image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮರು-ಗುರಿ ಇಡುವ ವೈಶಿಷ್ಟ್ಯದೊಂದಿಗೆ ಭಾರತವು ಕಡಿಮೆ ಶ್ರೇಣಿಯ ಹಡಗು ವಿರೋಧಿ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಿದೆ

ಮರು-ಗುರಿ ಇಡುವ ವೈಶಿಷ್ಟ್ಯದೊಂದಿಗೆ ಭಾರತವು ಕಡಿಮೆ ಶ್ರೇಣಿಯ ಹಡಗು ವಿರೋಧಿ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಿದೆ

ನವದೆಹಲಿ: ಭಾರತದ ಕಡಲ ಶಕ್ತಿ ಸಾಮರ್ಥ್ಯಗಳಿಗೆ ಮತ್ತಷ್ಟು ಉತ್ತೇಜನ ನೀಡುವ ಸಲುವಾಗಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಮತ್ತು ಭಾರತೀಯ ನೌಕಾಪಡೆಯು ಚಂಡೀಪುರದ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ (ಐಟಿಆರ್) ನಿಂದ ಮೊದಲ ರೀತಿಯ ನೌಕಾ ವಿರೋಧಿ ಕ್ಷಿಪಣಿ (ಎನ್‌ಎಎಸ್‌ಎಂ-ಎಸ್‌ಆರ್) ಯಶಸ್ವಿ ಹಾರಾಟ ನಡೆಸಿದೆ.

ಈ ಕ್ಷಿಪಣಿಯನ್ನು ಬೇರಿಂಗ್-ಲಾಕ್-ಆನ್ ನಂತರದ ಉಡಾವಣಾ ಮೋಡ್‌ನಲ್ಲಿ ನಭಕ್ಕೆ ಹಾರಿಸಲಾಯಿತು. ಕ್ಷಿಪಣಿಯು ಆರಂಭದಲ್ಲಿ ನಿರ್ದಿಷ್ಟ ಹುಡುಕಾಟ ವಲಯದೊಳಗೆ, ನಿಯೋಜಿತವಾಗಿದ್ದ ದೊಡ್ಡ ಗುರಿಯನ್ನು ಲಾಕ್ ಮಾಡುವಲ್ಲಿ ಈ ಮಿಸೈಲ್​ ಯಶಸ್ವಿಯಾಗಿದೆ. ಟರ್ಮಿನಲ್ ಹಂತದಲ್ಲಿ ಸಣ್ಣದಾದ ಗುಪ್ತ ಗುರಿಯನ್ನು ಪೈಲಟ್ ಆಯ್ಕೆ ಮಾಡಿಕೊಂಡು, ನಿಖರತೆಯೊಂದಿಗೆ ಹೊಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಹಡಗು ವಿರೋಧಿ ಕ್ಷಿಪಣಿ ಪ್ರಯೋಗಗಳನ್ನು ಮಂಗಳವಾರ ಯಶಸ್ವಿಯಾಗಿ ನಡೆಸಲಾಗಿದೆ. ನೌಕಾಪಡೆಯ ಸೀಕಿಂಗ್ ಹೆಲಿಕಾಪ್ಟರ್‌ನಿಂದ ಮಿಸೈಲ್​ ಉಡಾವಣೆಗೊಂಡಾಗ ಹಡಗಿನ ಮೇಲೆ ಗುರಿಯಿಟ್ಟ ಕ್ಷಿಪಣಿಗಳನ್ನು ಗುರಿ ಇಟ್ಟು ಉಡಾಯಿಸುವ ಪರೀಕ್ಷೆಗಳನ್ನು ಯಶಸ್ವಿಯಾಗಿ ಮಾಡಿ ಮುಗಿಸಲಾಯಿತು ಎಂದು ರಕ್ಷಣಾ ಸಚಿವಾಲಯದ ಮೂಲಗಳು ತಿಳಿಸಿವೆ.

ಪ್ರಯೋಗಗಳು ಕ್ಷಿಪಣಿಯ ಮ್ಯಾನ್-ಇನ್-ಲೂಪ್ ವೈಶಿಷ್ಟ್ಯವನ್ನು ಸಾಬೀತುಪಡಿಸಿವೆ. ಸಮುದ್ರ-ಸ್ಕಿಮ್ಮಿಂಗ್ ಮೋಡ್‌ನಲ್ಲಿ, ಗರಿಷ್ಠ ವ್ಯಾಪ್ತಿಯಲ್ಲಿ ಸಣ್ಣ ಹಡಗಿನ ಮೇಲೆ ಗುರಿ ಇಟ್ಟ ದಾಳಿಗಳನ್ನು ಭೇದಿಸುವಲ್ಲಿ ಆ್ಯಂಟಿ ಶಿಪ್​ ಮಿಸೈಲ್​ ಯಶಸ್ವಿಯಾಗಿದೆ. ಟರ್ಮಿನಲ್ ಮಾರ್ಗದರ್ಶನಕ್ಕಾಗಿ ಕ್ಷಿಪಣಿಯು ಸ್ಥಳೀಯ ಇಮೇಜಿಂಗ್ ಇನ್ಫ್ರಾ-ರೆಡ್ ಸೀಕರ್ ಬಳಸಿಕೊಂಡಿದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ. ಮಿಷನ್ ಹೆಚ್ಚಿನ ಬ್ಯಾಂಡ್‌ವಿಡ್ತ್ ಟು-ವೇ ಡೇಟಾಲಿಂಕ್ ಸಿಸ್ಟಮ್ ಅನ್ನು ಸಹ ಅದು ಪ್ರದರ್ಶಿಸಿದೆ ಎಂದು ಡಿಆರ್​ಡಿಒ ಹೇಳಿದೆ.

Category
ಕರಾವಳಿ ತರಂಗಿಣಿ