image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಸಾ ರಾ ಗೋವಿಂದು ಎಂ ಎಲ್ ಸಿ ಆದರೆ ಕನ್ನಡ ಬಾಷೆ ಮತ್ತು ಕನ್ನಡ ಚಿತ್ರರಂಗಕ್ಕೆ ಒಳ್ಳೆಯದಾಗಬಹುದು : ಆದರೆ ಅಡ್ಡಿ ಏನು?

ಸಾ ರಾ ಗೋವಿಂದು ಎಂ ಎಲ್ ಸಿ ಆದರೆ ಕನ್ನಡ ಬಾಷೆ ಮತ್ತು ಕನ್ನಡ ಚಿತ್ರರಂಗಕ್ಕೆ ಒಳ್ಳೆಯದಾಗಬಹುದು : ಆದರೆ ಅಡ್ಡಿ ಏನು?

ಕಳೆದ ವಾರ ಮಂಡ್ಯದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆದ ಸಂದರ್ಭಲ್ಲಿ ಕನ್ನಡಕ್ಕಾಗಿ ಅಥವಾ ಸಾಹಿತ್ಯವಾಗಿ ಭಾಷಣ ಮಾಡುವುದು ಬಿಟ್ಟು ಕೆಲವು ಗಣ್ಯರು ಬೇರೆ ಬೇರೆ ವಿಷಯಗಳನ್ನೇ ಪ್ರಸ್ತಾಪ ಮಾಡಿ ಭಾಷಣ ಮಾಡುತ್ತಿದ್ದರು. ಆದರೆ ಅಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸಾರಾ ಗೋವಿಂದು  ಮಾತಾಡುತ್ತಾ ಕನ್ನಡ ಭಾಷೆ, ಸಾಹಿತ್ಯದ ಬಗ್ಗೆ ಸರಕಾರ ವಿಶೇಷ ಕಾಳಜಿ  ವಹಿಸಬೇಕು ಮತ್ತು  ಕರ್ನಾಟಕದ ಎಲ್ಲಾ ಇಲಾಖೆಗಳಲ್ಲಿ ಕನ್ನಡದವರಿಗೆ ಕೆಲಸ ನೀಡಬೇಕೆಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.‌ ಈ ಸಂದರ್ಭದಲ್ಲಿ ಕೂಡ ಕನ್ನಡದ ಮೇಲಿನ ಅಭಿಮಾನವನ್ನು ವ್ಯಕ್ತಪಡಿಸಿದ ಸಾ ರಾ ಗೋವಿಂದು  ಪಕ್ಕಾ ಕನ್ನಡ ಹೋರಾಟಗಾರ ಎಂಬುದು ಮತ್ತೊಮ್ಮೆ ಸಾಬೀತಾಯಿತು. ಅಣ್ಣಾವ್ರ ಒಡನಾಟದಲ್ಲಿರುವಾಗಲೇ ಕನ್ನಡ‌ ಭಾಷೆ ಮತ್ತು ಕನ್ನಡ ಸಿನಿಮಾಗಳ ಬಗ್ಗೆ ಹೋರಾಟ ಮಾಡುತ್ತಲೇ ಬಂದವರು ಸಾ ರಾ ಗೋವಿಂದು ಅವರು. ಚಲನಚಿತ್ರ ನಿರ್ಮಾಪಕರು, ಕರ್ನಾಟಕ ಚಲನಚಿತ್ರ ವಾಣಿಜ್ಯ  ಮಂಡಳಿಯ ಮಾಜಿ ಅಧ್ಯಕ್ಷರು, ಚಲನಚಿತ್ರ ನಟ , ಅಲ್ಲದೆ ಗೋಕಾಕ್ ಚಳವಳಿಯಲ್ಲಿ ಭಾಗವಹಿಸಿದವರು ಮಾತ್ರವಲ್ಲದೆ ಕನ್ನಡ ಭಾಷೆಗಾಗಿ  ಮತ್ತು ಕನ್ನಡ ಚಿತ್ರಗಳಿಗಾಗಿ ಇಂದಿಗೂ ಹೋರಾಟ ಮಾಡುತ್ತಲೇ ಇರುವಂತಹ ಧೀಮಂತ ವ್ಯಕ್ತಿ. ಇವರಿಗೆ  ಕನ್ನಡ ಭಾಷೆ ಮತ್ತು ಚಿತ್ರರಂಗದ ಕಡೆ ಇರುವ ಒಲವೂ ಅಪಾರವಾದದ್ದು.

ಕನ್ನಡ  ಚಿತ್ರರಂಗದ ಉಳಿವಿಗಾಗಿ ಇವರ ಪರಿಶ್ರಮ ಹೆಚ್ಚನದ್ದಾಗಿದೆ. ಇವತ್ತಿಗೂ ಕನ್ನಡ ಚಿತ್ರರಂಗದ ಬಗ್ಗೆ ಅಪಾರ ಕಾಳಜಿ ಇಟ್ಟಿರುವ ಸಾ ರಾ ಗೋವಿಂದು  ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾಗಬೇಕು ಮತ್ತು ಕಲಾವಿದರ ಖೋಟಾದಡಿ ಸಚಿವರಾಗಬೇಕೆಂಬುದು ಚಿತ್ರರಂಗದ ಮಹನೀಯರ ಬೇಡಿಕೆಯಾಗಿದೆ. ಈ ಬೇಡಿಕೆಯನ್ನು ಕರ್ನಾಟಕ ಸರಕಾರ ನೆರವೇರಿಸಿದಲ್ಲಿ ಕನ್ನಡ ಚಿತ್ರರಂಗದ ಅಭಿವೃದ್ಧಿಗೆ ಸಹಕಾರಿಯಾಗಲಿದೆ. 

ಬೇರೆಯಾರಿಗೋ ಈ ಅವಕಾಶ ಸಿಕ್ಕಿದರೆ ಚಿತ್ರರಂಗಕ್ಕೆ ಒಳಿತಾಗುವುದು ಕಷ್ಟ ಸಾಧ್ಯವಾಗಿದೆ. ಚಿತ್ರರಂಗದ ಸಂಪೂರ್ಣ ನಾಡಿಮಿಡಿತ ಬಲ್ಲವರಾದ ಸಾ ರಾ ಗೋವಿಂದು ಅವರಿಗೆ ಸರಕಾರ ಅವಕಾಶ ನೀಡಲೇ ಬೇಕು. ಸಾ ರಾ ಗೋವಿಂದು  ಕನ್ನಡ ಚಿತ್ರರಂಗದಲ್ಲಿ ಪಳಗಿದಷ್ಟು ವರ್ಷ ಬೇರೆ ಯಾರಾದರೂ ಪಳಗಿದ್ದರೆ ಅವರ ಖಜಾನೆ ತುಂಬುತ್ತಾ ಹೋಗುತ್ತಿತ್ತು. ಆದರೆ ಸಾ ರಾ ಗೋವಿಂದು ಅವರು ಇದಕ್ಕೆ ಯಾವುದಕ್ಕೂ ಆಸೆ ಪಡದೆ ಕನ್ನಡ ಭಾಷೆ ಮತ್ತು ಕನ್ನಡ ಚಿತ್ರರಂಗದ ಸೇವೆ   ಮಾಡುತ್ತಾ ಬಂದವರು. ಇವರ ಅನುಭವ, ನಿಸ್ವಾರ್ಥವಾದ ಸೇವೆ ಹಾಗೂ ನಮ್ಮ ಭಾಷೆಗಾಗಿ, ನಮ್ಮ ಸಿನಿಮಾ ಗಳಿಗಾಗಿ ಮಾಡಿದ ಹೋರಾಟವನ್ನು ಪರಿಗಣಿಸಿ, ಚಿತ್ರರಂಗದ ಉಳಿವು ಮತ್ತು ಅಭಿವೃದ್ಧಿಗಾಗಿ ಸರಕಾರ ಒಂದು ಒಳ್ಳೆಯ ನಿರ್ಧಾರವನ್ನು ತೆಗೆದುಕೊಂಡು ಶ್ರೀ ಸಾ ರಾ ಗೋವಿಂದು ಅವರಿಗೆ ಅವಕಾಶ ನೀಡಿದರೆ ಚಿತ್ರರಂಗಕ್ಕೆ ನ್ಯಾಯ ಸಿಗುತ್ತದೆ ಎನ್ನುವುದು ಚಿತ್ರರಂಗದ ಗಣ್ಯರ ಆಶಯವಾಗಿದೆ.

 

Category
ಕರಾವಳಿ ತರಂಗಿಣಿ