image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ವಕ್ಫ್ ಮಂಡಳಿಯಲ್ಲಿ ಮುಸ್ಲಿಮೇತರರ ಸೇರ್ಪಡೆ : ವಿವರ ನೀಡಲು ಕೇಂದ್ರಕ್ಕೆ ಸುಪ್ರೀಂ 7 ದಿನಗಳ ಗಡುವು

ವಕ್ಫ್ ಮಂಡಳಿಯಲ್ಲಿ ಮುಸ್ಲಿಮೇತರರ ಸೇರ್ಪಡೆ : ವಿವರ ನೀಡಲು ಕೇಂದ್ರಕ್ಕೆ ಸುಪ್ರೀಂ 7 ದಿನಗಳ ಗಡುವು

ನವದೆಹಲಿ: ವಕ್ಫ್​ ತಿದ್ದುಪಡಿ ಕಾಯ್ದೆಯ ಸಿಂಧುತ್ವದ ಕುರಿತು ಕಾಂಗ್ರೆಸ್​​, ಸಮಾಜವಾದಿ ಸೇರಿದಂತೆ ವಿಪಕ್ಷಗಳು ಸಲ್ಲಿಸಿದ ಅರ್ಜಿಗಳ ವಿಚಾರಣೆ ಸುಪ್ರೀಂಕೋರ್ಟ್​ನಲ್ಲಿ ನಡೆಯುತ್ತಿದೆ.

ಬಳೆದಾರರಿಂದ ವಕ್ಫ್​ ಆಸ್ತಿಗಳನ್ನು ಡಿನೋಟಿಪೈ ಮಾಡುವುದು, ವಕ್ಫ್ ಮಂಡಳಿಯಲ್ಲಿ ಮುಸ್ಲಿಮೇತರರಿಗೆ ಅವಕಾಶ, ವಿವಾದಿತ ವಕ್ಫ್ ಭೂಮಿಯ ಮೇಲೆ ಜಿಲ್ಲಾಧಿಕಾರಿಯ ಅಧಿಕಾರದ ನಿಬಂಧನೆಗಳ ಬಗ್ಗೆ ವಿವರವಾದ ವರದಿ ನೀಡಲು ಸುಪ್ರೀಂಕೋರ್ಟ್​ ಕೇಂದ್ರ ಸರ್ಕಾರಕ್ಕೆ ಸೂಚಿಸಿತು.

ಈ ಮೂರು ನಿಬಂಧನೆಗಳ ಕುರಿತು ಮಧ್ಯಂತರ ಆದೇಶ ಹೊರಡಿಸಲಾಗುವುದು ಎಂದು ಸುಪ್ರೀಂಕೋರ್ಟ್​ ವಿಚಾರಣೆಯ ವೇಳೆ ತಿಳಿಸಿದಾಗ, ಆದೇಶಕ್ಕೂ ಮೊದಲು ವಿವರವಾದ ವಿಚಾರಣೆಗೆ ಕೇಂದ್ರ ಸರ್ಕಾರವು ಒಂದು ವಾರ ಗಡುವು ಕೇಳಿತು. ಇದಕ್ಕೆ ನ್ಯಾಯಪೀಠವು ಒಪ್ಪಿಗೆ ನೀಡಿದೆ.

Category
ಕರಾವಳಿ ತರಂಗಿಣಿ