೋಜಿಸಲಾಗುತ್ತದೆ.

 

Category
ಕರಾವಳಿ ತರಂಗಿಣಿ