image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಸಂಭಲ್​ನಲ್ಲಿ ರಾಮ ಸೀತೆ ಕೆತ್ತನೆಯ ನಾಣ್ಯಗಳು ಪತ್ತೆ

ಸಂಭಲ್​ನಲ್ಲಿ ರಾಮ ಸೀತೆ ಕೆತ್ತನೆಯ ನಾಣ್ಯಗಳು ಪತ್ತೆ

ಸಂಭಲ್ : ಇಲ್ಲಿನ ಅಲಿಪುರ್​ ಗ್ರಾಮದಲ್ಲಿ ಸುಮಾರು 300 ರಿಂದ 400 ವರ್ಷ ಹಳೆಯ ನಾಣ್ಯಗಳು ದೊರೆತಿದ್ದು, ಅದರಲ್ಲಿ ರಾಮ ಮತ್ತು ಸೀತೆಯ ಚಿತ್ರಣ ಕಂಡು ಬಂದಿದೆ ಎಂದು ಸ್ಥಳೀಯರು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ಮಾಹಿತಿ ನೀಡಿದೆ.

ಜಿಲ್ಲೆಯಲ್ಲಿ ಪುರಾತತ್ವ ಇಲಾಖೆ ಸಮೀಕ್ಷೆ ವೇಳೆ ಪೃಥ್ವಿರಾಜ್ ಚೌಹಾಣ್ ಅವರ ಸಮಕಾಲೀನರು ಎಂದು ಪರಿಗಣಿಸಲಾದ ಗುರು ಅಮರ್ ಅವರ ಸಮಾಧಿ ಕೂಡ ದೊರಕಿತ್ತು. ಹಾಗೆಯೇ ಇಲ್ಲಿನ ಐತಿಹಾಸಿಕ ಸ್ಥಳದ ಸಮೀಪ ಬ್ರಿಟಿಷ್​ ಕಾಲದ ನಾಣ್ಯಗಳು ದೊರಕಿದ್ದವು. 1920 ರಿಂದ ಭಾರತೀಯ ಪುರಾತತ್ವ ಇಲಾಖೆ ಇದನ್ನು ರಕ್ಷಣೆ ಮಾಡುತ್ತಿದೆ. ಸಂಭಲ್​ ಐತಿಹಾಸಿಕ ನಗರದ ಯಾತ್ರಾ ಸ್ಥಳ ಎಂದೇ ಗುರುತಿಸಿಕೊಂಡಿದೆ. ಇದು ಸತ್ಯ ಯುಗ ಕಾಲದ ಯಾತ್ರಾ ಸ್ಥಳ ಎಂದು ನಂಬಲಾಗಿದೆ. ಸಂಭಲ್​ ​ ಜಿಲ್ಲಾಡಳಿಕ ಕೂಡ ಈ ಐತಿಹಾಸಿಕ ಪರಂಪರೆಯ ಯಾತ್ರಾ ಸ್ಥಳ ರಕ್ಷಣೆಗೆ ಕಾರ್ಯ ನಿರ್ವಹಿಸುತ್ತಿದೆ. ಪುರಾತತ್ವ ಇಲಾಖೆ ಕೂಡ ಇದರ ರಕ್ಷಣೆಗೆ ಕಾರ್ಯ ನಿರ್ವಹಿಸುತ್ತಿದೆ.

ಅಮರ್​ಪತಿ ಖೇಡ್​​ ಪರಿಶೀಲನೆ: ಸಂಭಲ್​​ ತೆಹಸಿಲ್​ ಪ್ರದೇಶದ ಅಲಿಪುರ್​ ಗ್ರಾಮಕ್ಕೆ ಪುರಾತತ್ವ ಸರ್ವೇಕ್ಷಣಾ ತಂಡ ಆಗಮಿಸಿದ್ದು, ಅಮರ್​ಪತಿ ಖೇಡ್​ ಪರಿಶೀಲನೆ ನಡೆಸುತ್ತಿದ್ದಾರೆ. 1920ರಿಂದಲೂ ಈ ಸ್ಥಳವನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ರಕ್ಷಣೆ ಮಾಡುತ್ತಿದೆ.

ಇಲ್ಲಿ ಕಾಲದಿಂದ ಕಾಲಕ್ಕೆ ನಾಣ್ಯಗಳು ಪತ್ತೆಯಾಗುತ್ತಲೇ ಇವೆ ಎಂದು ಅಧಿಕಾರಿಗಳಿಗೆ ಸ್ಥಳೀಯರು ತಿಳಿಸಿದ್ದಾರೆ. ಆದರೆ, ಈ ನಾಣ್ಯಗಳನ್ನು ಒಪ್ಪಿಸಲು ಹಿಂದೇಟು ಹಾಕಿದ್ದರು. ಇದೇ ವೇಳೆ ಇಲ್ಲಿ ನೆರೆದಿದ್ದ ಗ್ರಾಮಸ್ಥರು ಎಸ್‌ಡಿಎಂ ಮುಂದೆ ಅನೇಕ ಪುರಾತನ ನಾಣ್ಯಗಳು ಮತ್ತು ಹೂಜಿ ಸಿಕ್ಕಿರುವುದಾಗಿ ತಿಳಿಸಿದ್ದಾರೆ. ಎಸ್​ಡಿಎಂ ಈ ನಾಣ್ಯಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Category
ಕರಾವಳಿ ತರಂಗಿಣಿ