ಹೊಸದಿಲ್ಲಿ: ಇತ್ತೀಚೆಗೆ ಜಾರಿಗೆ ತಂದ ವಕ್ಫ್ ತಿದ್ದುಪಡಿ ಕಾಯ್ದೆ, 2025ಕ್ಕೆ (Waqf Act) ಕೃತಜ್ಞತೆ ಸಲ್ಲಿಸಲು ದಾವೂದಿ ಬೊಹ್ರಾ ಸಮುದಾಯದ ನಿಯೋಗ ಗುರುವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದೆ. ಇದು ದಾವೂದಿ ಬೊಹ್ರಾ ಸಮುದಾಯದ ದೀರ್ಘಕಾಲದಿಂದ ಬಾಕಿ ಇರುವ ಬೇಡಿಕೆಯಾಗಿತ್ತು ಎಂದು ಹೇಳಿದೆ.
ನಾವು ಪ್ರಧಾನಮಂತ್ರಿಯವರ 'ಸಬ್ಕಾ ಸಾಥ್, ಸಬ್ಬಾ ವಿಕಾಸ್, ಸಬ್ಕಾ ವಿಶ್ವಾಸ್' ಎಂಬ ದೃಷ್ಟಿಕೋನದಲ್ಲಿ ನಂಬಿಕೆ ಇಟ್ಟಿದ್ದೇವೆ ಎಂದು ಅವರು ಪ್ರಧಾನಿ ಮೋದಿಗೆ ಧನ್ಯವಾದ ತಿಳಿಸಿದ್ದಾರೆ. ದಾವೂದಿ ಬೊಹ್ರಾಗಳು ಪಶ್ಚಿಮ ಭಾರತದ ಮುಸ್ಲಿಂ ಸಮುದಾಯವಾಗಿದ್ದು, ಈ ಸಮುದಾಯದವರು ಪ್ರಪಂಚದಾದ್ಯಂತ 40ಕ್ಕೂ ಹೆಚ್ಚು ದೇಶಗಳಲ್ಲಿ ನೆಲೆಸಿದ್ದಾರೆ.