image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯದ ವಿರುದ್ದ ಸರಕಾರ ಸೈನಿಕ ಕಾರ್ಯಾಚರಣೆಗೆ ಮುಂದಾಗಬೇಕು-ಅಖಿಲ ಭಾರತ ಸಂತ ಸಮಿತಿ ರಾಜ್ಯಾಧ್ಯಕ್ಷ ಮಹಾಮಂಡಲೇಶ್ವರ ವಿದ್ಯಾನಂದ ಸರಸ್ವತಿ

ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯದ ವಿರುದ್ದ ಸರಕಾರ ಸೈನಿಕ ಕಾರ್ಯಾಚರಣೆಗೆ ಮುಂದಾಗಬೇಕು-ಅಖಿಲ ಭಾರತ ಸಂತ ಸಮಿತಿ ರಾಜ್ಯಾಧ್ಯಕ್ಷ ಮಹಾಮಂಡಲೇಶ್ವರ ವಿದ್ಯಾನಂದ ಸರಸ್ವತಿ

ಮಂಗಳೂರು:  ಬಾಂಗ್ಲಾದೇಶದಲ್ಲಿ ಮುಸ್ಲಿಂ ತೀವ್ರವಾದಿಗಳು ಹಿಂದೂಗಳ ಮೇಲೆ ಹಲ್ಲೆ ನಡೆಸುತ್ತಿದ್ದಾರೆ. ಇಸ್ಕಾನ್ ನ ಪ್ರಮುಖರಾದ ಚಿನ್ಮಯ ಕೃಷ್ಣದಾಸರನ್ನು ಬಂಧನಕ್ಕೊಳ ಪಡಿಸಿದ್ದಾರೆ.  ಅಲ್ಪ ಸಂಖ್ಯಾತರಾದ ಹಿಂದೂಗಳ ಮೇಲೆ ನಿರಂತರವಾಗಿ ಹಲ್ಲೆಗಳು ನಡೆಯುತ್ತಿದ್ದರೂ ಎಲ್ಲ ಪಕ್ಷಗಳು ಮೌನ ಯಾಕೆ? ಅದೇ ಘಟನೆಗಳು ಭಾರತದಲ್ಲಿ ನಡೆದರೆ ಎಷ್ಟು ಬೆಂಬಲ ಸಿಗಬಹುದು.  ಭಾರತ ಸರಕಾರ ಬಾಂಗ್ಲಾದೇಶಕ್ಕೆ ಎಚ್ಚರಿಕೆ ನೀಡಬೇಕು. ಇಲ್ಲವಾದಲ್ಲಿ ಸೈನಿಕ ಕಾರ್ಯಾಚರಣೆ ನಡೆಸಿ ಹಿಂದೂಗಳಿಗೆ ರಕ್ಷಣೆಯನ್ನು ನೀಡಬೇಕು. ಅಖಂಡ ಭಾರತದ ಭಾಗವಾದ ಬಾಂಗ್ಲಾದೇಶವನ್ನು ಮತ್ತೆ ಭಾರತಕ್ಕೆ ಸೇರಿಸಬೇಕು ಎಂದು ಅಖಿಲ ಭಾರತ ಸಂತ ಸಮಿತಿ ರಾಜ್ಯಾಧ್ಯಕ್ಷ ಮಹಾಮಂಡಲೇಶ್ವರ ವಿದ್ಯಾನಂದ ಸರಸ್ವತಿ ಆಗ್ರಹಿಸಿದ್ದಾರೆ. ಅವರು ನಗರದ ಓಂ ಮಠದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಈ ರೀತಿ ಹಿಂದುಗಳಿಗೆ ದೌರ್ಜನ್ಯ ನಡೆದರೆ ದೇಶಾದ್ಯಂತ ಸಮಾವೇಶ ದ ಜೊತೆಗೆ ಉಗ್ರ ಹೋರಾಟ ನಡೆಯಲಿದೆ. ಎಲ್ಲಾ ಮಠ ಮಂದಿರಗಳಿಗೆ ಬೇಟಿ ನೀಡಿ ಉಗ್ರ ಹೋರಾಟಕ್ಕೆ ಅಯೋಜನೆ ಮಾಡಿತ್ತಿದ್ದೇವೆ ಎಂದರು. 

ವಕ್ಘ್ ಆಕ್ಟ್ ನಿಂದ  ಮಠ ಹಾಗೂ ರೈತರ ಆಸ್ತಿಯು ದೋಚುವ ಪರಿಸ್ಥಿತಿ ತಂದಿಟ್ಟಿದೆ.  ಈ ಆಕ್ಟಿನ ಪರಿಣಾಮ ಜನ ಮನದಲ್ಲಿ ಆತಂಕದ ಪರಿಸ್ಥಿತಿ ತುಂಬಾ ನಷ್ಟ ವನ್ನುಂಟು ಮಾಡುತ್ತಿದೆ. ಕಾಲಾಂತರದಿಂದ ತಮ್ಮ ಕೈವಶವಿದ್ದ ಆಸ್ತಿ ಕಳೆದುಕೊಳ್ಳುವಂತಹ ಸ್ಥಿತಿ ಆದರಿಂದ ಇಂತಹ ಆಕ್ಟನ್ನು ಶೀಘ್ರ ರದ್ದುಗೊಳಿಸಬೇಕು. ಹಿಂದೂಗಳನ್ನು ಹಿಬ್ಬಾಗ ಮಾಡಿದ್ದು ಈ ಹಿಂದಿನ ಸರಕಾರ ಆದರಿಂದ ವಕ್ಘ್ ಬೋರ್ಡ್ ರದ್ದುಗೊಳಿಸಿ ಏಕರೂಪದ ಕಾನೂನು ಜಾರಿಗೊಳಿಸಲಿ“ ಎಂದರು.

ಸುದ್ದಿಗೋಷ್ಠಿಯಲ್ಲಿ ಓಂ ಶ್ರೀ ಮಠದ ಮಾತಾಶ್ರೀ ಶಿವಜ್ಞಾಮಯೀ ಸರಸ್ವತಿ, ಅಖಿಲ ಭಾರತೀಯ ಸಂತ ಸಮಿತಿ ಕೋಶಾಧಿಕಾರಿ ಶ್ರೀ ಮಹಾಬಲೇಶ್ವರ ಸರಸ್ವತಿ ಸ್ವಾಮೀಜಿ, ಮುಖ್ಯ ಕಾರ್ಯದರ್ಶಿ ಶ್ರೀ ರಾಜೇಶ್ ನಾಥ್ ಗುರೂಜಿ, ಪ್ರಾಂತ ಸಂಘಟನಾ ಕಾರ್ಯದರ್ಶಿ ಶ್ರೀ ನಿಶ್ಚಲ ನಿರಂಜನ ಕೇಂದ್ರ ಸ್ವಾಮೀಜಿ, ಕಾಸರಗೋಡು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ತೀರ್ಥ ಸ್ವಾಮೀಜಿ, ಮಂಗಳೂರು ಚಿತ್ರಾಪುರ ಮಠದ ವಿಧ್ಯೇಂದ್ರ ತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ