image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಆಳ್ವಾಸ್ ಪ್ರಗತಿ ಉದ್ಯೋಗ ಮೇಳ; 2468 ಅಭ್ಯರ್ಥಿಗಳಿಗೆ ಸ್ಥಳದಲ್ಲೇ ಉದ್ಯೋಗ ನೇಮಕಾತಿ

ಆಳ್ವಾಸ್ ಪ್ರಗತಿ ಉದ್ಯೋಗ ಮೇಳ; 2468 ಅಭ್ಯರ್ಥಿಗಳಿಗೆ ಸ್ಥಳದಲ್ಲೇ ಉದ್ಯೋಗ ನೇಮಕಾತಿ

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ವಿದ್ಯಾಗಿರಿ ಆವರಣದಲ್ಲಿ ನಡೆದ ೨೦೨೪ನೇ ಸಾಲಿನ ೧೪ನೆ ಆವೃತ್ತಿಯ ೨ ದಿನದ ಬೃಹತ್ ಉದ್ಯೋಗ ಮೇಳ ಆಳ್ವಾಸ್ ಪ್ರಗತಿ ೨೪೬೮ ಆಕಾಂಕ್ಷಿಗಳಿಗೆ ಸ್ಥಳದಲ್ಲೇ ಉದ್ಯೋಗ ಅವಕಾಶ ನೀಡಲಾಗಿದೆ.ಉದ್ಯೋಗ ಮೇಳದಲ್ಲಿ ೨೫೮ ಕಂಪನಿಗಳ ಪೈಕಿ ೨೧೭ ಕಂಪನಿಗಳು ೫೯೫೩ ಜನರನ್ನು ಮುಂದಿನ ಹಂತಕ್ಕೆ ಆಯ್ಕೆ ಮಾಡಿವೆ. ಎರಡನೇ ದಿನ ೧೫೪೨ಉದ್ಯೋಗಾಕಾಂಕ್ಷಿಗಳು ಪಾಲ್ಗೊಂಡಿದ್ದು, ಒಟ್ಟು ಎರಡು ದಿನಗಳ ಉದ್ಯೋಗ ಮೇಳದಲ್ಲಿ ೧೪೭೮೦ ಅಭ್ರ‍್ಥಿಗಳು ಭಾಗವಹಿಸಿದ್ದರು.

 

ಬೆಂಗಳೂರಿನ ರ‍್ಕಾರಿ ಎಸ್‌ಕೆಎಸ್‌ಜೆ ಟೆಕ್ನಾಲಜಿ ಇನ್ಸಿಟ್ಯೂಟ್ ಇಂಜಿನಿಯರಿಂಗ್ ಕಾಲೇಜಿನ ೪೩ ವಿದ್ಯರ‍್ಥಿಗಳಿಗೆ ವಿಶೇಷ ಆದ್ಯತೆಯ ಮೇರೆಗೆ ಆಳ್ವಾಸ್ ಸಂಸ್ಥೆಯ ವತಿಯಿಂದ ಉಚಿತ ವಾಹನ ಹಾಗೂ ವಸತಿ ವ್ಯವಸ್ಥೆ ಕಲ್ಪಿಸಿ, ಪ್ರಗತಿ ಉದ್ಯೋಗ ಮೇಳದಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿತ್ತು. ಇಲ್ಲಿನ ವಿದ್ಯರ‍್ಥಿಗಳು ಪ್ರತಿಷ್ಠಿತ ಇಜಿ ಇಂಡಿಯಾ, ಇಸಿಯಾ ಸಾಫ್ಟ್ ಹಾಗೂ ಫ್ಲಿಪ್ ಕರ‍್ಟ್ ಕಂಪೆನಿಗಳಿಗೆ ಉತ್ತಮ ವೇತನದೊಂದಿಗೆ ಆಯ್ಕೆಯಾಗಿದ್ದಾರೆ. ಮುಂಬೈನ ಠಾಕೂರ್ ಕಾಲೇಜ್ ಆಫ್ ಇಂಜಿನಿಯರಿಂಗ್‌ನ ವಿದ್ಯರ‍್ಥಿ ಶರ‍್ಯ ಪೂಜಾರಿ ಮೂಲತಃ ಪಡುಬಿದ್ರಿಯವರಾಗಿದ್ದು, ಆಳ್ವಾಸ್ ಪ್ರಗತಿಯಂತಹ ಬೃಹತ್ ಉದ್ಯೋಗ ಮೇಳದ ಜನಸಾಗರವನ್ನು ವೀಕ್ಷಿಸಿ ತುಸು ಭಯಪಟ್ಟಿದ್ದರು. ಆದರೆ,ಇಲ್ಲಿನ ಸ್ವಯಂ ಸೇವಕ ರ‍್ಗ ಅವರನ್ನು ಒಳ್ಳೆಯ ರೀತಿಯಲ್ಲಿ ಸೂಕ್ತ ಸಮಯದಲ್ಲಿ ಮರ‍್ಗರ‍್ಶನ ನೀಡಿದರು. ಇಲ್ಲಿ ಎಲ್ಲವೂ ಬಹಳ ಅಚ್ಚು ಕಟ್ಟಾಗಿ ವ್ಯವಸ್ಥೆ ಮಾಡಿದ್ದು, ಹಲವಾರು ಕಂಪನಿಗಳಿಗೆ ಸಂರ‍್ಶನ ನೀಡಿದ್ದೇನೆ, ಅದರಲ್ಲಿ ಟೊಯೋಟೋ ಕರ‍್ಲೋಸ್ಕರ್ ಆಟೋ ಪರ‍್ಟ್ಸ್ ಕಂಪೆನಿಗೆ ವರ‍್ಷಿಕ ೪.೭ ಲಕ್ಷ ವೇತನದೊಂದಿಗೆ ಆಯ್ಕೆಯಾಗಿದ್ದೇನೆ. ಆಳ್ವಾಸ್ ಪ್ರಗತಿ ಒಂದು ಜವಾಬ್ದಾರಿಯುತ ಉದ್ಯೋಗವನ್ನು ಕಲ್ಪಿಸಿಕೊಟ್ಟಿದೆ.

 

ಮಂಗಳೂರಿನ ಎಜೆಐಇಟಿಯಲ್ಲಿ ತಮ್ಮ ಬಿ.ಇ ಪದವಿ ಪಡೆದ ನಾನು ಕಳೆದ ನಾಲ್ಕು ತಿಂಗಳಿನಿಂದ ಉದ್ಯೋಗದ ಕೊರತೆಯನ್ನು ಎದುರಿಸುತ್ತಿದ್ದೆ, ಇನ್ಸ್ಟಾಗ್ರಾಂ ರೀಲ್ ಮುಖಾಂತರ ಆಳ್ವಾಸ್ ಪ್ರಗತಿ ಬಗ್ಗೆ ತಿಳಿದು ಇಲ್ಲಿ ಉದ್ಯೋಗ ಅವಕಾಶಕ್ಕಾಗಿ ಭೇಟಿ ನೀಡಿದೆ. ಅನೇಕ ಸವಾಲನ್ನು ಹೊಂದಿರುವ ಮಾರುಕಟ್ಟೆಯಲ್ಲಿ ಇಂತಹ ದೊಡ್ಡ ಉದ್ಯೋಗಾವಕಾಶ ವನ್ನು ಆಯೋಜಿಸಲು ಮತ್ತು ಉದ್ಯೋಗದ ಅಗತ್ಯವಿರುವ ಅನೇಕ ವಿದ್ಯರ‍್ಥಿಗಳಿಗೆ ಸೂಕ್ತ ವೇದಿಕೆಯನ್ನು ನೀಡಿದ ಆಳ್ವಾಸ್ ತಂಡಕ್ಕೆ ಕೃತಜ್ಞಳಾಗಿದ್ದೇನೆ ಎಂದು ಮಂಗಳೂರಿನ ತಸ್ಮಿಯಾ ಝುಲೆಕಾ ಪ್ರತಿಕ್ರಿಯೆ ನೀಡಿದ್ದಾರೆ. ಕಳೆದ ರ‍್ಷವೂ ಕೂಡ ಪ್ರಗತಿಯಿಂದ ಹೆಚ್ಚು ವೇತನದೊಂದಿಗೆ ಹಲವಾರು ಅಭ್ರ‍್ಥಿಗಳು ಪಾಲ್ಗೊಂಡು ಆಯ್ಕೆಯಾಗಿದ್ದಾರೆ.

ನರ‍್ಡಿಕ್ ಸಾಫ್ಟ್ವೇರ್‌ನ ಇಜಿ ಇಂಡಿಯಾ ಕಂಪೆನಿಯು ೫.೯ ಲಕ್ಷ ವರ‍್ಷಿಕ ವೇತನದೊಂದಿಗೆ ಜೂನಿಯರ್ ಸಾಫ್ಟ್ವೇರ್ ಡೆವಲಪರ್ ಹುದ್ದೆಗಳಿಗೆ ೨೮ ಎಂಜಿನಿ ಯರ್‌ಗಳನ್ನು ನೇಮಿಸಿಕೊಂಡಿದೆ.

ಫ್ಯಾಕ್ಟ್ಸೆಟ್ ಕಂಪನಿಯು ೩.೪ ಲಕ್ಷ ವರ‍್ಷಿಕ ಪ್ಯಾಕೇಜ್‌ನೊಂದಿಗೆ ೨೦ ರಿರ‍್ಚ್ ಅನಾಲಿಸ್ಟ್ ಹುದ್ದೆಗೆ ಆಯ್ಕೆ ಮಾಡಿದ್ದು, ಟೊಯೋಟಾ ಕರ‍್ಲೋಸ್ಕರ್ ಆಟೋ ಪರ‍್ಟ್ಸ್ ಪ್ರೈ. ಲಿ. ೪.೭ ಲಕ್ಷ ವರ‍್ಷಿಕ ವೇತನದೊಂದಿಗೆ ೨೧ ಅಭ್ರ‍್ಥಿ ಗಳನ್ನು ಗ್ರಾಜುಯೇಟ್ ಇಂಜಿನಿಯರ್ ಅಪ್ರೆಂಟಿಸ್‌ಶಿಪ್ ಟ್ರೈನಿ ಹುದ್ದೆಗಳಿಗೆ ಆಯ್ಕೆ ಮಾಡಿದೆ. ಮೈನಿ ಪ್ರೆಸಿಶನ್ ಪ್ರಾಡಕ್ಟ್ಸ್ ಲಿಮಿಟೆಡ್ ಕಂಪೆನಿಯು ಗ್ರಾಜುಯೇಟ್ ಇಂಜಿನಿಯರ್ ಟ್ರೈನಿ ಹುದ್ದೆಗಳಿಗೆ ೫೧ ಅಭ್ರ‍್ಥಿಗಳನ್ನು ೩.೨ ವರ‍್ಷಿಕ ವೇತನಕ್ಕೆ ಆಯ್ಕೆ ಮಾಡಿದೆ. ಟೆನೆಕೊ ಸಂಸ್ಥೆಯು ೯೬ ಡಿಪ್ಲೊಮಾ ಮತ್ತು ಎಂಜಿನಿಯರಿಂಗ್ ಪದವೀಧರರನ್ನು ಗ್ರಾಜುಯೇಟ್ ಇಂಜಿನಿಯರ್ ಟ್ರೈನಿ ಹುದ್ದೆಗೆ ಆಯ್ಕೆ ಮಾಡಿದೆ.

 

ಟೊಯೋಟಾ ಇಂಡಸ್ಟ್ರೀಸ್ ಇಂಜಿನ್ ಇಂಡಿಯಾ ಪ್ರೈ. ಲಿ., ಗ್ರಾಜುಯೇಟ್ ಇಂಜಿನಿಯರ್ ಅಪ್ರೆಂಟಿಸ್‌ಶಿಪ್ ಟ್ರೈನಿ ಹುದ್ದೆಗೆ ೧೨ ಅಭ್ರ‍್ಥಿಗಳನ್ನು ೪ ಲಕ್ಷ ವರ‍್ಷಿಕ ವೇತನಕ್ಕೆ ಆಯ್ಕೆ ಮಾಡಿದೆ. ಫ್ಯಾಕ್ಟ್ಸೆಟ್ ಕಂಪನಿಯು ೩.೪ ಲಕ್ಷ ವರ‍್ಷಿಕ ಪ್ಯಾಕೇಜ್‌ನೊಂದಿಗೆ ೨೦ ರಿರ‍್ಚ್ ಅನಾಲಿಸ್ಟ್ ಹುದ್ದೆಗೆ ಆಯ್ಕೆ ಮಾಡಿದ್ದು, ೧೩ ಅಭ್ರ‍್ಥಿಗಳನ್ನು ೭.೨ ವರ‍್ಷಿಕ ವೇತನ ದೊಂದಿಗೆ ಹುದ್ದೆಗೆ ಶರ‍್ಟ್ ಲೀಸ್ಟ್ ಮಾಡಿಕೊಂಡಿದೆ.

 

Category
ಕರಾವಳಿ ತರಂಗಿಣಿ