image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಅತ್ಯಾಚಾರಿಗೆ ಮರಣದಂಡನೆ ನೀಡಲು ಹೈಕೋರ್ಟ್​ಗೆ ಬಂಗಾಳ ಸರ್ಕಾರದ ಅರ್ಜಿ

ಅತ್ಯಾಚಾರಿಗೆ ಮರಣದಂಡನೆ ನೀಡಲು ಹೈಕೋರ್ಟ್​ಗೆ ಬಂಗಾಳ ಸರ್ಕಾರದ ಅರ್ಜಿ

ಪಶ್ಚಿಮ ಬಂಗಾಳ : ಆರ್‌ಜಿ ಕರ್ ವೈದ್ಯೆ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ದೋಷಿ ಸಂಜಯ್ ರಾಯ್‌ಗೆ ಮರಣದಂಡನೆ ವಿಧಿಸಬೇಕು ಎಂದು ಒತ್ತಾಯಿಸಿ ಪಶ್ಚಿಮ ಬಂಗಾಳ ಸರ್ಕಾರ ಮಂಗಳವಾರ ಕೋಲ್ಕತ್ತಾ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಸೀಲ್ಡಾ ಸಿವಿಲ್ ಮತ್ತು ಕ್ರಿಮಿನಲ್ ನ್ಯಾಯಾಲಯವು ನೀಡಿರುವ ಜೀವಾವಧಿ ಶಿಕ್ಷೆ ಆದೇಶಕ್ಕೆ ಬೇಸರ ವ್ಯಕ್ತಪಡಿಸಿದೆ.

ಅಪರಾಧಿ ಸಂಜಯ್ ರಾಯ್‌ಗೆ ಮರಣದಂಡನೆ ವಿಧಿಸಬೇಕು ಎಂದು ಕೋರಿ ಅಡ್ವೊಕೇಟ್ ಜನರಲ್ ಕಿಶೋರ್ ದತ್ತಾ ಅವರು ಹೈಕೋರ್ಟ್​ನ ವಿಭಾಗೀಯ ಪೀಠದ ಮುಂದೆ ಅರ್ಜಿ ಸಲ್ಲಿಸಿದ್ದಾರೆ. ಈ ಪ್ರಕರಣವನ್ನು ಶೀಘ್ರವೇ ವಿಚಾರಣಾ ಪಟ್ಟಿಗೆ ಸೇರಿಸುವಂತೆ ಕೋರಿದ್ದಾರೆ.

ಇದಕ್ಕೂ ಮೊದಲು, ವೈದ್ಯೆ ವಿದ್ಯಾರ್ಥಿನಿ ಅತ್ಯಾಚಾರ - ಕೊಲೆ ಪ್ರಕರಣದ ಅಪರಾಧಿಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದ ಬಗ್ಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಅತೃಪ್ತಿ ವ್ಯಕ್ತಪಡಿಸಿದ್ದರು. ಪ್ರಕರಣವನ್ನು ಕೋಲ್ಕತ್ತಾ ಪೊಲೀಸರಿಂದ ಬಲವಂತವಾಗಿ ಸಿಬಿಐಗೆ ನೀಡಲಾಯಿತು. ಇದರಿಂದಾಗಿ ದೋಷಿ ಮರಣದಂಡನೆಯಿಂದ ತಪ್ಪಿಸಿಕೊಂಡ. ರಾಜ್ಯ ಪೊಲೀಸರೇ ತನಿಖೆ ನಡೆಸಿದ್ದರೆ, ಆತನಿಗೆ ಕಠಿಣ ಶಿಕ್ಷೆ ಗ್ಯಾರಂಟಿ ಕೊಡಿಸುತ್ತಿದ್ದೆವು ಎಂದು ಹೇಳಿದ್ದಾರೆ.

ಮಾಲ್ಡಾದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ಹಿಂದೆ ಇಂಥದ್ದೇ ಮೂರು ಪ್ರಕರಣಗಳಲ್ಲಿ ಕೋಲ್ಕತ್ತಾ ಪೊಲೀಸರು 60 ದಿನಗಳಲ್ಲಿ ತನಿಖೆ ನಡೆಸಿ ದೋಷಿಗಳಿಗೆ ಮರಣದಂಡನೆ ಶಿಕ್ಷೆ ಕೊಡಿಸಿದ್ದಾರೆ. ವೈದ್ಯೆಯ ಪ್ರಕರಣವನ್ನು ನಮ್ಮ ಪೊಲೀಸರೇ ನಡೆಸಿದ್ದರೆ, ಸಂಜಯ್​ ರಾಯ್​​ಗೆ ಮರಣದಂಡನೆ ಖಚಿತವಾಗುತ್ತಿತ್ತು. ಕೇಂದ್ರದ ಸಿಬಿಐ ತನಿಖೆಗೆ ನೀಡಿದ್ದು, ಶಿಕ್ಷೆ ಪ್ರಮಾಣ ಕಡಿಮೆಯಾಯಿತು ಎಂದು ಅವರು ಬೇಸರಿಸಿದರು.

Category
ಕರಾವಳಿ ತರಂಗಿಣಿ