image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಶ್ವೇತ ಭವನದಲ್ಲಿ ಇಪ್ತಾರ್ ಕೂಟ: ಮುಸ್ಲಿಮರಿಗೆ ಧನ್ಯವಾದ ತಿಳಿಸಿದ ಟ್ರಂಪ್

ಶ್ವೇತ ಭವನದಲ್ಲಿ ಇಪ್ತಾರ್ ಕೂಟ: ಮುಸ್ಲಿಮರಿಗೆ ಧನ್ಯವಾದ ತಿಳಿಸಿದ ಟ್ರಂಪ್

ಅಮೆರಿಕ: ತಮ್ಮ ಸರ್ಕಾರವು ಮುಸ್ಲಿಂ ಸಮುದಾಯಕ್ಕೆ ನೀಡಿದ ಭರವಸೆಗಳನ್ನು ಈಡೇರಿಸುತ್ತಿದೆ ಮತ್ತು ಮಧ್ಯಪ್ರಾಚ್ಯದಲ್ಲಿ ಶಾಶ್ವತ ಶಾಂತಿಯನ್ನು ಸ್ಥಾಪಿಸಲು ನಿರಂತರ ರಾಜತಾಂತ್ರಿಕತೆಯಲ್ಲಿ ತೊಡಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಪಾದಿಸಿದ್ದಾರೆ.

ಶ್ವೇತಭವನದಲ್ಲಿ ಆಯೋಜಿಸಲಾದ ವಾರ್ಷಿಕ ಇಫ್ತಾರ್ ಕೂಟದಲ್ಲಿ ಟ್ರಂಪ್ ಮಾತನಾಡಿ, 2024 ರ ಅಧ್ಯಕ್ಷೀಯ ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸಿದ ಲಕ್ಷಾಂತರ ಮುಸ್ಲಿಂ - ಅಮೆರಿಕನ್ನರಿಗೆ ಅವರು ಇದೇ ಸಂದರ್ಭದಲ್ಲಿ ಧನ್ಯವಾದ ಅರ್ಪಿಸಿದರು.

"ಸದ್ಯ ಇಸ್ಲಾಮಿಕ್ ಪವಿತ್ರ ರಂಜಾನ್ ತಿಂಗಳು ನಡೆಯುತ್ತಿರುವುದರಿಂದ, ನನ್ನ ಮುಸ್ಲಿಂ ಸ್ನೇಹಿತರಿಗೆ ರಂಜಾನ್ ಮುಬಾರಕ್ ಎಂದು ಹೇಳುವ ಮೂಲಕ ನಾನು ಮಾತು ಪ್ರಾರಂಭಿಸುತ್ತೇನೆ" ನವೆಂಬರ್​ ತಿಂಗಳಲ್ಲಿ ಮುಸ್ಲಿಂ ಸಮುದಾಯವು ನನ್ನ ಬೆಂಬಲಕ್ಕೆ ಬಂದಿತ್ತು. ಈಗ ಅಧ್ಯಕ್ಷನಾಗಿರುವ ನಾನು ನಿಮ್ಮ ಜೊತೆಗಿರುತ್ತೇನೆ. ಇದು ನಿಮಗೆ ಗೊತ್ತಿದೆ ಎಂದು ಭಾವಿಸುತ್ತೇನೆ. ನಾವು ಮುಸ್ಲಿಂ ಸಮುದಾಯಕ್ಕೆ ನೀಡಿದ ಭರವಸೆಗಳನ್ನು ಈಡೇರಿಸುತ್ತಿದ್ದೇವೆ. ನಮ್ಮ ಆಡಳಿತವು ಮಧ್ಯಪ್ರಾಚ್ಯದಲ್ಲಿ ಶಾಶ್ವತ ಶಾಂತಿಯನ್ನು ತರಲು ನಿರಂತರ ರಾಜತಾಂತ್ರಿಕತೆಯಲ್ಲಿ ತೊಡಗಿದೆ. ಐತಿಹಾಸಿಕ ಒಪ್ಪಂದಗಳನ್ನು ಮಾಡಿಕೊಳ್ಳುತ್ತಿದೆ. ಇದೆಲ್ಲವನ್ನು ಮಾಡಲು ಅಸಾಧ್ಯ ಎಂದು ಹೇಳುತ್ತಿದ್ದರು. ಆದರೆ, ನಾವು ಅಂಥ ಕೆಲಸಗಳನ್ನು ಸಾಧ್ಯವಾಗಿಸುತ್ತಿದ್ದೇವೆ. ನಿಮಗೆ ತಿಳಿದಿರುವಂತೆ, ಬೈಡನ್ ಅಂಥ ಯಾವ ಕೆಲಸಗಳನ್ನೂ ಮಾಡಲಿಲ್ಲ" ಎಂದು ಊಟಕ್ಕಿಂತ ಮುಂಚೆ ಟ್ರಂಪ್ ತಮ್ಮ ಸಂಕ್ಷಿಪ್ತ ಭಾಷಣದಲ್ಲಿ ಹೇಳಿದರು.

ಪವಿತ್ರ ತಿಂಗಳಲ್ಲಿ ಪ್ರತಿದಿನ ಮುಸ್ಲಿಮರು ಮುಂಜಾನೆಯಿಂದ ಮುಸ್ಸಂಜೆಯವರೆಗೆ ಉಪವಾಸ ಮಾಡುತ್ತಾರೆ. ಪ್ರಾರ್ಥನೆ ಮತ್ತು ದೇವರ ಮೇಲಿನ ಭಕ್ತಿಯ ಮೇಲೆ ತಮ್ಮ ಗಮನವನ್ನು ಆಳಗೊಳಿಸುತ್ತಾರೆ. ಪ್ರಪಂಚದಾದ್ಯಂತದ ಮುಸ್ಲಿಮರು ಪ್ರತಿ ರಾತ್ರಿ ಕುಟುಂಬ ಮತ್ತು ಸ್ನೇಹಿತರೊಂದಿಗೆ ಸೇರಿ ಸರ್ವಶಕ್ತನಿಗೆ ಧನ್ಯವಾದಗಳನ್ನು ಅರ್ಪಿಸುತ್ತಾರೆ. ಇಫ್ತಾರ್ ಭೋಜನದೊಂದಿಗೆ ತಮ್ಮ ಉಪವಾಸವನ್ನು ಮುರಿಯುತ್ತಾರೆ. ನಾವೆಲ್ಲರೂ ಇಡೀ ಜಗತ್ತಿಗೆ ಶಾಂತಿ ಹುಡುಕುತ್ತಿದ್ದೇವೆ ಎಂದು ಅವರು ನುಡಿದರು.

ಗಾಜಾದ ಮೇಲೆ ಇಸ್ರೇಲ್ ಮತ್ತೆ ಭೀಕರ ಬಾಂಬ್ ದಾಳಿಯನ್ನು ಪ್ರಾರಂಭಿಸಿದ್ದು, ಕದನ ವಿರಾಮ ಬಹುತೇಕ ಕೊನೆಗೊಂಡಂತಾಗಿದೆ. ಅಲ್ಲಿ ಮತ್ತೆ ಯುದ್ಧ ಆರಂಭವಾಗಿರುವ ಮಧ್ಯದಲ್ಲಿ ಶ್ವೇತಭವನದಲ್ಲಿ ಇಫ್ತಾರ್ ಔತಣಕೂಟ ನಡೆದಿದೆ. 2018 ರಲ್ಲಿ ಅಧ್ಯಕ್ಷ ಟ್ರಂಪ್ ಮೊದಲ ಬಾರಿಗೆ ಪವಿತ್ರ ರಂಜಾನ್ ತಿಂಗಳನ್ನು ಆಚರಿಸಲು ಇಫ್ತಾರ್ ಕೂಟವನ್ನು ಆಯೋಜಿಸಿದ್ದರು.

Category
ಕರಾವಳಿ ತರಂಗಿಣಿ