ಬೆಂಗಳೂರು: ಸುರ್ವೆ ಕಲ್ಚರಲ್ ಅಕಾಡೆಮಿ ಮತ್ತು ಭಾರತರತ್ನ ಸರ್. ಎಂ. ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾನ ಟ್ರಸ್ಟ್ (ರಿ.) ಸಹಯೋಗದೊಂದಿಗೆ ತನ್ನ 32ನೇ ವರ್ಷದ ವಾರ್ಷಿಕೋತ್ಸವದ ಅಂಗ ವಾಗಿ, ಮಾರ್ಚ್ 8ರ ಶನಿವಾರ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ದಿನ ದಂದು, ಬೆಂಗಳೂರಿನ ನಯನ ರಂಗಮಂದಿರದಲ್ಲಿ ಪೂರ್ಣ ದಿನ, ಅಖಿಲ ಭಾರತ ಕನ್ನಡ ಕವಿಗಳ ಸಮ್ಮೇಳನ ನಡೆಯಿತು. ಇದರಲ್ಲಿ 10ನೇ ರಾಷ್ಟ್ರೀಯ ನೃತ್ಯ ಕಲಾಮೇಳ ಮತ್ತು 71ನೇ ಸಾಂಸ್ಕೃತಿಕ ಪ್ರತಿಭೋತ್ಸವ ಸಾಂಸ್ಕೃತಿಕ ಕಾರ್ಯ ಕ್ರಮಗಳೊಂದಿಗೆ 32ನೇ ವರ್ಷದ ಅಕಾಡೆಮಿ ಪ್ರಶಸ್ತಿಗಳನ್ನು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 35 ಸಾಧಕರಿಗೆ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸಿನಿಮಾ ಕ್ಷೇತ್ರದ ಸಾಧನೆಗೆ ಕರ್ನಾಟಕ ಚಲನ ಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷರಾದ ಎನ್ನಾರ್ ಕೆ ವಿಶ್ವನಾಥ್ ಅವರಿಗೆ ವಿಶ್ವೇಶ್ವರಯ್ಯ ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಾರ್ಯಕ್ರಮದ ಅಧ್ಯಕ್ಷರಾಗಿ ಆಗಮಿಸಿ ಪ್ರಶಸ್ತಿ ಪ್ರಧಾನ ಮಾಡಿದ ಮಾಜಿ ಸಚಿವರಾದ ಲೀಲಾವತಿ ಆರ್ ಪ್ರಸಾದ್ ಮಾತಾನಾಡಿ ಸುರ್ವೆ ಕಲ್ಚರ್‌ನ ರಮೇಶ್ ಸುರ್ವೆಯವರು ಮಾಡುತ್ತಿರುವ ಸಾರ್ವಜನಿಕ ಸೇವೆಯನ್ನು ಮೆಚ್ಚಿ ಅಭಿನಂದಿಸಿದರು.
ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ್ದ ಕಲ್ಮೇಶ್ವರ ಸ್ವಾಮಿಜಿ ಗಳು, ರಾಜೇಂದ್ರ ಎಸ್ ಗಡದ್, ಶ್ರೀಮತಿ ನಳಿನಾ, ನಟ ಶಂಕರ್ ಭಟ್, ಸಾಹಿತಿ ಎಂಜಿ ಆರ್ ಅರಸ್ ಮುಂತಾದವರು ರಮೇಶ್ ಸುರ್ವೆ ಅವರ ಸಾಧನೆ ಮತ್ತು ಸಾಹಸವನ್ನು ಶ್ಲಾಘಿಸಿದರು. ಪತ್ರಿಕಾ ಸಂಪಾದಕರು, ಚಲನ ಚಿತ್ರ ನಿರ್ದೇಶಕರೂ ಆಗಿರುವ ರಮೇಶ್ ಸುರ್ವೆ ಅವರು 35 ವರ್ಷಗಳಿಂದ ನಿರಂತರ ವಾಗಿ ವಿವಿಧ ಕ್ಷೇತ್ರದ ಸಾಧಕರನ್ನು ಗುರುತಿಸಿ ಗೌರವಿಸುತ್ತಾ ಬರುತ್ತಿರುವ ಅವರಿಗೆ ನಾವು ಅಭಿನಂದನೆ ಸಲ್ಲಿಸಬೇಕು.