ಚಿಕ್ಕಮಗಳೂರು: ರಾಜ್ಯದ ಬಹುದೊಡ್ಡ ವಿವಾದಿತ ಧಾರ್ಮಿಕ ಕ್ಷೇತ್ರ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ ಸಂಪೂರ್ಣ ಹಿಂದೂ ಪೀಠಕ್ಕಾಗಿ ಆಗ್ರಹಿಸಿ ನಡೆಯುತ್ತಿರುವ 25ನೇ ವರ್ಷದ ದತ್ತಜಯಂತಿಯನ್ನು ಶಾಂತಿಯುತವಾಗಿ ನಡೆಸಲು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಕ ಚಿಕ್ಕಮಗಳೂರಿನಲ್ಲಿ ಸರ್ಪಗಾವಲು ಹಾಕಿದ್ದು, ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಹೈಅಲರ್ಟ್ ಘೋಷಿಸಿದೆ. ವಿವಾದಿತ ಸ್ಥಳ ಚಂದ್ರದ್ರೋಣ ಪರ್ವತದ ಸಾಲಿನ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ ಹಿಂದೂ ಪೀಠಕ್ಕಾಗಿ ವಿಶ್ವಹಿಂದೂ ಪರಿಷತ್ ಹಾಗೂ ಭಜರಂಗದಳ ನೇತೃತ್ವದಲ್ಲಿ ಈ ಬಾರಿ 25ನೇ ವರ್ಷದ ಅದ್ದೂರಿ ದತ್ತಜಯಂತಿ ನಡೆಯಲಿದೆ. ಇಲ್ಲಿ ಡಿ.12 ರಿಂದ 14ರ ವರೆಗೆ ಪ್ರಮುಖ ಕಾರ್ಯಕ್ರಮಗಳು ನಡೆಯಲಿದ್ದು, ಯಾವುದೇ ಕೋಮು ಸಂಘರ್ಷ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿದೆ.
25ನೇ ವರ್ಷದ ಈ ದತ್ತಜಯಂತಿಯನ್ನು ಶಾಂತಿಯುತವಾಗಿ ನಡೆಸಲು ಜಿಲ್ಲೆಯಾದ್ಯಂತ 7 ಎಸ್ಪಿಗಳೊಂದಿಗೆ 4000 ಪೊಲೀಸರು ಮತ್ತು 36 ಚೆಕ್ಕ್ ಪೋಸ್ಟ್, 600 ಸಿಸಿ ಕ್ಯಾಮರ ಅಳವಡಿಸಲಾಗಿದೆ. ಇನ್ನುಳಿದಂತೆ ಡಿ.13ರಿಂದ 14ರ ವರೆಗೆ ಜಿಲ್ಲೆಯಾದ್ಯಂತ ಮಧ್ಯ ಹಾಗೂ ಪ್ರವಾಸಿಗರನ್ನು ನಿಷೇಧಿಸಲಾಗಿದೆ.