ವಾಷಿಂಗ್ಟನ್: ಅಮೆರಿಕದ 47ನೇ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದ ಡೋನಾಲ್ಡ್ ಟ್ರಂಪ್ ಮೊದಲ ದಿನವೇ ಹವಾಮಾನದಿಂದ ಹಿಡಿದು ವಲಸೆವರೆಗೆ ಹಲವು ಆದೇಶಗಳಿಗೆ ಸಹಿ ಹಾಕಿದರು. ಇದೇ ವೇಳೆ 2021ರ ಜನವರಿ 6ರಂದು ದಾಳಿ ಮಾಡಿದ ಅನೇಕರಿಗೆ ಕ್ಷಮಾಧಾನವನ್ನು ನೀಡಿದರು.
2024ರ ಚುನಾವಣಾ ಪ್ರಚಾರದ ಸಮಯದಲ್ಲಿ ನೀಡಿದ ಅನೇಕ ಭರವಸೆಗಳ ಆದೇಶವನ್ನು ಅವರು ಈಡೇರಿಸಿದರು. ಅದರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯಿಂದ ಹೊರಬರುವಿಕೆಯನ್ನು ಮಾತ್ರ ನಿರೀಕ್ಷಿಸಿರಲಿಲ್ಲ. ಟ್ರಂಪ್ ಮೊದಲ ದಿನ ಯಾವ ಆದೇಶಗಳಿಗೆ ಸಹಿ ಹಾಕಿ ಶ್ವೇತಭವನದಲ್ಲಿ ಪ್ರಮಾಣವಚನ ಸ್ವೀಕರಿಸಿದರು ಎಂಬ ಕುರಿತ ವಿವರ ಇಲ್ಲಿದೆ..
ಅಮೆರಿಕ ವಲಸೆ ಮತ್ತು ಪೌರತ್ವವನ್ನು ಹೇಗೆ ಮರು ವಿನ್ಯಾಸ ಮಾಡಲಿದೆ ಎಂಬ ಗುರಿಯ ಹಲವು ಆದೇಶಗಳಿಗೆ ಸಹಿ ಹಾಕಿದರು. ಅದರಲ್ಲಿ ಒಂದು ದಕ್ಷಿಣ ಗಡಿಯಲ್ಲಿ ರಾಷ್ಟ್ರೀಯ ತುರ್ತನ್ನು ಘೋಷಣೆ ಮಾಡಿದರು. ವಿದೇಶಿ ಅಪರಾಧಿಗಳು ಎಂದು ಕರೆಯುವ ಮೂಲಕ ಸಾಮೂಹಿಕ ಗಡೀಪಾರು ಕಾರ್ಯಾಚರಣೆಗೆ ಭರವಸೆ ನೀಡಿದರು.
ಜನ್ಮ ಪೌರತ್ವ ಹಕ್ಕನ್ನು ರದ್ದುಗೊಳಿಸುವ ಆದೇಶಕ್ಕೂ ಕೂಡ ಅವರು ಸಹಿ ಹಾಕಿದರು. ಅಮೆರಿಕ ಪೌರತ್ವಕ್ಕಾಗಿ ಅಲ್ಲಿ ಜನಿಸಿದ ಮಕ್ಕಳಿಗೆ ಹಕ್ಕು ನೀಡುವ ಈ ಪೌರತ್ವವನ್ನು ಟ್ರಂಪ್ ರದ್ದು ಮಾಡಿದ್ದು, ಈ ಕ್ರಮವು ಇದೀಗ ಕಾನೂನು ಸವಾಲನ್ನು ಎದುರಿಸಲಿದೆ. ಹೀಗೆ ಹಲವಾರು ಮುಖ್ಯ ನಿರ್ಧಾರಗಳಿಗೆ ಟ್ರಂಪ್ ಸಹಿ ಹಾಕಿದ್ದಾರೆ.