image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕರ್ನಾಟಕಕ್ಕೆ ಕೇಂದ್ರದ ತೆರಿಗೆ ಹಂಚಿಕೆ ಮೊತ್ತ 51,876 ಕೋಟಿ ರೂ.ಗೆ ಹೆಚ್ಚಳ

ಕರ್ನಾಟಕಕ್ಕೆ ಕೇಂದ್ರದ ತೆರಿಗೆ ಹಂಚಿಕೆ ಮೊತ್ತ 51,876 ಕೋಟಿ ರೂ.ಗೆ ಹೆಚ್ಚಳ

ಬೆಂಗಳೂರು: ಕೇಂದ್ರ ಬಜೆಟ್​​ನಲ್ಲಿ ನಿರೀಕ್ಷಿಸಿದ್ದ ಅನುದಾನ ಘೋಷಣೆಯಾಗದೇ ಇರುವುದರಿಂದ ಕರ್ನಾಟಕಕ್ಕೆ ನಿರಾಸೆಯಾಗಿದೆ. ಆದರೆ, 2025-26ರ ಸಾಲಿನಲ್ಲಿ ರಾಜ್ಯದ ಪಾಲಿನ ಕೇಂದ್ರದ ತೆರಿಗೆ ಹಂಚಿಕೆ ಮೊತ್ತವನ್ನು 51,876 ಕೋಟಿ ರೂ.ಗೆ ಹೆಚ್ಚಿಸಲಾಗಿದೆ.

ಬಜೆಟ್​​ನಲ್ಲಿ ರಾಜ್ಯಕ್ಕೆ ಗಮನಾರ್ಹ ಘೋಷಣೆಗಳೇನೂ ಇಲ್ಲ.‌ ರಾಜ್ಯ ಸರ್ಕಾರ ಬೆಂಗಳೂರಿನ 90,000 ಕೋಟಿ ರೂ. ವೆಚ್ಚದ ವಿವಿಧ ಪ್ರಮುಖ ಅಭಿವೃದ್ಧಿ ಯೋಜನೆಗಳ ಪಟ್ಟಿಯನ್ನು ಕೇಂದ್ರ ಸರ್ಕಾರದ ಮುಂದಿಟ್ಟಿತ್ತು. ಆದರೆ ಬಜೆಟ್​ನಲ್ಲಿ ಈ ಕುರಿತು ಯಾವುದೇ ಪ್ರಸ್ತಾಪಗಳಿಲ್ಲ.

2024-25ನೇ ಸಾಲಿನಲ್ಲಿ ರಾಜ್ಯಕ್ಕೆ ಕೇಂದ್ರ ಸರ್ಕಾರ 46,932.72 ಕೋಟಿ ರೂ. ತೆರಿಗೆ ಹಂಚಿತ್ತು. ಆದರೆ ಈ ಬಾರಿ 51,876 ಕೋಟಿ ರೂ.ಗೆ ಹೆಚ್ಚಿಸಿದೆ.‌ ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದರೆ ಶೇ.10ರಷ್ಟು ಹೆಚ್ಚಳವಾಗಿದೆ. ಇದು ಆದಾಯ ಕೊರತೆ ಎದುರಿಸುತ್ತಿರುವ ರಾಜ್ಯ ಸರ್ಕಾರಕ್ಕೆ ಸ್ವಲ್ಪ ನಿಟ್ಟುಸಿರು ಬಿಡುವ ವಿಚಾರ. ಈ ಬಾರಿ ತಮಿಳುನಾಡಿಗೆ 58,021.50 ಕೋಟಿ ರೂ., ಆಂಧ್ರ ಪ್ರದೇಶಕ್ಕೆ 57,566.31 ಕೋಟಿ ರೂ. ತೆರಿಗೆ ಹಂಚಲಾಗಿದೆ ಎಂದು ವರದಿಯಾಗಿದೆ.

Category
ಕರಾವಳಿ ತರಂಗಿಣಿ