image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಫ್ರಾನ್ಸ್ ಜೊತೆ CCS ಒಪ್ಪಂದ: ಭಾರತೀಯ ನೌಕಾಪಡೆಗೆ ತುಂಬಲಿದೆ ಮತ್ತಷ್ಟು ಶಕ್ತಿ...

ಫ್ರಾನ್ಸ್ ಜೊತೆ CCS ಒಪ್ಪಂದ: ಭಾರತೀಯ ನೌಕಾಪಡೆಗೆ ತುಂಬಲಿದೆ ಮತ್ತಷ್ಟು ಶಕ್ತಿ...

ನವದೆಹಲಿ : ಪ್ರಮುಖ ಬೆಳವಣಿಗೆಯಲ್ಲಿ, ಭದ್ರತೆ ಕುರಿತ ಸಂಪುಟ ಸಮಿತಿ (CCS) ಮಂಗಳವಾರ ಭಾರತದ ಅತಿದೊಡ್ಡ ಫೈಟರ್ ಜೆಟ್ ಒಪ್ಪಂದಕ್ಕೆ ಅನುಮೋದನೆ ನೀಡಿದೆ. ಇದು ಭಾರತೀಯ ನೌಕಾಪಡೆಗೆ 26 ರಫೇಲ್ ಸಾಗರ ಯುದ್ಧ ವಿಮಾನಗಳ ಖರೀದಿಗೆ ಅವಕಾಶ ನೀಡಲಿದೆ. ಭಾರತ ಸರ್ಕಾರವು, ಫ್ರಾನ್ಸ್​ ಜೊತೆಗೆ 63 ಸಾವಿರ ಕೋಟಿ ರೂಪಾಯಿ ಮೌಲ್ಯದ ಒಪ್ಪಂದ ಮಾಡಿಕೊಳ್ಳಲಿದ್ದು, ಈ ಒಪ್ಪಂದವು 22 ಸಿಂಗಲ್-ಸೀಟರ್ ಮತ್ತು ನಾಲ್ಕು ಟ್ವಿನ್-ಸೀಟರ್ ರಫೇಲ್ ಸಾಗರ ಜೆಟ್‌ಗಳನ್ನು ಒಳಗೊಂಡಿರಲಿದೆ. ಯುದ್ಧ ವಿಮಾನಗಳ ನಿರ್ವಹಣೆ, ವ್ಯವಸ್ಥಾಪನಾ ಬೆಂಬಲ, ಸಿಬ್ಬಂದಿ ತರಬೇತಿ, ಮತ್ತು ಹೊಣೆಗಾರಿಕೆಯನ್ನು ಹೊಂದಿದೆ. ಜೊತೆಗೆ ಸ್ಥಳೀಯ ಉತ್ಪಾದನಾ ಘಟಕಗಳಿಗೆ ಸಮಗ್ರ ಪ್ಯಾಕೇಜ್​ ಅನ್ನು ಕೂಡ ಈ ಒಪ್ಪಂದ ಒಳಗೊಂಡಿದೆ.

ಒಪ್ಪಂದಕ್ಕೆ ಸಹಿ ಹಾಕಿದ ಸುಮಾರು 5 ವರ್ಷಗಳ ನಂತರ ರಫೇಲ್ ಜೆಟ್‌ಗಳು ಸಿಗುವ ನಿರೀಕ್ಷೆಯಿದೆ. ಇವುಗಳನ್ನು ಭಾರತದ ಮೊದಲ ಸ್ವದೇಶಿ ವಿಮಾನವಾಹಕ ಯುದ್ಧ ನೌಕೆ ಐಎನ್​ಎಸ್​ ವಿಕ್ರಾಂತ್‌ನಲ್ಲಿ ನಿಯೋಜಿಸಲಾಗುವುದು. ನೌಕಾಪಡೆಯಲ್ಲಿ ಸದ್ಯ ಇರುವ MiG-29K ಸ್ಥಾನದಲ್ಲಿ ಇವುಗಳು ಕಾರ್ಯಾಚರಣೆ ನಡೆಸಲಿವೆ.

ಭಾರತೀಯ ವಾಯುಪಡೆ (ಐಎಎಫ್​) ಈಗಾಗಲೇ ಅಂಬಾಲಾ ಮತ್ತು ಹಶಿಮಾರಾ ನೆಲೆಗಳಲ್ಲಿ 36 ರಫೇಲ್ ಜೆಟ್‌ಗಳನ್ನು ಹೊಂದಿದೆ. ಹೊಸ ರಫೇಲ್ ಯುದ್ಧ ವಿಮಾನಗಳ ಒಪ್ಪಂದವು ಇತರ ವಿಮಾನಗಳಿಗೆ ಆಗಸದಲ್ಲೇ ಇಂಧನ ತುಂಬಿಸುವ ಸಾಮರ್ಥ್ಯವನ್ನು ಹೆಚ್ಚಿಸಲಿದೆ.

ಐಎನ್​​ಎಸ್​ ವಿಕ್ರಾಂತ್​​ನಲ್ಲಿ ರಫೇಲ್​ ಯುದ್ಧ ವಿಮಾನಗಳನ್ನು ಅಳವಡಿಸಿದ ಬಳಿಕ, ಮಿಗ್​-29ಕೆ ವಿಮಾನಗಳು ಐಎನ್​​ಎಸ್​ ವಿಕ್ರಮಾದಿತ್ಯದಲ್ಲಿ ನಿಯೋಜಿಸಲಾಗುವುದು. ಇದರಿಂದ ನೌಕಾಪಡೆಯ ಶಕ್ತಿಯೂ ಹೆಚ್ಚಲಿದೆ.

Category
ಕರಾವಳಿ ತರಂಗಿಣಿ