image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ತ್ವರಿತವಾಗಿ ಜನಗಣತಿ ನಡೆಸಲು ಕೇಂದ್ರಕ್ಕೆ ಸೋನಿಯಾ ಗಾಂಧಿ ಒತ್ತಾಯ

ತ್ವರಿತವಾಗಿ ಜನಗಣತಿ ನಡೆಸಲು ಕೇಂದ್ರಕ್ಕೆ ಸೋನಿಯಾ ಗಾಂಧಿ ಒತ್ತಾಯ

ನವದೆಹಲಿ: ದೇಶದಲ್ಲಿ ಆದಷ್ಟು ಬೇಗ ಜನಗಣತಿ ನಡೆಬೇಕೆಂದು ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ ಸೋಮವಾರ ಕೇಂದ್ರ ಸರಕಾರಕ್ಕೆ ಆಗ್ರಹಿಸಿದ್ದಾರೆ. ಆಹಾರ ಭದ್ರತಾ ಕಾನೂನಿನಡಿ ಸೌಲಭ್ಯಗಳಿಂದ ವಂಚಿತರಾಗಿರುವ ದೇಶದ ಸುಮಾರು 14 ಕೋಟಿ ಜನರಿಗೆ ಆಹಾರ ಭದ್ರತೆ ಒದಗಿಸಲು ಬೇಗನೆ ಜನಸಂಖ್ಯಾ ಗಣತಿ ನಡೆಸಬೇಕು ಎಂದು ಅವರು ಹೇಳಿದ್ದಾರೆ.

ರಾಜ್ಯಸಭೆಯಲ್ಲಿ ಇದೇ ಮೊದಲ ಬಾರಿಗೆ ಶೂನ್ಯ ವೇಳೆಯಲ್ಲಿ ಮಾತನಾಡಿದ ಸೋನಿಯಾ ಗಾಂಧಿ, ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್ಎಫ್ಎಸ್ಎ) ಅಡಿ ಫಲಾನುಭವಿಗಳನ್ನು ಈಗಲೂ 2011 ರ ಜನಗಣತಿಯ ಆಧಾರದಲ್ಲಿ ಗುರುತಿಸಲಾಗುತ್ತಿದೆಯೇ ಹೊರತು ಇತ್ತೀಚಿನ ಜನಸಂಖ್ಯೆಯ ಅಂಕಿ - ಅಂಶಗಳ ಮೇಲಲ್ಲ ಎಂದು ಹೇಳಿದರು.

ಸೆಪ್ಟೆಂಬರ್ 2013 ರಲ್ಲಿ ಯುಪಿಎ ಸರ್ಕಾರ ಪರಿಚಯಿಸಿದ ಎನ್ಎಫ್ಎಸ್ಎ ದೇಶದ 140 ಕೋಟಿ ಜನಸಂಖ್ಯೆಗೆ ಆಹಾರ ಮತ್ತು ಪೌಷ್ಠಿಕಾಂಶದ ಭದ್ರತೆಯನ್ನು ಖಾತ್ರಿಪಡಿಸುವ ಗುರಿ ಹೊಂದಿರುವ ಹೆಗ್ಗುರುತು ಕಾಯ್ದೆಯಾಗಿದೆ. ವಿಶೇಷವಾಗಿ ಕೋವಿಡ್ -19 ಬಿಕ್ಕಟ್ಟಿನ ಸಮಯದಲ್ಲಿ ಲಕ್ಷಾಂತರ ದುರ್ಬಲ ಕುಟುಂಬಗಳನ್ನು ಹಸಿವಿನಿಂದ ರಕ್ಷಿಸುವಲ್ಲಿ ಈ ಶಾಸನವು ಪ್ರಮುಖ ಪಾತ್ರ ವಹಿಸಿದೆ ಎಂದು ಸೋನಿಯಾ ಬಣ್ಣಿಸಿದರು.

ಫಲಾನುಭವಿಗಳಿಗೆ ನೀಡಲಾಗುವ ಆಹಾರದ ಕೋಟಾವನ್ನು ಈಗಲೂ 2011 ರ ಜನಗಣತಿಯ ಆಧಾರದ ಮೇಲೆ ನಿರ್ಧರಿಸಲಾಗುತ್ತಿದೆ. ಆದರೆ, ಈ ಅಂಕಿ - ಸಂಖ್ಯೆಗಳು ಒಂದು ದಶಕದಷ್ಟು ಹಳೆಯದಾಗಿವೆ ಎಂದು ಅವರು ಹೇಳಿದರು.

Category
ಕರಾವಳಿ ತರಂಗಿಣಿ