image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕನ್ನಡ ರಾಜ್ಯೋತ್ಸವದಲ್ಲಿ ಪಂಜುರ್ಲಿ ದೈವಗಳು: ತುಳು‌ನಾಡ ಜನರ ಭಾವನೆಗೆ ಮತ್ತೊಮೆ‌ ಧಕ್ಕೆ..

ಕನ್ನಡ ರಾಜ್ಯೋತ್ಸವದಲ್ಲಿ ಪಂಜುರ್ಲಿ ದೈವಗಳು: ತುಳು‌ನಾಡ ಜನರ ಭಾವನೆಗೆ ಮತ್ತೊಮೆ‌ ಧಕ್ಕೆ..

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದ ಕಾಂತಾರ ಸಿನಿಮಾವು ತುಳುನಾಡಿನ ದೈವಾರಾಧನೆಯನ್ನು ದೇಶ- ವಿದೇಶದ ಜನರಿಗೆ ತಲುಪಿಸಿದ್ದು,  ಆ ಬಳಿಕ ಇದೇ ರೀತಿ ದೈವಗಳ ವೇಷ ಧರಿಸಿ ಅಧಿಕಪ್ರಸಂಗ  ಮಾಡುವವರ ಸಂಖ್ಯೆಯೂ ಹೆಚ್ಚಾಗಿದೆ ಎನ್ನುವ ವಾದ‌ ತುಳುವರಲ್ಲಿ ಇದೆ. . ಈ ಬಗ್ಗೆ ಕರಾವಳಿ ಜನ ಸಾಕಷ್ಟು ಹೋರಾಟ ನಡೆಸಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಇದೀಗ ಅಂಥದ್ದೇ ಒಂದು ಪ್ರಸಂಗ ಬೆಂಗಳೂರಿನಲ್ಲಿ ವರದಿಯಾಗಿದೆ.ನ.30 ರಂದು ಬೆಂಗಳೂರಿನ ಚಾಮರಾಜ ಪೇಟೆಯಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಕಾಂತಾರ ಚಿತ್ರದ ರೀತಿಯಲ್ಲಿ ಪಂಜುರ್ಲಿ ದೈವಗಳ ಪಾತ್ರಗಳನ್ನು ಸೃಷ್ಟಿಸಲಾಗಿದೆ. ಅಲ್ಲದೇ ಈ ದೈವಗಳು ಸಚಿವ ಜಮೀ‌ರ್ ಅಹ್ಮದ್ ಅವರನ್ನು ಅಪ್ಪಿಕೊಂಡು ಕೈಹಿಡಿದು ಮುಂದೆ ಸಾಗಿವೆ. ಈ ವೇಳೆ ಕಾಂತಾರ ಚಿತ್ರದಲ್ಲಿ ಬಳಸಿದ್ದ ಸಂಗೀತವನ್ನು ಕೂಡ ಬಳಸಲಾಗಿತ್ತು.

ಬಳಿಕ ಈ ಇಬ್ಬರು ಪಾತ್ರಧಾರಿಗಳು ಜಮೀರ್ ಅವರನ್ನು ಕೈಹಿಡಿದು ಮೇಲಕ್ಕೆತ್ತಿ ತಮ್ಮ ನಾಯಕ ಎಂದು ತೋರಿಸಿದ್ದಾರೆ. ಈ ವಿಡಿಯೋವನ್ನು ಜಮೀರ್ ಅಹಮದ್ ತನ್ನ ಎಕ್ಸ್ ಖಾತೆಯಲ್ಲಿ‌ ಹಂಚಿಕೊಂಡಿದ್ದು ತುಳುವರ ಕಣ್ಣು ಕೆಂಪಾಗಿಸಿದೆ.

Category
ಕರಾವಳಿ ತರಂಗಿಣಿ