image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ರಾಜಕೀಯ ಪಕ್ಷಗಳ ಉಚಿತ ಕೊಡುಗೆಗಳಿಗೆ ಸುಪ್ರೀಂಕೋರ್ಟ್​ ಅಸಮಾಧಾನ

ರಾಜಕೀಯ ಪಕ್ಷಗಳ ಉಚಿತ ಕೊಡುಗೆಗಳಿಗೆ ಸುಪ್ರೀಂಕೋರ್ಟ್​ ಅಸಮಾಧಾನ

ನವದೆಹಲಿ : ರಾಜಕೀಯ ಪಕ್ಷಗಳು ಚುನಾವಣೆಗೂ ಮುನ್ನ ಘೋಷಿಸುವ 'ಉಚಿತಗಳಿಗೆ' ಸುಪ್ರೀಂ ಕೋರ್ಟ್ ಬುಧವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಜನರು ಉಚಿತ ಪಡಿತರ ಮತ್ತು ಹಣ ಪಡೆಯುತ್ತಿರುವುದರಿಂದ ಕೆಲಸ ಮಾಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಹೇಳಿದೆ.

"ಬಡವರನ್ನು ಮುಖ್ಯವಾಹಿನಿಗೆ ತಂದು, ಅವರೂ ದೇಶದ ಅಭಿವೃದ್ಧಿಗೆ ಕೊಡುಗೆ ನೀಡುವಂತೆ ಉತ್ತೇಜಿಸಬೇಕು. ಅದನ್ನು ಬಿಟ್ಟು ಜನರ ಅಗತ್ಯಗಳನ್ನು ಉಚಿತವಾಗಿ ನೀಡುವ ಮೂಲಕ ಅವರನ್ನು ಪರಾವಲಂಬಿ ಮತ್ತು ಸೋಂಬೇರಿಗಳನ್ನಾಗಿ ಮಾಡಲಾಗುತ್ತಿದೆ" ಎಂದು ಟೀಕಿಸಿತು.

ನಗರ ಪ್ರದೇಶಗಳಲ್ಲಿ ನಿರಾಶ್ರಿತರಿಗೆ ಉಚಿತವಾಗಿ ಆಶ್ರಯ ಒದಗಿಸಲು ಸರ್ಕಾರಗಳಿಗೆ ಸೂಚಿಸಬೇಕು ಎಂದು ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬಿ. ಆರ್. ಗವಾಯಿ ಮತ್ತು ಆಗಸ್ಟೀನ್ ಜಾರ್ಜ್ ಮಸಿಹ್ ಅವರಿದ್ದ ಪೀಠವು, ಇದು 'ಉಚಿತವಲ್ಲ' ಎಂದು ಅಭಿಪ್ರಾಯಪಟ್ಟಿತು.

"ರಾಜಕೀಯ ಪಕ್ಷಗಳು ಘೋಷಿಸಿದ ಉಚಿತ ಕೊಡುಗೆಗಳಿಂದಾಗಿ ಜನರು ಕೆಲಸ ಮಾಡಲು ಸಿದ್ಧರಿಲ್ಲವಾಗಿದೆ. ಕಾರಣ, ಏನೂ ಮಾಡದೆಯೂ ಉಚಿತವಾಗಿ ಪಡಿತರ ಮತ್ತು ಹಣ ಪಡೆಯುತ್ತಿದ್ದಾರೆ. ಇದರಿಂದ ಅವರ್ಯಾಕೆ ದುಡಿಯಲು ಹೋಗುತ್ತಾರೆ" ಎಂದು ಪ್ರಶ್ನಿಸಿತು.

ಕೃಷಿಗೆ ಕಾರ್ಮಿಕರೇ ಸಿಗ್ತಿಲ್ಲ : "ಜನರು ಪಡಿತರವನ್ನು ಉಚಿತವಾಗಿ ಪಡೆಯುತ್ತಿರುವ ಕಾರಣ, ಅವರು ದುಡಿಯಲು ಹೋಗುತ್ತಿಲ್ಲ. ಇದರಿಂದ ಕೃಷಿಗೆ ಕಾರ್ಮಿಕರ ಕೊರತೆಯಾಗಿದೆ. ನಾನೂ ಕೃಷಿ ಪ್ರಧಾನ ಕುಟುಂಬದಿಂದಲೇ ಬಂದಿದ್ದು. ಕೃಷಿಕರು ಏನೆಲ್ಲಾ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂಬುದು ನನಗೆ ತಿಳಿದಿದೆ. ಇದನ್ನು ನಾನು ಮಹಾರಾಷ್ಟ್ರದಲ್ಲಿ ಕಂಡಿದ್ದೇನೆ" ಎಂದು ನ್ಯಾಯಮೂರ್ತಿ ಬಿ. ಆರ್. ಗವಾಯಿ ಅವರು ತಮ್ಮ ಅನುಭವವನ್ನು ಹಂಚಿಕೊಂಡರು.

Category
ಕರಾವಳಿ ತರಂಗಿಣಿ