image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕೊಂಡಜ್ಜಿ ಸಭಾಭವನದಲ್ಲಿ ನಡೆಯಲಿದೆ ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘ(ಕಾನ್ಸಿಡ) ವತಿಯಿಂದ ಪುಟ್ಟಣ್ಣ ಕಣಗಾಲ್ ಹುಟ್ಟುಹಬ್ಬ ಆಚರಣೆ

ಕೊಂಡಜ್ಜಿ ಸಭಾಭವನದಲ್ಲಿ ನಡೆಯಲಿದೆ ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘ(ಕಾನ್ಸಿಡ) ವತಿಯಿಂದ ಪುಟ್ಟಣ್ಣ ಕಣಗಾಲ್ ಹುಟ್ಟುಹಬ್ಬ ಆಚರಣೆ

ಭಾರತೀಯ ಚಿತ್ರರಂಗದ ದಿಗ್ಗಜರಾದ ಶ್ರೀಯುತ ಪುಟ್ಟಣ್ಣ ಕಣಗಾಲ್‌ರವರು, ಶ್ರೀಯುತ ಲಕ್ಷ್ಮೀನಾರಾಯಣ್‌ರವರು, ಶ್ರೀಯುತ ಸಿದ್ದಲಿಂಗಯ್ಯನವರು ಹಾಗೂ ಇನ್ನಿತರ ಹಿರಿಯ ನಿರ್ದೇಶಕರುಗಳು ಕಟ್ಟಿ ಬೆಳೆಸಿರುವ ಸಂಸ್ಥೆಯಾದ ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘ(ಕಾನ್ಸಿಡ)ದ ವತಿಯಿಂದ ಪುಟ್ಟಣ್ಣ ಕಣಗಾಲ್‌ ಅವರ ಹುಟ್ಟುಹಬ್ಬವನ್ನು

ಕೊಂಡಜ್ಜಿ ಸಭಾಭವನದಲ್ಲಿ ನಾಳೆ ಬೆಳಿಗ್ಗೆ 9-30ಕ್ಕೆ ಚಿತ್ರರಂಗದ ಗಣ್ಯರೊಂದಿಗೆ ನಮ್ಮ ಸಂಘವು ಆಚರಿಸುತ್ತಿದೆ. ವಿಶೇಷವಾಗಿ ಕರ್ನಾಟಕ ಸರಕಾರದ ಆರೋಗ್ಯ ಇಲಾಖೆಯ ಸಹಕಾರದೊಂದಿಗೆ ಸಂಘದ ಸದಸ್ಯರು ಮತ್ತು ಅವರ ಕುಟುಂಬ ವರ್ಗದವರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿದ್ದು, ಸದಸ್ಯರೆಲ್ಲರೂ ಕುಟುಂಬ ಸಮೇತರಾಗಿ ಭಾಗವಹಿಸಬೇಕೆಂದು ಪ್ರಕಟಣೆಯಲ್ಲಿ ವಿನಂತಿಸಲಾಗಿದೆ.

Category
ಕರಾವಳಿ ತರಂಗಿಣಿ