image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಟೌನ್‌ಹಾಲ್, ಅಂಬೇಡ್ಕ‌ರ್ ಭವನ, ಮೈದಾನ ಶುಲ್ಕ ಆನ್ ಲೈನ್‌ನಲ್ಲಿಯೇ ಪಾವತಿ- ಮೇಯ‌ರ್ ಮನೋಜ್ ಕುಮಾರ್

ಟೌನ್‌ಹಾಲ್, ಅಂಬೇಡ್ಕ‌ರ್ ಭವನ, ಮೈದಾನ ಶುಲ್ಕ ಆನ್ ಲೈನ್‌ನಲ್ಲಿಯೇ ಪಾವತಿ- ಮೇಯ‌ರ್ ಮನೋಜ್ ಕುಮಾರ್

ಮಂಗಳೂರು: ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿನ ಟೌನ್‌ಹಾಲ್‌, ಅಂಬೇಡ್ಕ‌ರ್ ಭವನ, ತೆರೆದ ಮೈದಾನಗಳು ಹಾಗೂ ವಾಣಿಜ್ಯ ಮಳಿಗೆಗಳ ಬಾಡಿಗೆ ಪಾವತಿಯನ್ನು ಆನ್ನೈನ್‌ನಲ್ಲಿಯೇ ಮಾಡಬಹುದು. ಬಾಡಿಗೆ ಪಾವತಿಗೆ  www.mccportal.com ಎಂಬ ವೆಬ್‌ಸೈಟ್‌ ರೂಪಿಸಲಾಗಿದೆ ಎಂದು ಮೇಯ‌ರ್ ಮನೋಜ್ ಕುಮಾರ್ ಕೋಡಿಕಲ್ ಹೇಳಿದರು.

www.mccportal.com wow ನ್ನು ಮನಪಾ ಕಚೇರಿಯಲ್ಲಿ ಅನಾವರಣಗೊಳಿಸಿ ಮಾತನಾಡಿದ ಮೇಯ‌ರ್, ಆದರೆ ಟೌನ್‌ಹಾಲ್, ಅಂಬೇಡ್ಕ‌ರ್ ಭವನ, ತೆರೆದ ಮೈದಾನಗಳನ್ನು ಕಾರ್ಯಕ್ರಮಕ್ಕಾಗಿ ಕಾಯ್ದಿರಿಸಲು ಮಾತ್ರ ಆಫ್‌ಲೈನ್‌ನಲ್ಲೇ ಅಂದರೆ ಮನಪಾಕ್ಕೆ ಬಂದು ಬುಕ್ಕಿಂಗ್ ಮಾಡಬೇಕು ಎಂದು ಹೇಳಿದರು.

ಬಾಡಿಗೆ ಪಾವತಿಸಲು ಸುಲಭವಾಗಿ ಸಾರ್ವಜನಿಕರು ತಾವಿದ್ದ ಸ್ಥಳದಿಂದಲೇ ಅವಕಾಶ ನೀಡಲಾಗಿದೆ. ಈ ತಂತ್ರಾಂಶದಲ್ಲಿ ಸಾರ್ವಜನಿಕರು ಪಾವತಿಸಿದ ವಿವರಗಳು ಮಂಗಳೂರು ಮನಪಾ mccportal.in ವೆಬ್‌ಸೈಟಿನ MCC SHOP RENT ಖಾತೆಯಲ್ಲಿ ತಕ್ಷಣವೇ ನವೀಕೃತ ಮಾಹಿತಿ ಲಭ್ಯವಾಗುತ್ತದೆ ಎಂದರು. 

ಬಾಡಿಗೆ ಪಾವತಿಸಿದ ರಶೀದಿಯ ನಕಲು ಪ್ರತಿ ಆನ್ ಲೈನ್ ಮೂಲಕ ವೆಬ್ ಅಪ್ಲಿಕೇಷನ್‌ನಲ್ಲಿಯೇ ಲಭ್ಯವಿರುವುದರಿಂದ ಮಾಹಿತಿ ಪಡೆದುಕೊಳ್ಳಲು ಹಾಗೂ ಪರಿಶೀಲನೆಗೆ ಸುಲಭವಾಗುತ್ತದೆ. ಈ ಆನ್‌ಲೈನ್ ತಂತ್ರಾಂಶದಲ್ಲಿ ಸಾರ್ವಜನಿಕರು ತಮ್ಮ ಬಾಡಿಗೆ ಮೊತ್ತವನ್ನು ಆನ್‌ಲೈನ್/ನೆಟ್ ಬ್ಯಾಂಕಿಂಗ್‌ UPI ಮೂಲಕ ಮತ್ತು ಆಫ್‌ಲೈನ್ (ಚಲನ್) ಮೂಲಕ ಪಾವತಿಸಲು ಸರಳ ವಿಧಾನಗಳನ್ನು ಅಳವಡಿಸಲಾಗಿದೆ ಎಂದರು.

Category
ಕರಾವಳಿ ತರಂಗಿಣಿ