image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕ್ರಿಮಿನಲ್ ಮೊಕದ್ದಮೆಯಲ್ಲಿ ಅಪರಾಧಿ ಎಂದು ಸಾಬೀತಾದ ನಂತರ ಒಬ್ಬ ವ್ಯಕ್ತಿ ಶಾಸಕ, ಸಂಸದರಾಗಿ ಹೇಗೆ ಮರಳುತ್ತಿದ್ದಾರೆ? : ಸುಪ್ರೀಂ ಕೋರ್ಟ್ ಪ್ರಶ್ನೆ

ಕ್ರಿಮಿನಲ್ ಮೊಕದ್ದಮೆಯಲ್ಲಿ ಅಪರಾಧಿ ಎಂದು ಸಾಬೀತಾದ ನಂತರ ಒಬ್ಬ ವ್ಯಕ್ತಿ ಶಾಸಕ, ಸಂಸದರಾಗಿ ಹೇಗೆ ಮರಳುತ್ತಿದ್ದಾರೆ? : ಸುಪ್ರೀಂ ಕೋರ್ಟ್ ಪ್ರಶ್ನೆ

ನವದೆಹಲಿ: ಕ್ರಿಮಿನಲ್ ಮೊಕದ್ದಮೆಯಲ್ಲಿ ಶಿಕ್ಷೆಗೊಳಗಾದ ವ್ಯಕ್ತಿಯೊಬ್ಬರು ಶಾಸಕ- ಸಂಸದರಾಗಿ ಸದನಗಳಿಗೆ ಮರಳುವುದು ಹೇಗೆ ಎಂದು ಕೇಳಿರುವ ಸುಪ್ರೀಂಕೋರ್ಟ್​ ರಾಜಕೀಯದ ಅಪರಾಧೀಕರಣವು ಅತ್ಯಂತ ಪ್ರಮುಖ ವಿಷಯವಾಗಿದೆ ಎಂದು ಕಳವಳ ವ್ಯಕ್ತಪಡಿಸಿದೆ.

ಅಪರಾಧಿ ರಾಜಕಾರಣಿಗಳ ಮೇಲೆ ಜೀವಾವಧಿ ನಿಷೇಧ ಹೇರುವಂತೆ ಸಲ್ಲಿಕೆ ಮಾಡಿರುವ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯ ವಿಚಾರಣೆ, ನ್ಯಾಯಮೂರ್ತಿಗಳಾದ ದೀಪಂಕರ್ ದತ್ತಾ ಮತ್ತು ಮನಮೋಹನ್ ಅವರನ್ನೊಳಗೊಂಡ ಪೀಠದ ಮುಂದೆ ಬಂದಿತು. ವಕೀಲ ಅಶ್ವಿನಿ ಉಪಾಧ್ಯಾಯ ಅವರು ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ.

ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 8 ಮತ್ತು 9ರ ಸಾಂವಿಧಾನಿಕ ಸಿಂಧುತ್ವದ ಸವಾಲಿನ ಕುರಿತು ಮೂರು ವಾರಗಳಲ್ಲಿ ಕೇಂದ್ರ ಸರ್ಕಾರ ಮತ್ತು ಭಾರತೀಯ ಚುನಾವಣಾ ಆಯೋಗ ತನ್ನ ಪ್ರತಿಕ್ರಿಯೆ ನೀಡುವಂತೆ ಸುಪ್ರೀಂ ಕೋರ್ಟ್ ಇದೇ ವೇಳೆ ಸೂಚಿಸಿತು. ಜನತಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 8 ಮತ್ತು 9 ಕ್ಕೆ ಒತ್ತು ನೀಡಿದ ಪೀಠ, ಭ್ರಷ್ಟಾಚಾರ ಅಥವಾ ರಾಜ್ಯ ನಿಷ್ಠೆಯಿಂದ ತಪ್ಪಿತಸ್ಥರೆಂದು ಸಾಬೀತಾದ ಸರ್ಕಾರಿ ನೌಕರನನ್ನು ಒಬ್ಬ ವ್ಯಕ್ತಿಯಾಗಿ ಸೇವೆಯಲ್ಲಿ ಸೂಕ್ತವೆಂದು ಪರಿಗಣಿಸಲಾಗುವುದಿಲ್ಲ. ಆದರೆ ಮಂತ್ರಿಯಾಗಬಹುದು ಎಂಬುದರ ಬಗ್ಗೆ ಅಚ್ಚರಿ ವ್ಯಕ್ತಪಡಿಸಿತು.

ವಿಚಾರಣೆ ವೇಳೆ, ಪೀಠವು, ಒಮ್ಮೆ ರಾಜಕಾರಣಿಗೆ ಶಿಕ್ಷೆಯಾದರೆ ಮತ್ತು ಶಿಕ್ಷೆಯನ್ನು ಎತ್ತಿಹಿಡಿದರೆ ಸಂಸತ್ತು ಮತ್ತು ಶಾಸಕಾಂಗಕ್ಕೆ ಹೇಗೆ ಮರಳುತ್ತಾರೆ? ಎಂಬುದನ್ನು ಅವರೇ ಉತ್ತರಿಸಬೇಕು ಎಂದಿತು. ರಾಜಕೀಯದಲ್ಲಿ ಅಪರಾಧೀಕರಣವು ಅತ್ಯಂತ ಪ್ರಮುಖ ವಿಷಯವಾಗಿದೆ ಎಂದು ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿತು. ಹಿತಾಸಕ್ತಿಗಳ ಸ್ಪಷ್ಟ ಸಂಘರ್ಷವೂ ಇದರಲ್ಲಿದೆ ಎಂಬುದನ್ನು ಪೀಠವು ಗಮನಿಸಿತು. ಈ ಸಮಸ್ಯೆ ಬಗ್ಗೆ ನಿರ್ಣಯಿಸಲು ಸಹಾಯ ಮಾಡುವಂತೆ ಅಟಾರ್ನಿ ಜನರಲ್ ಆರ್ ವೆಂಕಟರಮಣಿಯನ್ನು ಕೇಳಿತು.

ಚುನಾವಣಾ ಆಯೋಗ, ಈ ವಿಚಾರದಲ್ಲಿ ತನ್ನ ಅಪ್ಲೈ ಆಫ್​ ಮೈಂಡ್​ ಉಪಯೋಗಿಸಬೇಕು. ನ್ಯಾಯಾಲಯದ ಮುಂದೆ ಕ್ಯಾನ್ವಾಸ್ ಮಾಡಿದ್ದಕ್ಕಿಂತ ಉತ್ತಮ ಪರಿಹಾರ ಕಂಡುಕೊಂಡುಕೊಳ್ಳಬೇಕು ಎಂದು ನ್ಯಾಯಮೂರ್ತಿಗಳು ಹೇಳಿದರು. ಕಾಲಕಾಲಕ್ಕೆ ಸುಪ್ರೀಂ ಕೋರ್ಟ್‌ನ ಆದೇಶಗಳು ಮತ್ತು ಹೈಕೋರ್ಟ್‌ನ ಮೇಲ್ವಿಚಾರಣೆಯ ಹೊರತಾಗಿಯೂ ಶಾಸಕರ ವಿರುದ್ಧ ಹೆಚ್ಚಿನ ಸಂಖ್ಯೆಯ ಪ್ರಕರಣಗಳು ಬಾಕಿ ಉಳಿದಿವೆ ಎಂದು ಅಮಿಕಸ್ ಕ್ಯೂರಿಯಾಗಿರುವ ಹಿರಿಯ ವಕೀಲ ವಿಜಯ್ ಹಂಸಾರಿಯಾ ಪ್ರತಿಪಾದಿಸಿದರು.

Category
ಕರಾವಳಿ ತರಂಗಿಣಿ