ಮಳೆಗಾಲ ಸಮೀಪಿಸುತ್ತಿದ್ದು, ಅದರ ಜೊತೆ ಚಂಡಮಾರುತದಂತಹ ಪೃಕೃತಿ ವಿಕೋಪಗಳಿಂದ ಅಲ್ಲಲ್ಲಿ ಗಾಳಿ ಮಳೆಯಾಗುತ್ತಿದೆ. ಇಂತಹ ಸಂದರ್ಭಗಳಲ್ಲಿ ರಸ್ತೆ ಬದಿಗಳಲ್ಲಿ, ಶಾಲಾ ಕಾಲೇಜುಗಳ ಆವರಣಗಳಲ್ಲಿ ಮತ್ತು ಮನೆಯ ಅಕ್ಕ ಪಕ್ಕದಲ್ಲಿ ಒಣಗಿ ನಿಂತ ಬೃಹತ್ ಮರಗಳು ನಮಗೆ ಕಾಣಸಿಗುತ್ತಿದೆ. ಇಂತಹ ಒಣಗಿದ ಮರಗಳಿಂದ ಇಂದಲ್ಲ ನಾಳೆ ಅಪಾಯ ಕಟ್ಟಿಟ್ಟ ಬುತ್ತಿ. ಹಾಗಾಗಿ ಮಳೆಗಾಲ ಪ್ರಾರಂಭವಾಗುವ ಮುನ್ನವೇ ಇಂತಹ ಮರಗಳನ್ನು ತೆರವುಗೊಳಿಸಿ ಪ್ರಾಣಾಪಾಯಗಳು ಸಂಭವಿಸದಂತೆ ತಡೆಯುವ ಕೆಲಸವಾಗಬೇಕಾಗಿದೆ.