image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಉತ್ತರಕಾಶಿಯ ದೊಡಿತಾಲ್​​ನಲ್ಲಿ ಸಿಕ್ಕಿಬಿದ್ದ ಇಬ್ಬರು ಚಾರಣಿಗರು

ಉತ್ತರಕಾಶಿಯ ದೊಡಿತಾಲ್​​ನಲ್ಲಿ ಸಿಕ್ಕಿಬಿದ್ದ ಇಬ್ಬರು ಚಾರಣಿಗರು

ಉತ್ತರಕಾಶಿ: ಚಾರಣಕ್ಕೆ ಹೋಗಿದ್ದ ಇಬ್ಬರು ಸ್ಥಳೀಯ ಚಾರಣಿಗರು ದೊಡಿತಾಲ್​ನಲ್ಲಿ ಮಾಂಝಿಗಿಂತ ಒಂದು ಕಿಮೀ ಹಿಂದೆ ಸಿಕ್ಕಿಬಿದ್ದಿದ್ದಾರೆ. ಇಬ್ಬರು ಸ್ಥಳೀಯ ಚಾರಣಿಗರ ಬಗ್ಗೆ ತುರ್ತು SOS ಕರೆ ಸ್ವೀಕರಿಸಲಾಗಿದೆ. ಜಿಲ್ಲಾಧಿಕಾರಿ ಡಾ.ಮೆಹರ್ಬನ್ ಸಿಂಗ್ ಬಿಶ್ತ್ ಅವರು ತಕ್ಷಣ ಎಸ್‌ಡಿಆರ್‌ಎಫ್, ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆಯ ತಂಡಗಳನ್ನು ರಕ್ಷಣೆಗಾಗಿ ಸ್ಥಳಕ್ಕೆ ಕಳುಹಿಸಿದ್ದಾರೆ. ಈ ಟ್ರ್ಯಾಕರ್‌ಗಳಲ್ಲಿ ಒಬ್ಬರು ಹೃದಯಾಘಾತದಿಂದ ಬಳಲುತ್ತಿದ್ದಾರೆ ಎಂದು ವರದಿಯಾಗಿದೆ.

ಸದ್ಯ ಸಿಕ್ಕಿರುವ ಮಾಹಿತಿ ಪ್ರಕಾರ, ಇಬ್ಬರು ಚಾರಣಿಗರಿಗೆ ಗೋಪಾಲಕರ ನೆರವು ಸಿಕ್ಕಿದೆ ಎಂಬ ಮಾಹಿತಿ ಬಂದಿದೆ. ಸಿಕ್ಕಿರುವ ಮಾಹಿತಿಯ ಪ್ರಕಾರ, ಘಟನಾ ಸ್ಥಳವು ರಸ್ತೆಯಿಂದ ಸುಮಾರು 9 ಕಿ.ಮೀ ದೂರದಲ್ಲಿದೆ. ಸ್ಥಳೀಯ ದನಗಾಹಿಗಳು ಚಾರಣಿಗರನ್ನು ತಮ್ಮ ಶೆಡ್‌ಗಳಲ್ಲಿ ಇರಿಸಿಕೊಂಡಿದ್ದಾರೆ. ಇವರಲ್ಲಿ ಒಬ್ಬರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ಕಾಂತ ಪ್ರಸಾದ್ ಎಂಬ ವ್ಯಕ್ತಿಯನ್ನು ಸುರಕ್ಷಿತವಾಗಿದ್ದಾರೆ ಎನ್ನುವ ಮಾಹಿತಿ ಇದೆ.

ತುರ್ತು ಕರೆ ಸ್ವೀಕರಿಸಿದ ಕೂಡಲೇ ರಕ್ಷಣಾ ಕರ್ಯಾಚರಣೆ ಕೈಗೊಂಡಿದ್ದು, ಅಗತ್ಯ ಔಷಧಗಳೊಂದಿಗೆ ವೈದ್ಯಕೀಯ ತಂಡವನ್ನು ನಿಯೋಜಿಸುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು. ಜಿಲ್ಲಾಧಿಕಾರಿ, ಅಗುಡಾ ಮತ್ತು ದೊಡಿತಾಲ್ ಸೇರಿದಂತೆ ಹತ್ತಿರದ ಹಳ್ಳಿಗಳ ಸ್ಥಳೀಯ ಜನರನ್ನು ಚಾರಣಿಗರಿಗೆ ಸಹಾಯ ಮಾಡುವಂತೆ ಕೇಳಿಕೊಂಡರು. ಜಿಲ್ಲಾಧಿಕಾರಿಗಳ ಸೂಚನೆಯಂತೆ ರಕ್ಷಣಾ ತಂಡಗಳು ಕೂಡಲೇ ಸ್ಥಳಕ್ಕೆ ತೆರಳಿವೆ.

ಸಿಕ್ಕಿಬಿದ್ದಿರುವ ಚಾರಣಿಗರಲ್ಲಿ ಒಬ್ಬರು ಉತ್ತರಕಾಶಿಯ PWDಯಲ್ಲಿ ಸಹಾಯಕ ಎಂಜಿನಿಯರ್ ಆಗಿದ್ದಾರೆ. ಉತ್ತರಕಾಶಿಯಿಂದ ಪಿಡಬ್ಲ್ಯುಡಿಯ ಇಬ್ಬರು ಕಿರಿಯ ಎಂಜಿನಿಯರ್‌ಗಳು ಸಹ ಸ್ಥಳಕ್ಕೆ ತೆರಳಿದ್ದಾರೆ ಎಂದು ಕಾರ್ಯನಿರ್ವಾಹಕ ಎಂಜಿನಿಯರ್ ರಜನೀಶ್ ಕುಮಾರ್ ತಿಳಿಸಿದರು.

ರಕ್ಷಣಾ ತಂಡಗಳೊಂದಿಗೆ ಪೊಲೀಸರು ಸಮನ್ವಯತೆ ಕಾಯ್ದುಕೊಳ್ಳುತ್ತಿದ್ದಾರೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಪ್ರಶಾಂತ್ ಕುಮಾರ್ ತಿಳಿಸಿದರು. ಅಗತ್ಯವಿದ್ದರೆ ಹೆಚ್ಚುವರಿ ಸಿಬ್ಬಂದಿಯನ್ನು ರಕ್ಷಣಾ ಕಾರ್ಯಚರಣೆಗೆ ನಿಯೋಜಿಸಲಾಗುವುದು. ಬ್ಲಾಕ್ ಅಭಿವೃದ್ಧಿ ಅಧಿಕಾರಿ ಭಟವಾಡಿ ಅವರು ಅಗೂಡದ ಪ್ರದೇಶ ಪಂಚಾಯಿತಿ ಸದಸ್ಯರನ್ನು ಸಂಪರ್ಕಿಸಿ ಸ್ಥಳೀಯ ಜನರನ್ನು ರಕ್ಷಣೆಗೆ ಕಳುಹಿಸುವಂತೆ ಮನವಿ ಮಾಡಿದರು.

ಸಿಎಂಒ ಡಾ.ಬಿ.ಎಸ್.ರಾವತ್ ಮಾತನಾಡಿ, ಜಿಲ್ಲಾಸ್ಪತ್ರೆಯಿಂದ ಆ್ಯಂಬುಲೆನ್ಸ್ ಸಹಿತ ಡಾ.ಬಿ.ಎಸ್.ಪಂಗ್ಟಿ ನೇತೃತ್ವದ ವೈದ್ಯಕೀಯ ತಂಡವನ್ನು ಕಳುಹಿಸಲಾಗಿದೆ. ವೈದ್ಯಕೀಯ ತಂಡದೊಂದಿಗೆ ಸಮನ್ವಯತೆ ಕಾಯ್ದುಕೊಳ್ಳುವಂತೆ ಎಸ್‌ಡಿಆರ್‌ಎಫ್ ಮತ್ತು ಪೊಲೀಸ್ ರಕ್ಷಣಾ ತಂಡಗಳಿಗೆ ಪೊಲೀಸ್ ವರಿಷ್ಠಾಧಿಕಾರಿ ಅರ್ಪಣ್ ಯದುವಂಶಿ ಸೂಚನೆ ನೀಡಿದ್ದಾರೆ. ಎಸ್‌ಡಿಆರ್‌ಎಫ್ ಇನ್​ಸ್ಪೆಕ್ಟರ್ ಜಗದಂಬ ಪ್ರಸಾದ್ ಬಿಜಲ್ವಾನ್ ಅವರು ದೊಡಿತಾಲ್ ಚಾರಣದಲ್ಲಿ ಸಿಲುಕಿರುವ ಇಬ್ಬರು ಸ್ಥಳೀಯ ಚಾರಣಿಗರನ್ನು ರಕ್ಷಿಸಲು ಹತ್ತು ಎಸ್‌ಡಿಆರ್‌ಎಫ್ ಸದಸ್ಯರ ತಂಡ ಮತ್ತು ಕೆಲವು ಪೊಲೀಸ್ ಸಿಬ್ಬಂದಿಯ ಜೊತೆಗೆ ಸ್ಥಳಕ್ಕೆ ತೆರಳಿದ್ದಾರೆ ಎಂದು ಮಾಹಿತಿ ನೀಡಿದರು.

ಎಮರ್ಜೆನ್ಸಿ ಆಪರೇಷನ್ ಸೆಂಟರ್‌ನಿಂದ ಬಂದ ಮಾಹಿತಿಯ ಪ್ರಕಾರ, ಇದುವರೆಗೆ 10 ಎಸ್‌ಡಿಆರ್‌ಎಫ್ ಸಿಬ್ಬಂದಿ, 4 ಪೊಲೀಸ್ ಸಿಬ್ಬಂದಿ, 4 ಅರಣ್ಯ ಇಲಾಖೆ ಸಿಬ್ಬಂದಿ, 4 ಲೋಕೋಪಯೋಗಿ ಇಲಾಖೆ ಸಿಬ್ಬಂದಿ, 4 ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತು 108 ಆಂಬ್ಯುಲೆನ್ಸ್ ತಂಡ ಸೇರಿದಂತೆ 5 ಸ್ಥಳೀಯ ವ್ಯಕ್ತಿಗಳ ತಂಡ ರಕ್ಷಣಾ ಕಾರ್ಯಕ್ಕೆ ತೆರಳಿದೆ.

Category
ಕರಾವಳಿ ತರಂಗಿಣಿ