image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ದೇರಳಕಟ್ಟೆ ಕೆ.ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ನಡೆದ ರಾಜ್ಯದಲ್ಲಿಯೇ ಮೊದಲ ಅಸ್ಥಿ ದಾನ ಪ್ರಕ್ರಿಯೆ

ದೇರಳಕಟ್ಟೆ ಕೆ.ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ನಡೆದ ರಾಜ್ಯದಲ್ಲಿಯೇ ಮೊದಲ ಅಸ್ಥಿ ದಾನ ಪ್ರಕ್ರಿಯೆ

ಉಳ್ಳಾಲ: ಅಪಘಾತದಲ್ಲಿ ಮೃತಪಟ್ಟಿದ್ದ ಯುವಕನ ಅಸ್ಥಿ ದಾನಕ್ಕೆ ಕುಟುಂಬದವರು ಮುಂದಾಗಿದ್ದು, ದೇರಳಕಟ್ಟೆ ಕೆ.ಎಸ್. ಹೆಗ್ಡೆ ಆಸ್ಪತ್ರೆಯ ಎಲುಬು ಮತ್ತು ಕೀಲು ತಜ್ಞರ ವಿಭಾಗದ ಮುಖ್ಯಸ್ಥ ಡಾ. ವಿಕ್ರಮ್ ಶೆಟ್ಟಿ ನೇತೃತ್ವದಲ್ಲಿ ದಾನ ಸಂಗ್ರಹಿಸಲಾಗಿದೆ. ಇದರಿಂದ ಕ್ಯಾನ್ಸ‌ರ್ ಪೀಡಿತ ಆರು ಮಕ್ಕಳ ಕಾಲುಗಳನ್ನು ಉಳಿಸಬಹುದು ಎಂದು ಅವರು ತಿಳಿಸಿದ್ದಾರೆ. ಜಂಬೂರು ಗ್ರಾಮ ಸೋಮವಾರಪೇಟೆ ನಿವಾಸಿ, 32 ವರ್ಷದ ಈಶ್ವರ ಎನ್. ಅವರಿಗೆ ರಸ್ತೆ ಅಪಘಾತದಲ್ಲಿ ತಲೆಗೆ ಗಂಭೀರ ಗಾಯವಾಗಿ ಭಾನುವಾರ ಮೃತಪಟ್ಟರು. ಈಶ್ವರ ಅವರ ಸ್ಥಿತಿಯ ಬಗ್ಗೆ ಮಾಹಿತಿ ಪಡೆದ ಅವರ ಸಹೋದರಿ, ವೈದ್ಯಕೀಯ ತಂಡದ ಸಮಾಲೋಚನೆ ನಂತರ ಸಹೋದರನ ಅಸ್ಥಿಗಳನ್ನು ದಾನ ಮಾಡಲು ಮುಂದಾದರು. ಆಸ್ಪತ್ರೆ ಸಂಯೋಜಕಿ ಅಕ್ಷತಾ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ, ಕುಟುಂಬದ ಎಲ್ಲ ಸದಸ್ಯರಿಗೂ ದಾನದ ಮಹತ್ವ ವಿವರಿಸಿ,  ನ್ಯಾಯಾಂಗ ಪ್ರಕರಣವಾಗಿರುವುದರಿಂದ, ಪೊಲೀಸ್ ಅನುಮತಿ ಪಡೆದು ಶಸ್ತ್ರಚಿಕಿತ್ಸೆ ಪ್ರಕ್ರಿಯೆ ಆರಂಭಿಸಲಾಗಿದೆ.

ಡಾ. ವಿಕ್ರಮ್ ಶೆಟ್ಟಿ ಅವರ ನೇತೃತ್ವದಲ್ಲಿ, ಡಾ. ವರುಣ್ ಶೆಟ್ಟಿ, ಡಾ. ಶ್ರಿದಿಶ್ ನಂಬಿಯಾರ್, ಟಿನ್ಯೂ ಬ್ಯಾಂಕ್ ತಂಡದ ನೆರವಿನಿಂದ ಪ್ರಕ್ರಿಯೆ ನಡೆಯಿತು ಎಂದು ಆಸ್ಪತ್ರೆಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Category
ಕರಾವಳಿ ತರಂಗಿಣಿ