ಮಂಗಳೂರು : ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯವರು ಕಂಟೇನರ್‌ಗಳಲ್ಲಿ ಹಣ ತಂದಿದ್ದಾರೆ. ತೂಕದ ಮೂಲಕ ಖರ್ಚು ಮಾಡಲಾಗಿದೆ ಎಂದು ಎಂಎಲ್‌ಸಿ ಬಿ ಕೆ ಹರಿಪ್ರಸಾದ್ ಆರೋಪ ಮಾಡಿದ್ದಾರೆ. ನಗರದ ಕಾಂಗ್ರೆಸ್ ಭವನದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಮಹಾ ವಿಕಾಸ ಅಘಾಡಿ ಸೋಲಾಗಿದೆ. ಬಿಜೆಪಿಯಿಂದ ಮಹಾರಾಷ್ಟ್ರಕ್ಕೆ ಕಂಟೈನರ್‌ನಲ್ಲಿ ಹಣ ಬಂದಿದೆ. ಹಣ ಎಣಿಸುವ ಮಷಿನ್ ಬಿಟ್ಟು ತೂಕದ ಲೆಕ್ಕದಲ್ಲಿ ಖರ್ಚು ಮಾಡಿದ್ದಾರೆ ಎಂದು ಕಾಂಗ್ರೆಸ್ ಎಂಎಲ್‌ಸಿ ಹರಿಪ್ರಸಾದ್ ಆರೋಪ ಮಾಡಿದ್ದಾರೆ. ಇಲ್ಲವಾದರೆ ಮಹಾರಾಷ್ಟ್ರದಲ್ಲಿ ಗೆಲ್ಲಲು ಸಾದ್ಯವೇ ಇಲ್ಲ ಎಂದರು. ಕರ್ನಾಟಕದಲ್ಲಿ ನೀವು ಹಣ ಖರ್ಚು ಮಾಡಿಲ್ಲವೆ ಎನ್ನುವ ಪತ್ರಕರ್ತೆಯ ಪ್ರಶ್ನೆಗೆ "ಇಲ್ಲಿ ಯಾರು ಸಾಚಾ ಅಲ್ಲ. ನಾವು ಸತ್ಯ ಹರಿಶ್ಚಂದ್ರರೂ ಎನ್ನುವುದಿಲ್ಲ. ನಾವು ಎಲ್ಲಾ ವಿಷಯದಲ್ಲಿಯೂ ಅವರ ಸರಿ ಸಮಾನ ಪೈಪೋಟಿ ಕೊಟ್ಟಿದ್ದೇವೆ" ಎನ್ನುವ ಮೂಲಕ ಕಾಂಗ್ರೆಸ್ಸಿನಿಂದಲೂ ಹಣದ ಹೊಳೆ ಹರಿದಿದೆ ಎನ್ನುವುದನ್ನು ಪರೋಕ್ಷವಾಗಿ ಒಪ್ಪಿಕೊಂಡರು.
ಕರ್ನಾಟಕದಲ್ಲಿ ಎಲ್ಲೂ ಸಹ ಕೋಮು ಸೌಹಾರ್ದ ಕದಡಲು ಅವಕಾಶ ನೀಡಿಲ್ಲ. ನಮ್ಮ ಕೆಲಸದ ಮೂಲಕ ಕೂಡ ಅನ್ನ ಕೊಟ್ಟಿದ್ದೇವೆ. ಬಿಜೆಪಿ ಚುನಾವಣೆಗೂ ಮೊದಲು ಸುಳ್ಳು ವದಂತಿ ಹಬ್ಬಿಸಿದ್ದರು. ಗ್ಯಾರಂಟಿ, ವಕ್ಸ್ ವಿಚಾರ ಪ್ರಸ್ತಾಪಿಸಿ ಅಪಪ್ರಚಾರ ಮಾಡಿದರು. ಆದರೆ ಅದು ಕೆಲಸ ಮಾಡಲಿಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಕೆ ಹರೀಶ್ ಕುಮಾರ್, ಮಾಜಿ ಸಚಿವರು ಅಭಯಚಂದ್ರ ಜೈನ್, ಮಾಜಿ ಶಾಸಕರು ಜೆ ಆರ್ ಲೋಬೊ, ಕೆಪಿಸಿಸಿ ಪ್ರ. ಕಾರ್ಯದರ್ಶಿಗಳು ಮಿಥುನ್ ರೈ, ಪದ್ಮರಾಜ್ ಆರ್, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರು ಲುಕ್ಮನ್ ಬಂಟ್ವಾಳ್, ಮ ನ ಪಾ ಸದಸ್ಯರು ನವೀನ್ ಡಿ ಸೋಜಾ, ಜಿಲ್ಲಾ ಕಾಂಗ್ರೆಸ್ ಪ್ರ. ಕಾರ್ಯದರ್ಶಿಗಳು ವಿಕಾಸ್ ಶೆಟ್ಟಿ, ಟಿ ಕೆ ಸುದೀರ್, ಚಿತ್ತರಜoನ್ ಶೆಟ್ಟಿ, ಜಿತೇಂದ್ರ ಸುವರ್ಣ, ನಿತ್ಯಾನಂದ ಶೆಟ್ಟಿ, ಸಾರಿಕಾ ಪೂಜಾರಿ, ಸರೀಫ್ ದೇರಳಕಟ್ಟೆ, ಪದ್ಮನಾಬ ಅಮೀನ್ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು