image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

*ಇನ್‌ಲ್ಯಾಂಡ್ ಬ್ಯುಸಿನೆಸ್ ಪಾರ್ಕ್ ಉದ್ಘಾಟನೆ

*ಇನ್‌ಲ್ಯಾಂಡ್ ಬ್ಯುಸಿನೆಸ್ ಪಾರ್ಕ್ ಉದ್ಘಾಟನೆ

ಮಂಗಳೂರು, ಎ.28:ಮಂಗಳೂರು ನಗರದ ಹಲವು ಸುಂದರ ವಿನ್ಯಾಸದ ಕಟ್ಟಡಗಳ   ಮೂಲಕ ಇನ್ ಲ್ಯಾಂಡ್ ಬಿಲ್ಡರ್  ನಂತಹ ಕಟ್ಟಡ ನಿರ್ಮಾಣ ಮಾಡುವ ಸಂಸ್ಥೆಗಳು  ನಗರದ ಸೊಬಗನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ತೇಜಸ್ವಿನಿ ಆಸ್ಪತ್ರೆಯ ಸ್ಥಾಪಕರು ಮತ್ತು ನಿಟ್ಟೆ ವಿಶ್ವ ವಿದ್ಯಾನಿಲ ಯದ  ಸಹಕುಲಾಧಿಪತಿ  ಎಸ್ಎಸ್ಐಒಟಿ ಅಧ್ಯಕ್ಷ ರಾದ  ಡಾ.ಶಾಂತಾರಾಮ ಶೆಟ್ಟಿ ತಿಳಿಸಿದ್ದಾರೆ.

     ಅವರು ಇಂದು ನಗರದ ಬಿಜೈ ಮುಖ್ಯ ರಸ್ತೆಯ ಬಳಿ  ತಲೆಯೆತ್ತಿರುವ ಇನ್‌ಲ್ಯಾಂಡ್ ಬಿಲ್ಡರ್ಸ್‌ ನ ಅತ್ಯಾಧುನಿಕ ವಾಣಿಜ್ಯ ಪ್ರಾಜೆಕ್ಟ್ 'ಇನ್‌ಲ್ಯಾಂಡ್ ಬ್ಯುಸಿನೆಸ್ ಪಾರ್ಕ್'ನ್ನು  ಉದ್ಘಾಟಿಸಿ ಮಾತನಾಡುತ್ತಿದ್ದರು.

    ಒಂದು ಕಟ್ಟಡ ಮಾದರಿಯಾಗಿ ಇರಬೇಕಾ ದರೆ.ಆ ಕಟ್ಟಡ ಸಂಕೀರ್ಣಕ್ಕೆ ಉತ್ತಮವಾದ ಮೂಲಭೂತ ಸೌಕರ್ಯ, ವಿಸ್ತಾರವಾದ ಪಾರ್ಕಿಂಗ್ ಸೌಲಭ್ಯ ಅಗತ್ಯ ವಿದೆ ನೂತನ ಸಂಕೀರ್ಣಗಳಲ್ಲಿ ಈ ಎಲ್ಲಾ ಸೌಲಭ್ಯಗಳನ್ನು ಗ್ರಾಹಕರಿಗೆ ನೀಡಲು ಕಟ್ಟಡ ನಿರ್ಮಣದಲ್ಲಿ ತೊಡಗಿರುವವರು ಗಮನಹರಿಸಿ ಒದಗಿ ಸುತ್ತಿರುವುದು ಮಾದರಿಯಾಗಿದೆ.ದಕ್ಷಿಣ ಕನ್ನಡ ಜಿಲ್ಲೆ,ಬೆಂಗಳೂರು, ಮೈಸೂರಿನಲ್ಲಿ

ನಿರ್ಮಾಣ ಮಾಡಿ ಖ್ಯಾತಿ ಪಡೆದಿರುವ ಇನ್ಲ್ಯಾಂಡ್ ಬಿಲ್ಡರ್ ಗಳು ದೆಹಲಿಯಲ್ಲಿಯೂ ಕಟ್ಟಡ ನಿರ್ಮಾಣ ಮಾಡಿ ಖ್ಯಾತಿ ಪಡೆಯಲಿ ಎಂದು ಶುಭ ಹಾರೈಸಿದರು. 

ಸಮಾರಂಭದಲ್ಲಿ ಅತಿಥಿಯಾಗಿ ಮಾತನಾ ಡಿದ ಮನಪಾ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಮಾತನಾಡುತ್ತಾ,ಮಂಗಳೂರು ಸ್ಮಾರ್ಟ್ ಸಿಟಿ ಯಾಗುತ್ತಿರುವ ಸಂದರ್ಭದಲ್ಲಿ ಉತ್ತಮ ವಿನ್ಯಾಸ ಗಳ ಕಟ್ಟಡ ನಿರ್ಮಾಣದ ಮೂಲಕ ಕೊಡುಗೆ ನೀಡುತ್ತಿರುವುದು ಶ್ಲಾಘನೀಯ ಎಂದರು.

    ಸಮಾರಂಭದಲ್ಲಿ  ಮುಖ್ಯ ಅತಿಥಿಯಾಗಿ ಭಾಗವಹಿಸಿದ ಐಸಿಎಐನ ಮಾಜಿ ಅಧ್ಯಕ್ಷ ಎಸ್ .ಎಸ್ .ನಾಯಕ್ ಮಾತನಾಡುತ್ತಾ, ತರಬೇತಿ ಹೊಂದದೆ ಇರುವ ಸಾವಿರಾರು ಕಾರ್ಮಿಕರಿಗೆ ಕೆಲಸ ಒದಗಿಸಿ ದೇಶದ ಜಿಡಿಪಿಗೆ ಶೇ.10 ಕ್ಕಿಂತಲೂ ಹೆಚ್ಚು ಕೊಡುಗೆ ನೀಡುತ್ತಿದ್ದಾರೆ ಎಂದು ಶುಭ ಹಾರೈಸಿದರು.

ಸಮಾರಂಭದ ಅಧ್ಯಕ್ಷತೆವಹಿಸಿದ್ದ ಇನ್ ಲ್ಯಾಂಡ್ ಸಮೂಹದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಿರಾಜ್ ಅಹ್ಮದ್ ಈ ಬಗ್ಗೆ ವಿವರ ನೀಡಿ, ಮಂಗಳೂರಿನಲ್ಲಿ ತಮ್ಮ ಕಚೇರಿಗಳನ್ನು ಸ್ಥಾಪಿಸುವ ವ್ಯವ ಹಾರಗಳಿಗೆ ಉತ್ತಮ ಮತ್ತು ಆಧುನಿಕ ಪರ್ಯಾಯವನ್ನು ನೀಡಲು ಇನ್‌ಲ್ಯಾಂಡ್ ಬಿಸಿನೆಸ್ ಪಾರ್ಕ್ ಸೂಕ್ತವಾಗಿದೆ. ಇಂದು ಬಹುರಾಷ್ಟ್ರೀಯ ಕಂಪನಿಗಳು ನಗರದಲ್ಲಿ ಶಾಖಾ ಕಚೇರಿಗಳನ್ನು ಸ್ಥಾಪಿಸುತ್ತಿವೆ. ವೈದ್ಯರು ಹೈಟಿಕ್ ಕ್ಲಿನಿಕ್ ಗಳು,ಬ್ಯಾಂಕ್ ಗಳಿಗೆ ಗ್ರಾಹಕ ಸ್ನೇಹಿ ಆವರಣ, ಕೆಫೆಗಳು ಮತ್ತು ರೆಸ್ಟೋರೆಂಟ್ ಗಳಿಗೆ ಸೂಕ್ತ ಸ್ಥಳಗಳು ಬೇಕು. ಫಿಟ್ನೆಸ್ ಕೇಂದ್ರಗಳಿಗೆ ಕಸ್ಟಮೈಸ್ ಮಾಡಿದ ಸ್ಥಳಗಳು ಬೇಕು ಆದರೆ ಈಗಿ ರುವ ವಾಣಿಜ್ಯ ಕಟ್ಟಡಗಳು ನಗರವು ದಟ್ಟಣೆಯಿಂದ ಕೂಡಿದೆ, ಸರಿಯಾದ ಪಾರ್ಕಿಂಗ್ ಮತ್ತು ವಿದ್ಯುತ್ ಬ್ಯಾಕ್ ಅಪ್ ಕೊರತೆ ಮತ್ತು ಆಧುನಿಕ ಗ್ರಾಹಕರ ಅಗತ್ಯಗಳನ್ನು ಪೂರೈಸುವುದಿಲ್ಲ. ಗ್ರಾಹಕರ ಈ ಎಲ್ಲಾ ಅಗತ್ಯಗಳನ್ನು ಪೂರೈಸಲು ಮತ್ತು ಅವರ ಜೀವನಶೈಲಿ-ಸ್ಥಾನಮಾನವನ್ನು ಹೆಚ್ಚಿಸುವಂತೆ ಇನ್‌ಲ್ಯಾಂಡ್ ಬಿಸಿನೆಸ್ ಪಾರ್ಕ್ ಕಟ್ಟಡವನ್ನು ವಿನ್ಯಾಸಗೊಳಿಸ ಲಾಗಿದೆ. ಎನ್‌ಆರ್‌ಐ ಮತ್ತು ಇತರ ಹೂಡಿಕೆದಾರರಿಗೆ ಇನ್ ಲ್ಯಾಂಡ್ ಬ್ಯುಸಿನೆಸ್ ಪಾರ್ಕ್ ಒಂದು ಆದರ್ಶ ಹೂಡಿಕೆಯ ಅವಕಾಶವಾಗಿದೆ ಎಂದರು.

ಇನ್‌ಲ್ಯಾಂಡ್ ಉತ್ತಮ ಗುಣಮಟ್ಟದ ವಸ್ತುಗಳನ್ನು ಮಾತ್ರ ಬಳಸುತ್ತದೆ ಮತ್ತು ಉತ್ತಮ ಗುಣಮಟ್ಟದ ಯೋಜನೆಗಳನ್ನು ಸಮಯಕ್ಕೆ ಸರಿಯಾಗಿ ತಲುಪಿಸಲು ಹೆಚ್ಚು ನುರಿತ ಇಂಜಿನಿಯ‌ರ್ಗಳ  ತಂಡವನ್ನು ಬಳಸಿಕೊಳ್ಳುತ್ತದೆ. ನಮ್ಮ ವ್ಯವಹಾರಗಳಲ್ಲಿ ಮುಕ್ತ ಮತ್ತು ಪ್ರಾಮಾಣಿಕ ವಿಧಾನವು ಸಾವಿರಾರು ಗ್ರಾಹಕರ ಹೃದಯ ಮತ್ತು ನಿಷ್ಠೆಯನ್ನು ಗೆದ್ದಿದೆ. ಭವಿಷ್ಯದಲ್ಲೂ ನೀವು ಇನ್ ಲ್ಯಾಂಡ್ ಬ್ಯಾಂಡ್ ನೊಂದಿಗೆ ಇನ್ನೂ ಅನೇಕ ನವೀನ ಮತ್ತು ಸುಂದರವಾಗಿ ವಿನ್ಯಾಸಗೊಳಿಸಿದ ಕಟ್ಟಡಗಳನ್ನು ಮಂಗಳೂರು ಮಾತ್ರವಲ್ಲದೆ ರಾಜ್ಯದ ಇತರ ನಗರಗಳಲ್ಲಿಯೂ  ಕಾಣಬಹುದು ಎಂದವರು ತಿಳಿಸಿದ್ದಾರೆ.

      ಸಮಾರಂಭದಲ್ಲಿ ಶಾಸಕ ವೇದವ್ಯಾಸ ಕಾಮತ್  ಶುಭ ಹಾರೈಸಿದರು.

*'ಇನ್‌ಲ್ಯಾಂಡ್ ಬ್ಯುಸಿನೆಸ್ ಪಾರ್ಕ್':-

ನಗರದ ಪ್ರಮುಖ ಸ್ಥಳದಲ್ಲಿ, ಅಸಂಖ್ಯಾತ ದೊಡ್ಡ ವ್ಯಾಪಾರ ಸಂಸ್ಥೆಗಳಿಗೆ ಸಮೀಪದಲ್ಲಿರುವ ಇನ್‌ಲ್ಯಾಂಡ್ ಬ್ಯುಸಿನೆಸ್ ಪಾರ್ಕ್ ಮಂಗಳೂರಿನ ಐಕಾನಿಕ್ ವಾಣಿಜ್ಯ . ಕೇಂದ್ರವಾಗಿ ಬೆಳೆಯಲಿದೆ.ಅಮೂಲ್ಯ ಆಭರಣಗಳು, ಖ್ಯಾತ ಬ್ರ್ಯಾಂಡ್ ನ  ಶೋರೂಂಗಳಿಗೆ, ಬಹು ರಾಷ್ಟ್ರೀಯ ಕಂಪೆನಿಗಳ ಕಚೇರಿಗಳು,  ಕ್ಲಿನಿಕ್ ಮತ್ತು ಪ್ರಮುಖ ವೈದ್ಯರಿಗೆ ರೋಗನಿರ್ಣಯ ಕೇಂದ್ರಗಳು, ಬ್ಯಾಂಕ್ ಶಾಖೆಗಳು, ಆರೋಗ್ಯ, ಫಿಟ್ನೆಸ್ ಮತ್ತು ತರಬೇತಿ ಕೇಂದ್ರಗಳು, ಮೆಗಾ@ ಬ್ರಾಂಡ್ ಆಹಾರ ಸರಪಳಿಗಳು ಮತ್ತು ಇತರ ಹೊಸ-ಯುಗದ ವ್ಯಾಪಾರ ವಹಿವಾಟು ವ್ಯವಹಾರ ಗಳನ್ನು ನಡೆಸಲು ಯೋಗ್ಯ ಸ್ಥಳವಾಗಿದೆ.

ಇನ್‌ಲ್ಯಾಂಡ್ ಬ್ಯುಸಿನೆಸ್ ಪಾರ್ಕ್ ಅತ್ಯುನ್ನತ ಗುಣಮಟ್ಟದ ಮತ್ತು ಆಧುನಿಕ ದರ್ಜೆಯ 65 ವಾಣಿಜ್ಯ ಮಳಿಗೆಗಳನ್ನು ಒಳಗೊಂಡಿದೆ. ಕಟ್ಟಡದಲ್ಲಿ ಸಾಕಷ್ಟು ಪಾರ್ಕಿಂಗ್ ಸ್ಥಳಗಳು ಮತ್ತು ಶೇ.100ರಷ್ಟು ಡಿಜಿ ಬ್ಯಾಕ್ ಅಪ್ ನೊಂದಿಗೆ ವರ್ಧಿತ ವಿದ್ಯುತ್ ಒದಗಿಸಲಾಗಿದೆ. 24 ಗಂಟೆಗಳ ಸಿಸಿಟಿವಿ ಆಧಾರಿತ ಭದ್ರತೆ, ನೂತನ ಅಗ್ನಿಶಾಮಕ ವ್ಯವಸ್ಥೆ, ಗ್ರಾನೈಟ್ ನೆಲಹಾಸು ಹೊಂದಿರುವ ವಿಶಾಲವಾದ ಕಾರಿಡಾರ್‌ಗಳು ಮತ್ತು ಸ್ವಯಂಚಾಲಿತ ರಕ್ಷಣಾ ಸಾಧನದೊಂದಿಗೆ ಎರಡು ಸ್ವಯಂಚಾಲಿತ ಎಲಿವೇಟರ್ ಗಳು ಸೌಕರ್ಯಗಳಿವೆ. ವಿಶಾಲವಾದ ಇಟಾಲಿಯನ್ ಮಾರ್ಬಲ್ ಲಾಬಿ, ಇದು ಮಂಗಳೂರಿನಲ್ಲಿ ಮೊದಲನೆಯದು, ಇದು ಕಟ್ಟಡದ ಭವ್ಯ ನೋಟವನ್ನು ಹಚ್ಚಿಸುತ್ತದೆ. ಲಾಬಿಯು ಕಲಾತ್ಮಕ ಕೆಫೆಯನ್ನು ಸಹ ಹೊಂದಿದೆ. ಇದು ಕಟ್ಟಡದ ಮತ್ತೊಂದು ವಿಶಿಷ್ಟ ಲಕ್ಷಣವಾಗಿದೆ.

ಇನ್‌ಲ್ಯಾಂಡ್ ಬ್ಯುಸಿನೆಸ್ ಪಾರ್ಕ್‌ನಲ್ಲಿ ಗ್ರಾಹಕರು 345 ಚದರ ಅಡಿಯಿಂದ 1010 ಚದರ ಅಡಿಯವರೆಗಿನ ಕಚೇರಿ ಸ್ಥಳಗಳನ್ನು ಆಯ್ಕೆ ಮಾಡಬಹುದು. ದೊಡ್ಡ ಅವಶ್ಯಕತೆಗಳಿಗಾಗಿ ಪಕ್ಕದ ಸ್ಥಳಗಳನ್ನು ಸಂಯೋಚಿಸಲು ಅವಕಾಶವಿದೆ.

ಕಟ್ಟಡದ ಎರಡನೇ ಮತ್ತು ಮೂರನೇ ಮಹಡಿಯಲ್ಲಿ ವೈದ್ಯರ ಚಿಕಿತ್ಸಾಲಯಗಳು, ರೋಗ ನಿರ್ಣಯ ಕೇಂದ್ರಗಳು, ಲ್ಯಾಬ್‌ ಗಳು ಮತ್ತು ಔಷಧಾಲಯಗಳಂತಹ ವೈದ್ಯಕೀಯ ಕೇಂದ್ರಗಳಿಗೆ ವಿಶಾಲವಾದ ಕ್ಲಿನಿಕ್ ಆವರಣವನ್ನು ಸಾಕಷ್ಟು ಪಾರ್ಕಿಂಗ್ ನೊಂದಿಗೆ ಆಧುನಿಕ ಇನ್-ಲ್ಯಾಂಡ್ ಬ್ಯುಸಿನೆಸ್ ಪಾರ್ಕ್  ಈಡೇರಿಸುತ್ತಿದೆ.

38 ವರ್ಷಗಳ ವೈಭವದ ದಾಖಲೆಯೊಂದಿಗೆ, ಕರ್ನಾಟಕದ ಅಗ್ರಗಣ್ಯ ಬಿಲ್ಡರ್‌ಗಳು ಮತ್ತು ಡೆವಲಪ‌ರ್ ಗಳಲ್ಲಿ ಒಂದಾದ ಇನ್ ಲ್ಯಾಂಡ್ ಗ್ರೂಪ್ 47 ಉತ್ತಮ ಗುಣಮಟ್ಟದ ವಸತಿ ಮತ್ತು ವಾಣಿಜ್ಯ ಕಟ್ಟಡಗಳನ್ನು 2.50 ಮಿಲಿಯನ್ ಚದರ ಅಡಿಗಿಂತ ಹೆಚ್ಚಿನ ಮಹಡಿ ಗಳನ್ನು ನಿರ್ಮಿಸಿದೆ. ಮಂಗಳೂ ರಿನಲ್ಲಷ್ಟೇ ಅಲ್ಲದೇ ಬೆಂಗಳೂರು, ಪುತ್ತೂರು ಮತ್ತು ಉಳ್ಳಾಲದಲ್ಲಿ ಕೂಡಾ ಕಟ್ಟಡಗಳನ್ನು ನಿರ್ಮಿಸಿದೆ. ಇದು ಇನ್‌ಲ್ಯಾಂಡ್ ವಿಂಡ್ಸರ್, ಗಳಂತಹ ಹೆಗ್ಗುರುತು ಕಟ್ಟಡಗಳನ್ನು ನಿರ್ಮಿಸಿದ ವಿಶಿಷ್ಟತೆಯನ್ನು ಹೊಂದಿದೆ.  ವೃತ್ತಾಕಾರದ ವಸತಿ ಕಟ್ಟಡ ಇನ್‌ಲ್ಯಾಂಡ್ ಎಬೊನಿ ಶೈಲಿ ಮತ್ತು ವಿನ್ಯಾಸದಲ್ಲಿ ವಿಶಿಷ್ಟವಾಗಿದೆ ಎಂದು ಸಂಸ್ಥೆಯ ಪ್ರತಿನಿಧಿ ಉಲ್ಲಾಸ್ ಕದ್ರಿ ವಿವರಿಸಿದ್ದಾರೆ.ಹಿರಿಯ ಪತ್ರಕರ್ತ ವಿ.ಯು.ಜಾರ್ಜ್ ಶುಭ ಹಾರೈಸಿದರು.ಇದೇ ಸಂದರ್ಭದಲ್ಲಿ ವಾಣಿಜ್ಯ ಕಟ್ಟಡ ನಿರ್ಮಾಣಕ್ಕೆ ಸಹಕರಿಸಿದವರಿಗೆ ಅತಿಥಿಗಳ ಮೂಲಕ ಸ್ಮರಣಿಕೆ ನೀಡಿ ಗೌರವಿಸಲಾಯಿತು.ಇನ್ ಲ್ಯಾಂಡ್ ಬಿಲ್ಡರ್ ಸಮೂಹ ಸಂಸ್ಥೆ ಗಳ   ನಿರ್ದೇಶಕ ವಹಾಜ್ ಯೂಸುಫ್ ಸ್ವಾಗತಿಸಿದರು. ನಿರ್ದೇಶಕ ಮೆರಾಜ್ ಯೂಸುಫ್ ವಾದಿಸಿದರು. ರೋಶಲ್ ಫರ್ನಾಂಡೀಸ್ ಕಾರ್ಯಕ್ರಮ ನಿರೂಪಿಸಿದರು.

Category
ಕರಾವಳಿ ತರಂಗಿಣಿ