image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕೌಶಲ್ಯ ಅಭಿವೃದ್ಧಿಗೆ ಮೆಲ್ಬೋರ್ನ್​ ಮೂಲದ ವಿವಿ ಮತ್ತು ಕರ್ನಾಟಕ ಸರ್ಕಾರದ ನಡುವೆ ಸಹಯೋಗ

ಕೌಶಲ್ಯ ಅಭಿವೃದ್ಧಿಗೆ ಮೆಲ್ಬೋರ್ನ್​ ಮೂಲದ ವಿವಿ ಮತ್ತು ಕರ್ನಾಟಕ ಸರ್ಕಾರದ ನಡುವೆ ಸಹಯೋಗ

ಬೆಂಗಳೂರು: ಕರ್ನಾಟಕ ಕೌಶಲ್ಯ ಅಭಿವೃದ್ಧಿ ಇಲಾಖೆ ಮತ್ತು ಮೆಲ್ಬೋರ್ನ್(melbourn) ಮೂಲದ ಆರ್‌ಎಂಐಟಿ(rmit) ವಿಶ್ವವಿದ್ಯಾಲಯವು(univercity) ರಾಜ್ಯದ ಕೌಶಲ್ಯಾಭಿವೃದ್ಧಿ ವಲಯದಲ್ಲಿ ವಿದ್ಯಾರ್ಥಿಗಳಿಗೆ ಮರು-ಕೌಶಲ್ಯ ಮತ್ತು ಉನ್ನತೀಕರಣಕ್ಕೆ ಹೆಚ್ಚು ಆದ್ಯತೆ ನೀಡಲು ಮುಂದಾಗಿವೆ.

ಈ ನಿಟ್ಟಿನಲ್ಲಿ ಕೆಲವು ಉಪಕ್ರಮಗಳನ್ನು ಜಾರಿಗೆ ತರುವ ಕುರಿತು ಸಮಾಲೋಚನೆ ನಡೆಸಲಾಗಿದೆ. ಉಪ ಕುಲಪತಿ ಮಿಶ್ ಈಸ್ಟ್‌ಮನ್ ನೇತೃತ್ವದ ಆರ್‌ಎಂಐಟಿ ವಿಶ್ವವಿದ್ಯಾಲಯದ ನಿಯೋಗವು ವೃತ್ತಿಪರ ಶಿಕ್ಷಣ ಕಾಲೇಜಿನ ನಿರ್ದೇಶಕ ಪ್ರಶೀಲ್ ಸಿಂಗ್; ವಿಕ್ಟೋರಿಯಾ ಸರ್ಕಾರದ (Australia) ವ್ಯವಸ್ಥಾಪಕ ಜಸ್ಟಿನ್ ಸ್ಮಿತ್ ಮತ್ತು ಪ್ರಾದೇಶಿಕ ನಿರ್ದೇಶಕಿ (education) ಆನಿ ಸಂತಾನ ಅವರೊಂದಿಗೆ ವಿಕಾಸಸೌಧದಲ್ಲಿ(vikasa soudha) ಇಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣ್ ಪ್ರಕಾಶ್ ಪಾಟೀಲ್ ಚರ್ಚಿಸಿದರು.

ಕೌಶಲ್ಯ ಅಭಿವೃದ್ಧಿಯಲ್ಲಿ ವಿಶ್ವವಿದ್ಯಾಲಯ ಮತ್ತು ಕರ್ನಾಟಕ (karnataka) ಸರ್ಕಾರದ ನಡುವಿನ ಸಹಯೋಗವನ್ನು ಬಲಪಡಿಸುವ ಬಗ್ಗೆ ಸುದೀರ್ಘವಾಗಿ ಸಮಾಲೋಚನೆ ನಡೆಸಲಾಯಿತು.

ಕೌಶಲ್ಯ ಶಿಕ್ಷಣದಲ್ಲಿ ಕರ್ನಾಟಕ ಸರ್ಕಾರದ ಪ್ರಯತ್ನಗಳು ಉನ್ನತಮಟ್ಟದಲ್ಲಿವೆ ಎಂದು ಈಸ್ಟ್‌ಮನ್ ಶ್ಲಾಘಿಸಿದರು. ಇಲಾಖೆಯೊಂದಿಗೆ ದೀರ್ಘಕಾಲೀನ ಪಾಲುದಾರಿಕೆ ಹೊಂದಲು ಆರ್‌ಎಂಐಟಿ ಬದ್ಧವಾಗಿದೆ ಎಂದು ಹೇಳಿದರು.

ಆರ್‌ಎಂಐಟಿ ಈಗಾಗಲೇ ಕೆಲವು ಭಾರತೀಯ ವಿಶ್ವವಿದ್ಯಾಲಯಗಳೊಂದಿಗೆ ಸಹಯೋಗ ಹೊಂದಿದೆ ಮತ್ತು ಸಮಕಾಲೀನ, ಜಾಗತಿಕವಾಗಿ ಪ್ರಸ್ತುತವಾದ ಕೌಶಲ್ಯಾಭಿವೃದ್ಧಿ ಯೋಜನೆಗಳು, ತರಬೇತುದಾರರಿಗೆ ತರಬೇತಿ ನೀಡಲು ಉತ್ಸುಕವಾಗಿದೆ ಎಂದು ಈಸ್ಟ್‌ಮನ್‌(eastman) ಸ್ಪಷ್ಟಪಡಿಸಿದರು.

ಜಾಗತಿಕ(global) ಮಾನದಂಡಗಳನ್ನು ಅಳವಡಿಸಲು, ತರಬೇತುದಾರರನ್ನು ಮೇಲ್ದರ್ಜೆಗೇರಿಸುವುದು ಕೌಶಲ್ಯ ಉದ್ಯಮಕ್ಕೆ ಗಮನಾರ್ಹ ಪ್ರಗತಿಗೆ ಕಾರಣವಾಗಲಿದೆ ಎಂದು ಈಸ್ಟ್‌ಮನ್‌ ಹೇಳಿದರು. ಕೌಶಲ್ಯ ಅಭಿವೃದ್ಧಿ ಇಲಾಖೆಯ ಅಡಿಯಲ್ಲಿ ಕೌಶಲ್ಯ ತರಬೇತುದಾರರಿಗೆ ತರಬೇತಿ ನೀಡುವಲ್ಲಿ ಪರಿಣತಿ ಹೊಂದಿರುವ ಚಿಕ್ಕಬಳ್ಳಾಪುರದಲ್ಲಿರುವ ಮೋಕ್ಷಗುಂಡಂ ವಿಶ್ವೇಶ್ವರಯ್ಯ(vishweshwaraih) ಸಂಸ್ಥೆಯ ಬಗ್ಗೆ ಸಚಿವ ಡಾ. ಶರಣ್‌ ಪ್ರಕಾಶ್‌ ಪಾಟೀಲ್ ವಿವರಿಸಿದರು.

Category
ಕರಾವಳಿ ತರಂಗಿಣಿ