ಮಂಗಳೂರು: ಫೆಂಗಲ್ ಚಂಡಮಾರುತದ ಎಪೆಕ್ಟ್ ನಿಂದ ಧಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿರುಸಿನ ಮಳೆಯಾಗುತ್ತಿದ್ದು, ಅಪಾರ ನಷ್ಟವನ್ನು ತಂದೊಂಡಿದೆ. ಅವುಗಳಲ್ಲಿ ಕೇರಳ -ಮಹಾರಾಷ್ಟ್ರವನ್ನು ಸಂಪರ್ಕಿಸುವ ಮಂಗಳೂರು ಉಡುಪಿ ಸಂಪರ್ಕದ ರಾಷ್ಟ್ರೀಯ ಹೆದ್ದಾರಿ ಕೂಳೂರಿನ ರಸ್ತೆ ಬದಿ ಕುಸಿತವಾಗಿದೆ.
ಹೆದ್ದಾರಿ ಬದಿಯಲ್ಲಿ ಗೇಲ್ ಗ್ಯಾಸ್ ಕಂಪನಿಯಿಂದ ರಸ್ತೆ ಅಗೆದು ಇಡಲಾದ ಹೊಂಡದಲ್ಲಿ ನೀರು ತುಂಬಿ ರಸ್ತೆ ಬದಿ ಕುಸಿತವಾಗಿದೆ. ಗೇಲ್ ಕಂಪನಿಯವರ ಬೇಜಾಬ್ದಾರಿತನದಿಂದ ರಸ್ತೆ ಕುಸಿತ ಆಗಿದೆ ಎಂದು ಸ್ಥಳಿಯರು ಹೇಳುತ್ತಾರೆ.