image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಎಲೆಚುಕ್ಕಿ ರೋಗದಿಂದ ಹೈರಾಣಾಗಿರುವ ರೈತರ ಪರ ಕಲಾಪದಲ್ಲಿ ಧ್ವನಿ ಎತ್ತಿದ ಕಿಶೋರ್ ಕುಮಾರ್ ಪುತ್ತೂರು

ಎಲೆಚುಕ್ಕಿ ರೋಗದಿಂದ ಹೈರಾಣಾಗಿರುವ ರೈತರ ಪರ ಕಲಾಪದಲ್ಲಿ ಧ್ವನಿ ಎತ್ತಿದ ಕಿಶೋರ್ ಕುಮಾರ್ ಪುತ್ತೂರು

ಬೆಂಗಳೂರು: ಎಲೆಚುಕ್ಕಿ ರೋಗದಿಂದ ಸುಳ್ಯ-ಪುತ್ತೂರು ಭಾಗದ ರೈತರು ಬೆಲೆ ನಾಶದಿಂದ ಹೈರಾಣಗಿದ್ದಾರೆ. ರೋಗಕ್ಕೆ ಸಮರ್ಪಕವಾಗಿ ಔಷದಿಗಳು ತೋಟಗಾರಿಕೆ ಇಲಾಖೆಯಲ್ಲಿ ಸಿಗುತ್ತಿಲ್ಲ. ಪೋಷಕಾಂಶಗಳನ್ನು ನೀಡುತ್ತಿಲ್ಲ. ಔಷಧಿಗಳ ಕೊರತೆಯಿದೆ ಎಂದು ವಿಧಾನ ಪರಿಷತ್ ಸದಸ್ಯ ಕಿಶೋ‌ರ್ ಕುಮಾರ್ ಪುತ್ತೂರು ವಿಧಾನ ಪರಿಷತ್ ಕಲಾಪದಲ್ಲಿ ಹೇಳಿದರು.

ರಾಜ್ಯದ ವಿಧಾನ ಮಂಡಲ ಅಧಿವೇಶನದಲ್ಲಿ ಇಂದು ನಡೆದ ವಿಧಾನ ಪರಿಷತ್ ಕಲಾಪದಲ್ಲಿ ಎಲೆ ಚುಕ್ಕಿ ರೋಗದ ಬಗ್ಗೆ ಧ್ವನಿ ಎತ್ತಿ, ಕೇಂದ್ರದಿಂದ ಅನುದಾನ ಬಂದರೂ ರೈತರ ಕೈಗೆ ಸೇರಿಲ್ಲ. ರಾಜ್ಯದಿಂದಲೂ ಅನುದಾನ ಶೀಘ್ರವಾಗಿ ಒದಗಿಸಬೇಕು ಈ ಸಮಸ್ಯೆಯನ್ನು ಬಗೆಹರಿಸಬೇಕು ಆಗ್ರಹಿಸಿದರು. ಶೀಲಿಂದ್ರ ಸಮರ್ಪಕವಾಗಿ ದೊರಕುತ್ತಿಲ್ಲ. ಮಳೆಗಾಲಕ್ಕೆ ಗುಣ ಮಟ್ಟದ ಸುಣ್ಣ ಸಿಗುತ್ತಿಲ್ಲ. ಸರಕಾರದಿಂದ ಈ ರೋಗಕ್ಕೆ ಔಷಧಿ ಕಂಡುಕೊಳ್ಳಲು ಸುಮಾರು 50 ಲಕ್ಷ ಖರ್ಚು ಮಾಡಲಾಗಿದೆ. ಆದರೆ ವರದಿ ಇನ್ನೂ ಬಂದಿಲ್ಲ. ಪರ್ಯಾಯ ಬೆಳೆಗೆ ಕಾಫಿ ಸೂಚಿಸಿದ್ದು ಇನ್ನೂ ಶಕ್ತಿ ತುಂಬುವ ಕಾರ್ಯವಾಗಿಲ್ಲ.  ರಾಜ್ಯ ಸರಕಾರ ಅನುದಾನ ಮಂಜೂರು ಮಾಡಲು ತಡವರಿಸುತ್ತಿದೆ. ಈ ಬಗ್ಗೆ ಸೂಕ್ತ ಕ್ರಮ ವಹಿಸಬೇಕು ವಿಧಾನ ಪರಿಷತ್‌ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಹೇಳಿದರು.

Category
ಕರಾವಳಿ ತರಂಗಿಣಿ