image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಪ್ರಸ್ತುತ ಕರ್ನಾಟಕ ಗಂಭೀರ ಪರಿಸ್ಥಿತಿಯನ್ನು ಎದುರಿಸುತ್ತಿದೆ- ಡಾ. ಭರತ್ ಶೆಟ್ಟಿ ಕಿಡಿ

ಪ್ರಸ್ತುತ ಕರ್ನಾಟಕ ಗಂಭೀರ ಪರಿಸ್ಥಿತಿಯನ್ನು ಎದುರಿಸುತ್ತಿದೆ- ಡಾ. ಭರತ್ ಶೆಟ್ಟಿ ಕಿಡಿ

ಮಂಗಳೂರು: ಮತದಾಸೆಗೆ  ಆಸೆ ಪಡುವ ಕಾಂಗ್ರೇಸ್ ರಾಜ್ಯದಲ್ಲಿ ನಡೆಯುವ ಗಲಭೆ  ಮತ್ತು ಗಲಭೆ ಕೊರರನ್ನು ನಿಯಂತ್ರಿಸುವ  ತಾಕತನ್ನು ಕಳೆದು ಕೊಂಡಿದೆ. ಇದಕ್ಕೆ ಮೈಸೂರ್ ಉದಯಗಿರಿ ಕಲ್ಲು ತುರಾಟ ಪ್ರಕರಣ ಸಾಕ್ಷಿ, ಪ್ರಸ್ತುತ ಕರ್ನಾಟಕ ಗಂಭೀರ ಪರಿಸ್ಥಿತಿಯನ್ನು ಎದುರಿಸುತ್ತಿದೆ ಎಂದು   ಕಾಂಗ್ರೆಸ್ ಸರ್ಕಾರದ ವಿರುದ್ಧ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ  ಶಾಸಕರಾದ ಡಾ. ಭರತ್ ಶೆಟ್ಟಿ ವೈ ಕಿಡಿ ಕಾರಿದ್ದಾರೆ.

 ಕಾಂಗ್ರೆಸ್ ನಾಯಕರ ಭಾವಚಿತ್ರವನ್ನು ಉರ್ದು ಭಾಷೆಯಲ್ಲಿ ಬರೆದು ಹಾಕಿದ ಮಾತ್ರಕ್ಕೆ ಗೋಣಿಚೀಲಗಳಲ್ಲಿ ಕಲ್ಲಿನ ರಾಶಿಯನ್ನೇ ತಂದು ಪೊಲೀಸರ ಮೇಲೆ ಪೊಲೀಸ್ ಠಾಣೆಯ ಮೇಲೆ ಕಲ್ಲು ತೂರಾಟ ಮಾಡುವ ಧೈರ್ಯ ದುಷ್ಕರ್ಮಿಗಳಿಗೆ ಬಂದಿದ್ದರೆ ಅದು ಕಾಂಗ್ರೆಸ್ ಸರಕಾರ ವೋಟ್ ಬ್ಯಾಂಕ್ ರಾಜಕೀಯ ಎಂಬುದು ಎಲ್ಲರಿಗೂ ತಿಳಿದ ವಿಚಾರ.

 ಕಲ್ಲು ತೂರಾಟ ಪ್ರಕರಣದ ಆರೋಪಿಗಳನ್ನು ಒಂದೆರಡು ತಿಂಗಳಲ್ಲಿ ಅಮಾಯಕರು ಎಂದು ಕಾಂಗ್ರೆಸ್ ಸರಕಾರವೇ ಬಿಡುಗಡೆ ಮಾಡಲಿದೆ.ಇದಕ್ಕೆ ಡಿಜೆ ಹಳ್ಳಿ ಪ್ರಕರಣ ಜ್ವಲಂತ ಉದಾಹರಣೆಯಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಈ ಗಲಭೆ ಪ್ರಕರಣಗಳು ಪೊಲೀಸ್ ಇಲಾಖೆಗೆ ಕಪ್ಪು ಚುಕ್ಕೆಯಾಗಿದ್ದು ರಾಜಕೀಯ ನಿಯಂತ್ರಣದ ಹೊರತಾಗಿ ಪೊಲೀಸರು ಆತ್ಮಭಿಮಾನ ಜತೆಗೆ ಕಾನೂನು ಸುವ್ಯವಸ್ಥೆ ರಕ್ಷಿಸುವ ನಿಟ್ಟಿನಲ್ಲಿ ಭವಿಷ್ಯದಲ್ಲಿ ಇಂಥ ಪ್ರಕರಣಗಳು ನಡೆಯದ ಹಾಗೆ ಕ್ರಮ ಕೈಗೊಳ್ಳುವ ಜವಾಬ್ದಾರಿಯನ್ನು ಹೊರಬೇಕು ಎಂದು ಹೇಳಿದ್ದಾರೆ.

 ಸಿ ಎ ಗಲಭೆಯ ವೇಳೆ ಬಿಜೆಪಿ ಸರ್ಕಾರ ಗಲಭೆ ಸಂಚನ್ನು ಹತ್ತಿಕುವ ಮೂಲಕ ಶಾಂತಿ ಸುವ್ಯವಸ್ಥೆಯನ್ನು ಯಾವ ರೀತಿ ಕಾಪಾಡಬಹುದೆಂಬುದನ್ನ ತೋರಿಸಿಕೊಟ್ಟಿದೆ. ಒಂದೆಡೆ ಅಭಿವೃದ್ಧಿ ಇಲ್ಲ ಇನ್ನೊಂದೆಡೆ ಶಾಂತಿ ಸುವ್ಯವಸ್ಥೆ ಎಂಬುದೇ ಇಲ್ಲ ಎಂದು ಹೇಳಿದ್ದಾರೆ.

Category
ಕರಾವಳಿ ತರಂಗಿಣಿ