image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಹಿಂದೂ ಯುವಕರು ಅನ್ಯ ಧರ್ಮದ ಯುವತಿಯರನ್ನು ಪ್ರೀತಿಸಿ ಮದುವೆಯಾಗಬೇಕು- ಚಕ್ರವರ್ತಿ ಸೂಲಿಬೆಲೆ....!

ಹಿಂದೂ ಯುವಕರು ಅನ್ಯ ಧರ್ಮದ ಯುವತಿಯರನ್ನು ಪ್ರೀತಿಸಿ ಮದುವೆಯಾಗಬೇಕು- ಚಕ್ರವರ್ತಿ ಸೂಲಿಬೆಲೆ....!

ಮಂಗಳೂರು : ನಮ್ಮ   ಯುವಕರು ಅನ್ಯ ಧರ್ಮದ ಯುವತಿಯರನ್ನು ಪ್ರೀತಿಸಿ ಮದುವೆ ಮದುವೆಯಾಗಿ ಎಂದು ವಾಗ್ಮಿ ಚಕ್ರಚರ್ತಿ ಸೂಲಿಬೆಲೆ ಕರೆಕೊಟ್ಟಿದ್ದಾರೆ. ಭಾನುವಾರ ನಡೆದ ದಕ್ಷಿಣಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಕುತ್ತಾರು ಎಂಬಲ್ಲಿ ವಿಹೆಚ್‌ಪಿ  ಹಮ್ಮಿಕೊಂಡಿದ್ದ “ಕೊರಗಜ್ಜನ ಆದಿ ಕ್ಷೇತ್ರಕ್ಕೆ ನಮ್ಮ ನಡೆ" ಪಾದಯಾತ್ರೆಯ ಸಮಾರೋಪದಲ್ಲಿ  ಮಾತನಾಡಿ, ನಮ್ಮ ಧರ್ಮದಲ್ಲೂ ಸ್ವಲ್ಪ ಬದಲಾವಣೆ ತರೋಣ ಎಷ್ಟು ದಿನ ಅಂತ ನಮ್ಮದೇ ಹೆಣ್ಣುಮಕ್ಕಳನ್ನು ನೋಡುತ್ತೀರಾ? ಹುಡುಗಿ ಸಿಗಲಿಲ್ಲ, ಹುಡುಗಿ ಸಿಗಲಿಲ್ಲ ಎಂದು ಎಷ್ಟು ದಿನ ಅಂತ ಹೇಳೋಣ. ಸ್ವಲ್ಪ ಬೇರೆಯವರನ್ನು ನೋಡಿ ಅಲ್ವಾ.  ನಮ್ಮ ಸಮಾಜದ ಗಂಡು ಮಕ್ಕಳಿಗೆ ಹೆಣ್ಣು ಸಿಕ್ಕಿಲ್ಲವೆಂದು ಆಲೋಚನೆ ಮಾಡುತ್ತಿರುವಾಗ ಅವರನ್ನು ಪ್ರೀತಿಸಿ ಮದುವೆಯಾಗೋಣ ಪಕ್ಕದ ಸಮಾಜದಲ್ಲೂ ಸಮಸ್ಯೆಗಳು ಇದೆ ಅಲ್ವಾ? ಧೈರ್ಯ ತುಂಬಿ ಅಲ್ವಾ ಎಂದು ಸೂಲಿಬೆಲೆ ಹೇಳಿದರು.

ನಮ್ಮ ಅಮ್ಜದ್ ಹೆಣ್ಣುಮಕ್ಕಳನ್ನು ಲವ್ ಜಿಹಾದ್ ಮೂಲಕ ಮದುವೆಯಾಗುತ್ತಿದ್ದರು. ಮತಾಂತರ ಮಾಡುತ್ತಿದ್ದರು. ಈಗ ಹಿಂದೂ ಯುವತಿಯರು ಎಚ್ಚೆತ್ತುಕೊಂಡಿದ್ದಾರೆ. ನಾವು ಕೂಡ ಅನ್ಯ ಧರ್ಮದ ಯುವತಿಯರನ್ನು ಮದುವೆಯಾಗೋಣ, ಎಲ್ಲಿಯ ವರೆಗೂ ಲವ್ ಜಿಹಾದ್ ಬಗ್ಗೆ ಮಾತನಾಡುತ್ತಿರೋಣ? ಸ್ವಲ್ಪ ಬದಲಾವಣೆ ತರೋಣ ಎಂದು ಹೇಳು ಮೂಲಕ ಕರಾವಳಿಯಲ್ಲಿ ಸಂಚಲನ ಮೂಡಿಸಿದ್ದಾರೆ.

Category
ಕರಾವಳಿ ತರಂಗಿಣಿ