image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಹಾ ಕುಂಭ ಮೇಳ : ಅಧಿಕಾರಿಗಳಿಂದ ಮಾಹಿತಿ ಪಡೆದ ಪ್ರಧಾನಿ

ಮಹಾ ಕುಂಭ ಮೇಳ : ಅಧಿಕಾರಿಗಳಿಂದ ಮಾಹಿತಿ ಪಡೆದ ಪ್ರಧಾನಿ

ಉತ್ತರಪ್ರದೇಶ: 2025ರ ಜನವರಿ 13ರಿಂದ ಉತ್ತರ ಪ್ರದೇಶದಲ್ಲಿ ಮಹಾಕುಂಭ ಮೇಳ ಆರಂಭವಾಗುತ್ತಿದ್ದು, ಅದಕ್ಕೂ ಮೊದಲೇ ಸಂಗಮ ನಗರಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು, ವಿಶ್ವದ ಅತಿ ದೊಡ್ಡ ಧಾರ್ಮಿಕ ಕಾರ್ಯಕ್ರಮ ಸರಾಗವಾಗಿ ನಡೆಸುವ ಸಂಬಂಧ ಕೈಗೊಂಡಿರುವ ಸಿದ್ಧತೆ ಮತ್ತು ಕಾರ್ಯ ಯೋಜನೆಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.

ಮಹಾ ಕುಂಭ ಮೇಳದಲ್ಲಿ ಯಾವುದೇ ಅಡಚಣೆಯಂಟಾಗದಂತೆ ನಡೆಸಲು 8 ಮುಖ್ಯ ಅಧಿಕಾರಿಗಳು ಜವಾಬ್ದಾರಿವಹಿಸಿದ್ದು, ಅದರಲ್ಲಿ ಏಳು ಮಂದಿ ಉತ್ತರ ಪ್ರದೇಶ ಅಧಿಕಾರಿಗಳಾದರೆ, ಒಬ್ಬರು ರೈಲ್ವೆ ಅಧಿಕಾರಿಗಳಾಗಿದ್ದಾರೆ.

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​ ಮತ್ತು ರಾಜ್ಯಪಾಲರೊಂದಿಗೆ ಮಹಾ ಕುಂಭಮೇಳದ ಪ್ರದರ್ಶನಕ್ಕೆ ಆಗಮಿಸಿದ ಪ್ರಧಾನಿ ಮೋದಿ ಅವರು, ಸರ್ಕಾರದ ಸಿದ್ಧತೆ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದರು. 8 ಅಧಿಕಾರಿಗಳು ವಿವಿಧ ಇಲಾಖೆಗಳ ಉಸ್ತುವಾರಿ ವಹಿಸಿದ್ದು, ಫೋಟೋಗ್ರಾಫ್​ ಮೂಲಕ ಈ ಕುರಿತು ಮಾಹಿತಿ ನೀಡಿದರು. ಭಕ್ತರ ಸಂಖ್ಯೆ ಭಾರಿ ಮಟ್ಟದಲ್ಲಿರುವ ಹಿನ್ನೆಲೆ ಅವರ ಭದ್ರತೆ ಮತ್ತು ಶುಚಿತ್ವ ಹಾಗೂ ಸೌಲಭ್ಯಕ್ಕೆ ಕೈಕೊಂಡ ಕ್ರಮಗಳ ಕುರಿತು ಕೂಡ ಪ್ರಧಾನಿ ಕೇಳಿ ಮಾಹಿತಿ ಪಡೆದರು.

ಪ್ರಧಾನಿಗೆ ವಿವರಣೆ ನೀಡಿದ ಮುಖ್ಯ ಕಾರ್ಯದರ್ಶಿ: ಮುಖ್ಯ ಕಾರ್ಯದರ್ಶಿ ಮನೋಜ್​ ಸಿಂಗ್​ 45 ದಿನಗಳ ಈ ಕಾರ್ಯಕ್ರಮದ ಸಂಪೂರ್ಣ ಮಾಹಿತಿ ತಿಳಿಸಿದರು. ಮೊದಲಿಗೆ ಮುಖ್ಯ ಕಾರ್ಯದರ್ಶಿ ಮಹಾ ಕುಂಭ ಮೇಳದ ಸರ್ಕಾರಿ ಸಿದ್ಧತೆ ಕುರಿತು ಪ್ರಧಾನಿಗೆ ವಿವರವಾಗಿ ತಿಳಿಸಿದರು. ಸಂಗಮನದಲ್ಲಿ ಜನರು ಪವಿತ್ರ ಸ್ನಾನ ನಡೆಸಲು ಕೈಗೊಂಡ ಕ್ರಮದ ಕುರಿತು ತಿಳಿಸಿದರು.

ಪ್ರವಾಸೋದ್ಯಮ ಇಲಾಖೆ ಪ್ರಧಾನ​ ಕಾರ್ಯದರ್ಶಿ ಮುಖೇಶ್​ ಮೆಶ್ರಮ್​, ಪ್ರವಾಸೋದ್ಯಮ ಕುರಿತ ಯೋಜನಾಭಿವೃದ್ಧಿಗಳ ಕುರಿತು ಮಾಹಿತಿ ತಿಳಿಸಿದರು. ಇವರ ಬಳಿಕ ನಗರ ಅಭಿವೃದ್ಧಿ ಪ್ರಧಾನ ಕಾರ್ಯದರ್ಶಿ ಅಮರಜಿತ್​ ಅಭಿಜಿತ್​, ತಮ್ಮ ವಿಭಾಗದಲ್ಲಿ ಇವರೆಗೆ ನಡೆದಿರುವ ಕಾರ್ಯಗಳ ಕುರಿತು ಮಾಹಿತಿ ನೀಡಿದರು.

Category
ಕರಾವಳಿ ತರಂಗಿಣಿ