image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಗಿಲೆನ್​ ಬರೆ ಸಿಂಡ್ರೋಮ್ ಕಾಯಿಲೆ (ಜಿಬಿಎಸ್​)ಗೆ ಆಂಧ್ರ ಪ್ರದೇಶದಲ್ಲಿ ಇಬ್ಬರು ಸಾವು

ಗಿಲೆನ್​ ಬರೆ ಸಿಂಡ್ರೋಮ್ ಕಾಯಿಲೆ (ಜಿಬಿಎಸ್​)ಗೆ ಆಂಧ್ರ ಪ್ರದೇಶದಲ್ಲಿ ಇಬ್ಬರು ಸಾವು

ಆಂಧ್ರ ಪ್ರದೇಶ: ಗಿಲೆನ್​ ಬರೆ ಸಿಂಡ್ರೋಮ್ ಕಾಯಿಲೆ (ಜಿಬಿಎಸ್​)ಗೆ ಆಂಧ್ರ ಪ್ರದೇಶದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಕಳೆದ 10 ದಿನಗಳಲ್ಲಿ 45 ವರ್ಷದ ಮಹಿಳೆ ಮತ್ತು ಓರ್ವ ಬಾಲಕ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಆರೋಗ್ಯ ಸಚಿವ ಸತ್ಯ ಕುಮಾರ್​ ಯಾದವ್​ ತಿಳಿಸಿದ್ದಾರೆ.

ಭಾನುವಾರ ಗುಂಟೂರಿನ ಸರ್ಜಾರಿ ಜನರಲ್​ ಆಸ್ಪತ್ರೆಯಲ್ಲಿ ಕಮಲಮ್ಮ ಎಂಬವರು ಸಾವನ್ನಪ್ಪಿದ್ದರು. ಇದಕ್ಕೂ ಹತ್ತು ದಿನಗಳ ಹಿಂದೆ 10 ವರ್ಷದ ಬಾಲಕ ಶ್ರೀಕಾಕುಳಂನ ಖಾಸಗಿ ವೈದ್ಯಕೀಯ ಕಾಲೇಜ್​ನಲ್ಲಿ ಸಾವನ್ನಪ್ಪಿದ್ದ ಎಂದು ಅವರು ಮಾಹಿತಿ ನೀಡಿದರು.

ಸದ್ಯ ರಾಜ್ಯದಲ್ಲಿ 17 ಜಿಬಿಎಸ್​ ಪ್ರಕರಣಗಳಿವೆ. ಇದು ಸಾಂಕ್ರಾಮಿಕವಲ್ಲದ ರೋಗವಾಗಿದ್ದು, ಲಕ್ಷ ಜನಸಂಖ್ಯೆಯಲ್ಲಿ ಶೇ 2ರ ಪ್ರಮಾಣದಲ್ಲಿರುತ್ತದೆ. ಇದರಿಂದ ಹಠಾತ್​ ಸಾವು ಸಂಭವಿಸುವುದಿಲ್ಲ. ಸಾಮಾನ್ಯ ರೋಗವಾಗಿದೆ ಎಂದಿದ್ದಾರೆ.

2024ರಲ್ಲಿ 267 ಪ್ರಕರಣಗಳು ದಾಖಲಾಗಿದ್ದು, ವರ್ಷದ ಮೊದಲ ಅವಧಿಯಲ್ಲಿ 141 ಹಾಗೂ ಎರಡನೇ ಅವಧಿಯಲ್ಲಿ 126 ಪ್ರಕರಣಗಳು ವರದಿಯಾಗಿದ್ದವು. ತಿಂಗಳಲ್ಲಿ ಸರಾಸರಿ 25 ಪ್ರಕರಣಗಳು ದಾಖಲಾಗಿದ್ದು, ನಿಯಮಿತ ಚಿಕಿತ್ಸೆಗಳ ಮೂಲಕ ನಿರ್ವಹಿಸಲಾಗಿದೆ. ಗಂಭೀರ ಪ್ರಕರಣದಲ್ಲಿ ಹಿಮೋಗ್ಲೋಬಿನ್​ ಇಂಜೆಕ್ಷನ್​ ಮತ್ತು ಐಸಿಯು ದಾಖಲಾತಿ ನಡೆಸಲಾಗಿದೆ ಎಂದು ಸಚಿವರು ಹೇಳಿದರು.

Category
ಕರಾವಳಿ ತರಂಗಿಣಿ