image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ದೇಶದಲ್ಲಿ ನಕಾತರಾತ್ಮಕ ಚಿಂತನೆ, ಪರಿವಾರವಾದಕ್ಕೆ ಮತ್ತೆ ಸೋಲಾಗಿದೆ- ಪ್ರಧಾನಿ ಮೋದಿ

ದೇಶದಲ್ಲಿ ನಕಾತರಾತ್ಮಕ ಚಿಂತನೆ, ಪರಿವಾರವಾದಕ್ಕೆ ಮತ್ತೆ ಸೋಲಾಗಿದೆ- ಪ್ರಧಾನಿ ಮೋದಿ

ನವದೆಹಲಿ: ದೇಶದಲ್ಲಿ ನಕಾತರಾತ್ಮಕ ಚಿಂತನೆ, ಪರಿವಾರವಾದಕ್ಕೆ ಮತ್ತೆ ಸೋಲಾಗಿದೆ. ಜಾತಿ, ಧರ್ಮ, ಭಾಷೆಯ ಆಧಾರದ ಮೇಲೆ ಸಮಾಜವನ್ನು ವಿಘಟಿಸಲು ಯತ್ನಿಸುವ ಶಕ್ತಿಗಳನ್ನು ಜನರು ಹೊರದಬ್ಬಿದ್ದಾರೆ ಎಂಬುದಕ್ಕೆ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯೇ ಸಾಕ್ಷಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು. ಅವರು ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಶನಿವಾರ ಕಾರ್ಯಕರ್ತರನ್ನುದ್ದೇಶಿಸಿ  ಭಾಷಣ ಮಾಡಿ, 

ಮಹಾರಾಷ್ಟ್ರದಲ್ಲಿ ಮಹಾಯುತಿ ಗೆದ್ದಿದೆ. ವಿಕಸಿತ ಭಾರತದ ಸಂಕಲ್ಪವು ಬೆಳಗಿದೆ. ಕಾಂಗ್ರೆಸ್​​ ನೇತೃತ್ವದ ಇಂಡಿಯಾ ಮೈತ್ರಿಕೂಟಕ್ಕೆ ಕಪಾಳಮೋಕ್ಷವಾಗಿದೆ ಎಂದು ಮೋದಿ ಹೇಳಿದರು. ಮಹಾರಾಷ್ಟ್ರದಲ್ಲಿ ಎಲ್ಲ ದಾಖಲೆಗಳನ್ನು ಎನ್​ಡಿಎ ಮೈತ್ರಿ ಮುರಿದಿದೆ. ಕಳೆದ 50 ವರ್ಷಗಳಲ್ಲಿಯೇ ರಾಜ್ಯದಲ್ಲಿ ದೊಡ್ಡ ಗೆಲುವು ಸಾಧಿಸಿದೆ. ಸತತ ಮೂರನೇ ಬಾರಿಗೆ ಜನರು ಬಿಜೆಪಿ ಮೈತ್ರಿಗೆ ಗೆಲುವು ನೀಡಿದ್ದಾರೆ. ಬಿಜೆಪಿಯು ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಇದು ಐತಿಹಾಸಿಕ ಗೆಲುವಾಗಿದೆ. ಇದು ಅಭಿವೃದ್ಧಿಗೆ ಜನರು ಹಾಕಿದ ಜೈಕಾರವಾಗಿದೆ ಎಂದು ಬಣ್ಣಿಸಿದರು.

Category
ಕರಾವಳಿ ತರಂಗಿಣಿ