image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಸಂಚಲನ ಮೂಡಿಸಿ ನಾಪತ್ತೆಯಾಗಿದ್ದ ದಿಗಂತ್ ಪತ್ತೆ : ಕರಾವಳಿಯಲ್ಲಿ ತಪ್ಪಿದ ಕೋಲಾಹಲ...

ಸಂಚಲನ ಮೂಡಿಸಿ ನಾಪತ್ತೆಯಾಗಿದ್ದ ದಿಗಂತ್ ಪತ್ತೆ : ಕರಾವಳಿಯಲ್ಲಿ ತಪ್ಪಿದ ಕೋಲಾಹಲ...

ಮಂಗಳೂರು: ನಿಗೂಢವಾಗಿ ನಾಪತ್ತೆಯಾಗಿದ್ದ ವಿದ್ಯಾರ್ಥಿ ದಿಗಂತ್ ಪತ್ತೆ ವಿಚಾರವಾಗಿ ಮಂಗಳೂರಿನಲ್ಲಿ ಇಂದು ದ.ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಸುದ್ದಿಗೋಷ್ಟಿ ನಡೆಸಿ ಮಾಹಿತಿ ಹಂಚಿಕೊಂಡಿದ್ದಾರೆ. 

"ದಿಗಂತ್ ನಾಪತ್ತೆ ಕೇಸ್ ನಲ್ಲಿ ಹಲವು ಆಯಾಮಗಳಲ್ಲಿ ನಾವು ತನಿಖೆ ನಡೆಸ್ತಿದ್ದೆವು. ಆದರೆ ನಿನ್ನೆ ಅವನು ಉಡುಪಿಯಲ್ಲಿ ನಮಗೆ ಪತ್ತೆಯಾಗಿದ್ದು, ಅವನನ್ನು ಕರೆದುಕೊಂಡು ಬಂದು ವಿಚಾರಣೆ ನಡೆಸಿದಾಗ ಅವನು ಪರೀಕ್ಷೆ ಕಾರಣಕ್ಕೆ ಮನೆ ಬಿಟ್ಟು ಹೋಗಿದ್ದಾಗಿ ಹೇಳಿಕೆ ಕೊಟ್ಟಿದ್ದಾನೆ. ಅವನು ಮನೆಯಿಂದ ರೈಲ್ವೇ ಟ್ರಾಕ್ ಬಂದು ಬೈಕ್‌ ಹಿಡಿದು ಮಂಗಳೂರಿಗೆ ಬಂದಿದ್ದಾನೆ. ಅಲ್ಲಿಂದ ಶಿವಮೊಗ್ಗ ಹೋಗಿ ಅಲ್ಲಿಂದ ಮೈಸೂರು ಹೋಗಿದ್ದಾನೆ. ಬಳಿಕ ಕೆಂಗೇರಿ ಹೋಗಿ ರೆಸಾರ್ಟ್ ನಲ್ಲಿ ಕೆಲಸ ಮಾಡಿದ್ದಾನೆ. ಬಳಿಕ ಬೆಂಗಳೂರು ತಿರುಗಿ ಮತ್ತೆ ಮೈಸೂರು ಬಂದು ರೈಲಿನಲ್ಲಿ ಉಡುಪಿಗೆ ಬಂದಿದ್ದಾನೆ.ಉಡುಪಿಯಲ್ಲಿ ಬಟ್ಟೆ ತೆಗೆದುಕೊಳ್ಳಲು ಡಿ ಮಾರ್ಟ್‌ ಗೆ ಹೋಗಿ ಅಲ್ಲಿ ಸಿಕ್ಕಾಕಿಕೊಂಡಿದ್ದಾನೆ. ಅಲ್ಲಿ ದುಡ್ಡು ಕೊಡದೇ ಎಸ್ಕೆಪ್ ಆಗುವ ವೇಳೆ ಸಿಕ್ಕಿ ಹಾಕಿಕೊಂಡಿದ್ದಾನೆ. ಹೋಗುವಾಗ 500 ರೂ ತೆಗೆದುಕೊಂಡು ಹೋಗಿದ್ದು, ಆ ಬಳಿಕ ಕೆಲವು ಕಡೆ ಟಿಕೆಟ್ ಕೊಡದೇ ಪ್ರಯಾಣ ಮಾಡಿದ್ದಾನೆ. 

ರೈಲ್ವೆ ಹಳಿಯಲ್ಲಿ ದೊರೆತ ರಕ್ತ ಸಿಕ್ತ ಪಾದರಕ್ಷೆ?

ಅವನ ಪಾದದಲ್ಲಿ ಗಾಯ ಆಗಿದ್ದು, ಅದೇ ರಕ್ತ ಚಪ್ಪಲಿಯಲ್ಲಿ ಅಂಟಿಕೊಂಡಿದೆ ಅಂತ ಅವನೇ ಹೇಳಿದ್ದಾನೆ ಎಂದರು. ಅವನನ್ನ ಯಾರೂ ಎತ್ತಿಕೊಂಡು ಹೋಗಿರಲಿಲ್ಲ, ಅವನೇ ಹೋಗಿದ್ದು, ಅವನ ಇಡೀ ಪ್ರಯಾಣದಲ್ಲಿ ಅವನು ಯಾರನ್ನೂ ಸಂಪರ್ಕ ಮಾಡಿಲ್ಲ. 

ಸದ್ಯ ಹೈಕೋರ್ಟ್ ಹೆಬಿಯಸ್ ಕಾರ್ಪಸ್ ದಾಖಲಾಗಿರೋ ಕಾರಣ ಹೈಕೋರ್ಟ್ ಹಾಜರು ಪಡಿಸ್ತೇವೆ. ಸದ್ಯ ಅವನು ಬೊಂದೇಲ್ ನ ಬಾಲ ಮಂದಿರದಲ್ಲಿ ಇದ್ದಾನೆ ಎಂದರು.

Category
ಕರಾವಳಿ ತರಂಗಿಣಿ