ಮಂಗಳೂರು: ಹೊಸ ವರ್ಷದ ಕೊಡುಗೆಯಾಗಿ ಮಂಗಳೂರಿನಿಂದ ಸಿಂಗಾಪುರ ನಡುವೆ ನೇರ ವಿಮಾನ ಹಾರಾಟಕ್ಕೆ ಏರ್ ಇಂಡಿಯ ಎಕ್ಸ್‌ಪ್ರೆಸ್ ವಿಮಾನಯಾನ ಸಂಸ್ಥೆ ಮುಂದಾಗಿದ್ದು, ಜ.21 ರಿಂದ ವಾರದಲ್ಲಿ ಎರಡು ದಿನಗಳ ಕಾಲ ಈ ವಿಮಾನ ಕಾರ್ಯಚರಣೆ ನಡೆಸಲಿದೆ. ಅದೇ ರೀತಿ ಮಂಗಳೂರು-ಹೊಸದಿಲ್ಲಿ, ಮಂಗಳೂರು – ಪುಣೆ ನಡುವೆಯೂ ನೇರ ವಿಮಾನ ಹಾರಾಡಲಿದೆ.ಈ ಕುರಿತು ಸಂಸದ ಕ್ಯಾ | ಬ್ರಿಜೇಶ್ ಚೌಟ ಅವರು ಟ್ವಿಟ್ ಮಾಡಿ ಸಿಂಗಾಪುದಲ್ಲಿ ನೆಲೆಸಿರುವ ಮಂಗಳೂರಿಗರಿಗೆ ತಮ್ಮ ಊರುಗಳಿಗೆ ಬರಲು ಮತ್ತು ಮಂಗಳೂರಿನಲ್ಲಿ ಹೂಡಿಕೆಗೆ ಈ ಸೌಕರ್ಯ ನೆರವಾಗಲಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಆಯಕ್ಟ್ ಈಸ್ಟ್ ಪಾಲಿಸಿ ಜೋಡಣೆ ಮತ್ತು ವ್ಯಾಪಾರ ವಹಿವಾಟಿಗೆ ಉತ್ತೇಜನ ನೀಡುವಂತಿದೆ
ಮಂಗಳೂರಿನಿಂದ ಸಿಂಗಾಪುರಕ್ಕೆ ನೇರ ವಿಮಾನ ಸೇವೆ ಬೇಕೆಂಬ ಬೇಡಿಕೆ ಇತ್ತು. ಈ ಕುರಿತಂತೆ ನಾಗರಿಕ ವಿಮಾನಯಾನ ಸಚಿವರಿಗೆ ಪತ್ರ ಬರೆದು ಮನವಿ ಮಾಡಿದ್ದೆ. ಇದೀಗ ನೇರ ವಿಮಾನ ಸಂಪರ್ಕಕ್ಕೆ ಒಪ್ಪಿಗೆ ದೊರೆತಿದೆ ಎಂದು ತಿಳಿಸಿದ್ದಾರೆ.
ಮಂಗಳೂರು ವಿಮಾನ ನಿಲ್ದಾಣದಿಂದ ಸಿಂಗಾಪುರಕ್ಕೆ ವಿಮಾನ ಯಾನ ಆರಂಭಿಸುವುದರೊಂದಿಗೆ ಆತ್ಮೀಯ ಏಷ್ಯಾದ ಮೊದಲ ಅಂತಾರಾಷ್ಟ್ರೀಯ ತಾಣಕ್ಕೆ ವಿಮಾನ ಸಂಪರ್ಕ ಕಲ್ಪಿಸಿದಂತಾಗಿದೆ. ಈವರೆಗೆ ಮಧ್ಯಪ್ರಾಚ್ಯ ಮತ್ತು ಸೌದಿಗೆ ವಿಮಾನ ಸೇವೆ ಇತ್ತು.